ಮನೆ ಆರೋಗ್ಯ ಅಳಲೇಕಾಯಿ

ಅಳಲೇಕಾಯಿ

0

 ಮರೆವಿನ ಕಾಯಿಲೆ

   ★ಮಿಥನಾಲ್ ಮತ್ತು ಈಥೈಲ್ ಅಸಿಟೇಟ್ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಮರೆವಿನ ಕಾಯಿಲೆಯ ಚಿಕಿತ್ಸೆ ಉಪಯುಕ್ತವೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ

Join Our Whatsapp Group

     ★ಹಲವಾರು ಸಂಶೋಧನಾ ಪ್ರಬಂಧಗಳನ್ನು ಪರಾಮರ್ಶಿಸಿ ತಯಾರಿಸಿದ ಸಂಶೋಧನಾ ಲೇಖನದ ಪ್ರಕಾರ ಅಳಲೇಕಾಯಿ ಸತ್ವಕ್ಕೆ ಮರೆವಿನ ಕಾಯಿಲೆಯನ್ನು ವಾಸಿ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ. ಅಳಲೆಕಾಯಿಯ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ರಾಸಾಯನಿಕ ಘಟಕಗಳು ಆೄಂಟಿಆಕ್ಸಿಡೆಂಟ್ ಗುಣ ಮತ್ತು ಉರಿಯೂತ ಕಡಿಮೆ ಮಾಡುವ ಗುಣ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

       ★ಸ್ಕೊಪೊಲ್ ಅಮೈನ್ ಉಂಟು ಮಾಡುವ ಮೆರವಿನ ರೋಗ ವನ್ನು ವಾಸಿ ಮಾಡುವ ಗುಣ ಒಳಲೆಕಾಯಿಯ ಸತ್ವಕ್ಕೆ (100,200 ಮಿ. ಗ್ರಾಂ ಕಿಲೊ ಗ್ರಾಂ ದೇಹದ ತೂಕ) ಇದೆ ಎಂದು 14 ದಿನಗಳವರೆಗೆ ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ತಿಳಿದು ಬಂದಿದೆ.

 ಮಲಬದ್ಧತೆಯನ್ನು ನಿವಾರಣೆ ಮಾಡುವ ಗುಣ :

 ನೀರು ಉಪಯೋಗಿಸಿ ಅಳಲೇಕಾಯಿ ಬೀಜದಿಂದ ತಯಾರಿಸಿದ ಸತ್ವವನ್ನು ಪ್ರಯೋಗ ಶಾಲೆಯಲ್ಲಿ ಇಲಿಗಳಿಂದ ಬೇರ್ಪಡಿಸಿದ ಕರುಳಿನ ಮೇಲೆ ಮತ್ತು ಇಲಿಗಳಿಗೆ ಸೇವಿಸಲು ಕೊಟ್ಟ ನಡೆಸಿದ ಪ್ರಯೋಗದಿಂದ ಸತ್ವಕ್ಕೆ ಮಲಬದ್ಧತೆಯನ್ನು ನಿವಾರಣೆ ಮಾಡುವ ಗುಣವಿದೆಯೆಂದು ವರದಿಯಾಗಿದೆ.

 ಮೂರ್ಛೆ ರೋಗವನ್ನು ವಾಸಿ ಮಾಡುವ ಗುಣ :

 ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಅಳಲೇಕಾಯಿಯಿಂದ ತಯಾರಿಸಿದ ಸತ್ವಕ್ಕೆ ರಾಸಾಯನಿಕ ಉಂಟು ಮಾಡಿ ಮೂರ್ಛೆರೋಗವನ್ನು ವಾಸಿ ಮಾಡುವ ಗುಣವಿದೆ.

 ಮೂತ್ರಪಿಂಡದ ಕಲ್ಲನ್ನು ಕರಗಿಸುವ ಗುಣ.:

 ಮೂತ್ರಪಿಂಡ ಮತ್ತು ಮೂತ್ರಕೋಶದಲ್ಲಿ ಮೂತ್ರ ಸುಗಮವಾಗಿ ಸಂಚಾರವಾಗದೆ ತಡೆಯುಂಟಾದಾಗ ತ್ಯಾಜ್ಯ ವಸ್ತುಗಳ ಒಂದೇ ಕಡೆ ಬಹಳ ಕಾಲ ನಿಂತಾಗ ಅವು ಗಟ್ಟಿಯಾಗಿ ಕಲ್ಲುಗಳುಟಾಗುತ್ತವೆ. ಇಂತಹ ತ್ಯಾಜ್ಯ ವಸ್ತುಗಳಲ್ಲಿ ಕ್ಯಾಲ್ಸಿಯಂ ಆಕ್ಸಿಲೇಟ್ ಲವಣ ಮುಖ್ಯ ಪಾತ್ರ ವಹಿಸುತ್ತದೆ.ಈ ಕಲ್ಲುಗಳು ಮೂತ್ರಪಿಂಜದಲ್ಲಿ ಹೆಚ್ಚಾಗಿ ಸಂಗ್ರಹವಾದಂತೆ ಮತ್ತು ಬೆಳೆದಂತೆ, ಸುಗಮ ಮೂತ್ರ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದರಿಂದಾಗಿ ತಡೆಮೂತ್ರ, ಹೊಟ್ಟೆ ಬೆನ್ನು ನೋವು ಇನ್ನು ಮುಂತಾದ ತೊಂದರೆಗಳುಂಟಾಗಿ ಆರೋಗ್ಯ ಹದಗೆಡುತ್ತದೆ. ನೀರು ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ತತ್ವಕ್ಕೆ ಮೂತ್ರಪಿಂಡದ ಕಲ್ಲುನ್ನು ಕರಗಿಸುವ ಮತ್ತು ಕಲ್ಲುಗಳು ಉತ್ಪತ್ತಿಯಾಗದಂತೆ ತಡೆಯುಂಟು ಮಾಡುವ ಸಾಮರ್ಥ್ಯವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.