ಮನೆ ಆರೋಗ್ಯ ಅಳಲೇಕಾಯಿ

ಅಳಲೇಕಾಯಿ

0

 ಕೊಲೆಸ್ಟ್ರಾಲ ಅಂಶವನ್ನು ಕಡಿಮೆ ಮಾಡುವ ಗುಣ :-

Join Our Whatsapp Group

        ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಅಂಶವಿರುವ ಆಹಾರವನ್ನು ಇಲಿಗಳಿಗೆ ಉಣಬಡಿಸಿ ರಕ್ತದಲ್ಲಿ ಕೊಲೆಸ್ಟಿರಾಲ್ ಅಂಸ ಹೆಚ್ಚಾಗುವಂತೆ ಮಾಡಲಾಯಿತು. ಅಂತಹ ಇಲಿಗಳಿಗೆ ಅಳಲೆಕಾಯಿ ಚೂರ್ಣವನ್ನು 100 ದಿನಗಳ ದಿನಗಳವರೆಗೆ ಆಹಾರದೊಡನೆ ಸೇವಿಸುವಂತೆ ಮಾಡಲಾಯಿತು.ಅವಧಿಯ ನಂತರ ಪರೀಕ್ಷಿಸಿದಾಗ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿರುವುದು ದೃಢಪಟ್ಟಿದೆ.

ಗಾಯವಾಸಿ ಮಾಡುವ ಗುಣ :-

1. ಮಧ್ಯ ಸಾರ ಉಪಯೋಗಿಸಿ ಅಳಲೆಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವವನ್ನು ಆಯಿಂಟ್ ಮೆಂಟ್ ರೂಪದಲ್ಲಿ ರೂಪದಲ್ಲಿ ಇಲಿಗಳ ಚರ್ಮದ ಮೇಲೆ ಉಂಟುಮಾಡಿದ ಗಾಯದ ಮೇಲೆ ಲೇಪಿಸಿ ಪರೀಕ್ಷಿಸಿದಾಗ ಸತ್ವಕ್ಕೆ ಗಾಯ ವಾಸಿ ಮಾಡುವ ಗುಣವಿದೆ ಯೆಂದು ಕಂಡು ಬಂದಿದೆ. ಸತ್ವಕ್ಕೆ ಬ್ಯಾಕ್ಟೀರಿಯಾ ಗಳನ್ನು ನಾಶಪಡಿಸುವ ಗುಣವಿರುವುದು,  ಗಾಯ ವಾಸಿ ಮಾಡುವ ಪ್ರತಿಕ್ರಿಯೆ ಪೂರಕಾಂಶವಾಗಿದೆ.

2. ಎಥನಾಲ್ ದ್ರಾವಣ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವಕ್ಕೆ ಗಾಯ ಮತ್ತು ಸುಟ್ಟ ಗಾಯವನ್ನು ವಾಸಿ ಮಾಡುವ ಗುಣವಿದೆಯೆಂದು, ವರದಿಯಾಗಿದೆ ಸತ್ವದ ಈ ಗುಣ ಸಿಲ್ವರ್ ಸಲ್ಫ ಡಯಜಿನ್ ಅಯಿಂಟ್ ಮೆಂಟ್ ನಷ್ಟೇ ಪರಿಣಾಮಕಾರಿಯೆನ್ನಲಾಗಿದೆ

3 ಬಿಸಿನೀರು ಉಪಯೋಗಿಸಿ ಎಳೆ ಅರಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಗಾಯವಾಸಿ ಮಾಡುವ ಗುಣವಿದೆಯೆಂದು ತಿಳಿದುಬಂದಿದೆ. ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಟ್ಯಾನಿನ್  ಘಟಕ ಮತ್ತು ಸೂಕ್ಷ್ಮಾಣು ಜೀವಿನಾಸಕ ಗುಣ ಕಾರಣವೆನ್ನಲಾಗಿದೆ

4. ಅಳಲೇಕಾಯಿ ಚೂರ್ಣವನ್ನು ನೀರಿನಲ್ಲಿ ಕಲಸಿ ಅಥವಾ ಕಾಯಿಯನ್ನು ತಯ್ದು ತಯಾರಿಸಿದ ಗಂಧವನ್ನು ಗಾಯದ ಮೇಲೆ ಲೇಪಿಸುವುದರಿಂದಲೂ ಗಾಯ ಬೇಗ ವಾಸಿಯಾಗುತ್ತದೆ.

5. ಮಧುಮೇಹಿ ಇಲಿಗಳ ಗಾಯವನ್ನು ವಾಸಿ ಮಾಡುವ ಸಾಮರ್ಥ್ಯ ಅಳಲೆಕಾಯಿಗೆ ಇದೆ.

6. ಹಳಲೇಕಾಯಿಯಿಂದ ಟ್ಯಾನಿಸ್ ಘಟಕವನ್ನು ಬೇರ್ಪಡಿಸಿ ಗಾಯದ ಮೇಲೆ ಲೇಪಿಸಿದಾಗಲೂ ಗಾಯ ಬೇಗ ವಾಸಿಯಾಗುತ್ತದೆ ಎಂದು ಕಂಡು ಬಂದಿದೆ.

7. ಪ್ರಯೋಗ ಶಾಲೆಯಲ್ಲಿ ಚರ್ಮದ ಕೋಶಗಳ ಮೇಲೆ ನಡೆಸಿದ ಪ್ರಯೋಗದ ಪ್ರಕಾರ.ವಿವಿಧ ದ್ರಾವಣ ಮತ್ತು ನೀರು ಉಪಯೋಗಿಸಿ ತಯಾರಿಸಿದ ಅಳಲೆಕಾಯಿ ಸತ್ವಕ್ಕೆ ಗಾಯ ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ.

 ನರಮಂಡಲವನ್ನು ಕಾಪಾಡುವ ಗುಣ :

     ನೀರು,ಮದ್ಯಸಾರ ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ  ಅಳಲೆಕಾಯಿ ಮತ್ತು ಅಳಲೇಕಾಯಿಯ ಬೀಜದಿಂದ ತಯಾರಿಸಿದ ಸತ್ವಕ್ಕೆ ನರಮಂಡಲವನ್ನು ಕಾಪಾಡುವ ಗುಣವಿದೆಯೆಂದು, ಜೀವಕೋಶದ ಮೇಲೆ ಮತ್ತು ಇಲಿಗಳ ಮೇಲೆ ಮತ್ತು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಚೆಬುಲಾಜಿಕ್ ಮತ್ತು ಎಲ್ಲಾಜಿಕ್ ಆಮ್ಲಗಳು ಕಾರಣ ಈ ಸಂಶೋಧನೆಯಿಂದ ಅಳಲೆಕಾಯಿ ಮುಂದಿನ ದಿನಗಳಲ್ಲಿ ಮೆರವಿನ ರೋಗ ಮತ್ತು ಕಂಪವಾತ ರೋಗದ ಚಿಕಿತ್ಸೆ ಔಷಧಿ ಯಾಗುವ ಗುಣ ಲಕ್ಷಣ ಹೊಂದಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ನೋವು ಅರಿವಾಗದಂತೆ ಮಾಡುವ ಗುಣ :

    ಪೆಟ್ರೋಲಿಯಂ ಈಥರ್, ಕ್ಲೋರೋಫಾರಂ ಎಥನಾಲ್ ಮತ್ತು ನೀರು ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷೆ ಒಳಪಡಿಸಿದಾಗ ಎಥಾಲ್ ದ್ರಾವಣ ಉಪಯೋಗಿಸಿ ತಯಾರಿಸಿದ ಸತ್ವ ಎಲ್ಲಾ ಪ್ರಮಾಣದಲ್ಲೂ ಪರಿಣಾಮಕಾರಿಯಾದ ರೀತಿಯಲ್ಲಿ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆಯೆಂದು ವರದಿಯಾಗಿದೆ 15 ದಿನಗಳವರೆಗೆ ಸೇವಿಸಲು ಕೊಟ್ಟ ಪರೀಕ್ಷಿಸಿದಾಗ ಬಹಳ ಕಾಲದಿಂದ ಇರುವ ನೋವಿನ ನಿವಾರಣೆಗೂ ಉಪಯುಕ್ತವೆಂದು ಕಂಡುಬಂದಿದೆ.