ಮನೆ ಆರೋಗ್ಯ ಅಳಲೇಕಾಯಿ

ಅಳಲೇಕಾಯಿ

0

 ಮಧುಮೇಹವನ್ನು ನಿಯಂತ್ರಣದಲ್ಲಿರುವ ಗುಣ

Join Our Whatsapp Group

    ನೀರು ಮತ್ತು ಹಲವು ಬಗೆಯ ದ್ರಾವಣಗಳನ್ನು ಉಪಯೋಗಿಸಿ ಅಳಲೇಕಾಯಿಯಿಂದ ತಯಾರಿಸಿದ ಸತ್ವವನ್ನು ಇಲಿಗಳ ಪ್ರತಿ ಕಿಲೋ ಗ್ರಾಂ ದೇಹದ ತೂಕಕ್ಕೆ 100 ಮಿಲಿ ಗ್ರಾಂ ಪ್ರಮಾಣದಂತೆ,ಸ್ಟ್ರೆಪ್ಟೊಜೊಟೊಸಿನ್  ರಾಸಾಯನಿಕವನ್ನು ಕೊಟ್ಟು ಮಧುಮೇಹ  ಉಂಟು ಮಾಡಿದ ಇಲಿಗಳಿಗೆ ಎರಡು ವಾರದಿಂದ ಮೂರು ತಿಂಗಳು,ದಿನಕ್ಕೊಮ್ಮೆ ಸೇವಿಸಲು ಕೊಡಲಾಯಿತು. ಅವಧಿಯ ನಂತರ ಇಲಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ,ಸತ್ವ  ಸೇವಿಸಿದ್ಮ ಇಲಿಗಳಲ್ಲಿ,ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಡಿಮೆಯಾಗಿ ಮಧುಮೇಹ ನಿಯಂತ್ರಣಕ್ಕೆ ಬಂದ ಬಗೆ ವರದಿಯಾಗಿದೆ.ಇದರ ಜೊತೆಗೆ ಸ್ವತಕ್ಕೆ ಮಧುಮೇಹದಿಂದ ದೇಹದ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮವನ್ನು ಸಂಪರ್ಕವಾಗಿ ನಿರ್ವಹಣೆ ಮಾಡುವ ಗುಣವೂ ಇದೆಯೆಂದು ತಿಳಿದುಬಂದಿದೆ.ಆದರೂ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಉನ್ನತ ಮಟ್ಟದ ಸಂಶೋಧನೆ ಅಗತ್ಯವಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ.

       ಅಳಲೇಕಾಯಿಯಿಂದ ಚೆಬು ಲಾಜಿಕ್ ಆಮ್ಲವನ್ನು   ಒಂದು  ಬೇರ್ಪಡಿಸಿ ಪ್ರಯೋಗ ಶಾಲೆಯಲ್ಲಿ ಮಧುಮೇಹ ಉಂಟು ಮಾಡಿದ ಇಲಿಗಳ ಪ್ರತಿ ಕಿಲೋ ಗ್ರಾಂ ದೇಹದ ತೂಕಕ್ಕೆ 100 ಮಿ. ಗ್ರಾಂ ಪ್ರಮಾಣದ ಚೆಬುಲಾಜಿಕ್ ಆಮ್ಲವನ್ನು ಸೇರಿಸಿ ಸೇವಿಸಲು ಕೊಡಲಾಯಿತು ಆಹಾರ ಸೇವಿಸಿದ ನಂತರ ಅಂತಹ ಇಲಿಗಳ  ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಪರೀಕ್ಷಿಸಿದಾಗ ಶೇಕಡಾ 11.1 ರಷ್ಟು   ಕಡಿಮೆಯಾಗಿತ್ತೆಂದು ತಿಳಿದುಬಂದಿದೆ.ಈ ಪ್ರಯೋಗದಿಂದ ಚೆಬುಲಾಜಿಕ್ ಆಮ್ಲ ಕೈ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ. ಈ ಆಮ್ಲವನ್ನು ಮಧುಮೇಹಕ್ಕೆ ಔಷಧಿಯಾಗಿ ಉಪಯೋಗಿಸುವ ಮುನ್ನ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

       ಕ್ಲೋರೋಫಾರಂ ದ್ರಾವಣ ಉಪಯೋಗಿಸಿ ಅಳಲೆಕಾಯಿಯ ಬೀಜದಿಂದ ತಯಾರಿಸಿದ ಸತ್ವಕ್ಕೆ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಮೂತ್ರಪಿಂಡವನ್ನು ಕಾಪಾಡುವ ಗುಣವಿದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.