ಮನೆ ಆರೋಗ್ಯ ಅಳಲೆಕಾಯಿ

ಅಳಲೆಕಾಯಿ

0

 ಹೂ ಮತ್ತು ಕಾಯಿಗಳ ಕಾಲ :- ಮಾರ್ಚ್- ಮೇ ; ಸೆಪ್ಟೆಂಬರ್ – ಅಕ್ಟೋಬರ್.

Join Our Whatsapp Group

    ಅಳಲೇಕಾಯಿಯನ್ನು ಹಲವಾರು ವಿಧಗಳಾಗಿ ವರ್ಗಿಕರಣ ಮಾಡುತ್ತಾರೆ.ಪ್ರಸ್ತುತ ಗಾತ್ರದ ಆಧಾರದ ಮೇಲೆ ಗುರುತಿಸಲಾಗದ ನಾಲ್ಕು ಬಗೆಯ ಅಳಲೆ ಕಾಯಿಯ ಬಗ್ಗೆ ತಿಳಿಸಲಾಗಿದೆ.

1. ಸುರ್ವಾರಿ— ಗಾತ್ರದ ದೊಡ್ಡದು ಉದ್ದ 5 ಸೆಂ.ಮೀ ಬಣ್ಣದ ಹಳದಿ ಮಿಶ್ರಿತ ಕಂದು

2. ರಂಗಾರಿ — ಗಾತ್ರ ಚಿಕ್ಕದು,ಉದ್ದ 2.5cm

3. ಬಲಾ — ಮೇಲೆ ತಿಳಿಸಿರುವ ಎರಡು ಬಗೆಯ ಅಳಲೆ ಕಾಯಿಗಳಿಗಿಂತ ಚಿಕ್ಕದು ; ಹೊರ ಮೈ ಬಣ್ಣದ ಗಾಢ ಕಂದು ಅಥವಾ ಕಪ್ಪು.

4. ಜವಾ — ಅತ್ಯಂತ ಚಿಕ್ಕದು.

        ಆಕಾರದ ಆಧಾರದ ಮೇಲೆ ವಿಜಯ,ರೋಹಿಣಿ,ಪೂತನ,ಅಮೃತ,ಅಭಯ,ಜೀವಂತಿ, ಮತ್ತು ಚೇತಕಿ,ಎಂಬ ಏಳು ಬಗೆಯ ಅಳಲೆಕಾಯಿಯನ್ನು ಗುರುತಿಸಿದ್ದಾರೆ. ಬೆಳವಣಿಗೆಯ ಗಾತ್ರದ ಆಧಾರದ ಮೇಲೆ ಜೀರ,ಜವಿ, ಜಂಗಿ,ಚಿನಿ, ಅಸ್ಫರ್ ಮತ್ತು ಕಾಬುಲ್ ಎಂಬ ಆರು ಬಗೆಯ ಅಳಲೆಕಾಯಿಗಳ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖನವಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಎಳಸಾದ, ಬಲಿತ ಮತ್ತು ಪೂರ್ಣ ಬಲಿತ ಅಳಲೆಕಾಯಿಯೆಂದು ಆಯ್ಕೆ ಮಾಡಿ ಉಪಯೋಗಿಸಲಾಗುತ್ತಿದೆ.

     ಅಳಲೆಕಾಯಿಯ ಬಿರಿಯದ ಹಣ್ಣು, ವೈಜ್ಞಾನಿಕವಾಗಿ ಡ್ರೂಪ್ ಎಂದು ಕರೆಯುತ್ತಾರೆ.ಕಾಯಿಯ ಸಿಪ್ಪೆಯಲ್ಲಿ ಮೂರು ಪದರಗಳಿವೆ. ಮಾವಿನಹಣ್ಣಿನಲ್ಲಿರುವಂತೆ ಸಿಪ್ಪೆ ತಿರುಳು ಮತ್ತು ಗಟ್ಟಿಯಾದ ವಾಟೆ ಪ್ರತಿಯೊಂದು ಪದರದಲ್ಲೂ ವಿವಿಧ ಕಾಯಿಲೆಗಳಿಗೆ ಉಪಯುಕ್ತವಾಗಬಲ್ಲ ರಸಗಳಿವೆ.

 ಅಳಲೇಕಾಯಿಯ ಭಾಗಗಳು —ರಸಗಳು

 ಅಳಲೇಕಾಯಿಯ ಸಿಪ್ಪೆ — ಕಟು ರಸ (ಕಾರ)

 ಸಿಪ್ಪೆಯ ಕೆಳ ಭಾಗದ ತಿರುಳು —  ತಿಕ್ತ ರಸ (ಕಹಿ)

 ನಾರಿನಿಂದ ಕೂಡಿದ ಮಧ್ಯದ ತಿರುಳು — ಆಮ್ಲರಸ (ಹುಳಿ)

 ಗಟ್ಟಿಯಾದ ಆಸ್ಥಿ ಭಾಗ —  ಕಷಾಯ ರಸ (ಒಗರು)

 ಬೀಜ — ಮಧುರ ರಸ (ಸಹಿ)

    ಆಯುರ್ವೇದ ಗ್ರಂಥದಲ್ಲಿ ಒಂದಾದ ಬಿಹರ್ತ್ರೇಯ ಗ್ರಂಥದಲ್ಲಿ ಅಳಲೆಕಾಯಿಯನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗಿಸುವ ರೀತಿಯ ಬಗ್ಗೆ ವಿವರಿಸಲಾಗಿದೆ. ಅಭಯಾರಿಷ್ಟ ಮತ್ತು ಬಲಹರಿತಕಿಯನ್ನು ತಯಾರಿಸಲು ಹಣ್ಣಿನ  ಕವಚ (ಬೀಜವನ್ನು ಹೊತ್ತು ಪಡಿಸಿ) ಅಸ್ಮರಿನಾಸಕ ಪಾನಕ ತಯಾರಿಸಲು ಬೀಜವನ್ನು ಮಾತ್ರ, ಅಗಸ್ತ್ಯ ಹರೀತಕಿ, ದಂತಿ ಹರೀತಕಿ ಮತ್ತು ಹರೀತಕಿ ಆಸವ ಮುಂತಾದವುಗಳನ್ನು ತಯಾರಿಸುವಾಗ ಬೀಜ ಸಹಿತ ಪೂರ್ಣ ಅಳಲೆಕಾಯಿಯನ್ನು ಉಪಯೋಗಿಸಬೇಕೆಂದು ತಿಳಿಸಲಾಗಿದೆ. ಇತ್ತೀಚಿನ ಆಧುನಿಕ ಔಷಧಿ  ತಯಾರಿಕಾ ಪದ್ಧತಿಯಲ್ಲಿ ಬೀಜ ತೆಗೆದ ಅಳಲೆಕಾಯಿಯನ್ನು ಚೆನ್ನಾಗಿ ಉಪಯೋಗಿಸಲಾಗುತ್ತಿದೆ ಇದರಿಂದ ಅಳಲೆಕಾಯಿಯ ಪೂರ್ಣ ಪ್ರಯೋಜನ ಪಡೆಯದಂತಾಗುವುದಿಲ್ಲ.ಪೂರ್ಣ ಪ್ರಯೋಜನ ಪಡೆಯಲು ಬೀಜ ಸಹಿತ ಅಳಲೇ ಕಾಯಿಯನ್ನು ಉಪಯೋಗಿಸಬೇಕು.

     ಕರ್ಕಟಕ ಶೃಂಗಿ ಎಂಬುದು ಆಯುರ್ವೇದದ ಔಷಧೀಯ ದ್ರವ್ಯಗಳಲ್ಲಿ ಒಂದು. ಈ ಔಷಧಿಯ ದ್ರವ್ಯವನ್ನು ಆಸ್ತಮಾ, ಕ್ಷಯ ರೋಗ,ಜ್ವರ, ಭೇದಿ, ರಕ್ತಭೇದಿ, ಪಿತ್ತಜನಾಂಗಕ್ಕೆ ಸಂಬಂಧಿಸಿದ ಹಾಗೂ ಹೃದಯ ಸಂಬಂಧದ  ಕಾಯಿಲೆಗಳ ಚಿಕಿತ್ಸೆಗೆ ಉಪಯೋಗಿಸಲಾಗುತ್ತಿದೆ. ಈ ಔಷಧೀಯ ದ್ರವ್ಯಯುಕ್ತ ಔಷಧಿಗಳು ಕರ್ಕಟಕವಾದಿ ಚೂರ್ಣ, ಬಲಭದ್ರ ಚೂರ್ಣ,ಶಿೃಂಗಾದಿ ಕರಿಸಾಲೈ  ಲೇಹ್ಯಂ ಔಷಧೀಯ   ಅಂಗಡಿಗಳಲ್ಲಿ ದೊರೆಯುತ್ತವೆ. ಈ ಔಷಧಿ ದ್ರವ್ಯದ ಸಸ್ಯಮೂಲ ಇದು ಗೋಡಂಬಿ ಕುಟುಂಬಕ್ಕೆ ಸೇರುತ್ತದೆ. ಈ ಸತ್ಯದ ಎಲೆಗಳಲ್ಲಿ ಕೀಟಗಳು ಉಂಟು ಮಾಡುವ ಗಂಟನ್ನು ಕರ್ಕಟಕ ಶಿೃಂಗಿ ಎಂದು ಉಪಯೋಗಿಸಲಾಗುತ್ತಿದೆ.

    ಅಳಲೆಕಾಯಿ ಮರದ ಎಲೆಗಳಲ್ಲಿ ಕೀಟಗಳು ಉಂಟು ಮಾಡುವ ಗಂಟನ್ನು ಸಹ ಕರ್ಕಾಟಕ ಶಿೃಂಗಿ ದ್ರವ್ಯಕ್ಕೆ ಪರ್ಯಯ ಎಂದು ಬಳಸಲಾಗುತ್ತಿದೆ.

     ಅಳಲೇಕಾಯಿಂದ ಹಲವಾರು ರಾಸಾಯನಿಕ ಘಟಕಗಳನ್ನು ಬೇರ್ಪಡಿಸಿ ಗುರುತಿಸಲಾಗಿದೆ.ಅಂತಹ ಹಲವು ರಾಸಾಯನಿಕ ಘಟಕಗಳಲ್ಲಿ ಹಾಯ್ದು ಕೆಲವು ರಾಸಾಯನಿಕ ಘಟಕಗಳ ಹೆಸರು ಮತ್ತು ಸಂಶೋಧನೆಯಿಂದ ಧೃಡ ಪಟ್ಟ ಅವುಗಳ ಔಷಧೀಯ ಉಪಯೋಗಗಳನ್ನು ಪಟ್ಟಿಯನ್ನು ಕೊಟ್ಟಿದೆ.