ಆಲ್ಕೋಹಾಲ್ ನಿದ್ರೆ ಬರಿಸುತ್ತದೆ
“ಬಹಳ ದಿವಸಗಳು ನಿದ್ರೆ ಬರದೆ ಒದ್ದಾಡಿಬಿಟ್ಟಿ ಕೊನೆಗೆ ನನ್ನ ಒಟ್ಟ ಸ್ನೇಹಿತನ ಸಲಹೆಯಂತೆ ಮಲಗುವ ಮೊದಲು ಸ್ವಲ್ಪ ಬ್ಯಾಂದಿ/ಐಷಿಯನ್ನು ತೆಗೆದು ಕೊಳ್ಳಲು ಶುರು ಮಾಡಿದ ಮೇಲೆ ನಿದ್ರೆಯ ಸಮಸ್ಯೆ ಇಲ್ಲ. ಚೆನ್ನಾಗಿ ದಿ ಮಾಡುತ್ತೇನೆ” ಎನ್ನುವವರ ಸಂಖ್ಯೆ ಕಡಿಮೆ ಏನಲ್ಲ!
“ಸ್ವಾಮಿ ನಾವು ಕೂಲಿ ಮಾಡುವವರು, ಮೈ ಮುರಿದು ದುಡಿಯುತ್ತೇವೆ. ಆಯಾಸ, ಮೈ ಕೈ ನೋವು, ಸೆಳೆತದಿಂದ ನಿದ್ರೆ ಹತ್ತುವುದಿಲ್ಲ. ಒಂದು ಪಾಕೆಟ್ ಆರ್ಯಾಕು ಅಥವಾ ಒಂದು ಶೀಷೆ ಹುಳಿ ಹೆಂಡವನ್ನು ಕುಡಿದು ಬಿಟ್ಟರೆ, ಬೆಳಿಗ್ಗೆ ಕೋಳಿ ಕೂಗುವವರೆಗೆ ಗಡದ್ದಾಗಿ, ಮಲಗಿ ನಿದ್ದೆ ಮಾಡುತ್ತೇವೆ. ನೀವು ಕುಡಿಯಬೇಡಿ ಎಂದರೆ ಹೇಗೆ ಸ್ವಾಮಿ” ಎನ್ನುವ ಕೂಲಿಕಾರರು, ಕಾರ್ಮಿಕರು, ಶ್ರಮಜೀವಿಗಳು ಎಲ್ಲೆಲ್ಲೂ ಇದ್ದಾರೆ.
ಆಲ್ನೋಹಾಲ್ ಕೇಂದ್ರ ನರಮಂಡಲವನ್ನು ಕುಗ್ಗಿಸುವುದರಿಂದ, ವ್ಯಕ್ತಿ ಜಾಗೃತಾ ವ್ಯವಸ್ಥೆಯಿಂದ ನಿದ್ರಾಸ್ಥಿತಿಯನ್ನು ತಲುಪುತ್ತಾನೆ. ಹೆಚ್ಚು ಆಲ್ಲೋಹಾಲ್ ಸೇವನೆಯಿಂದ ನಿದ್ರೆ ಬಂದರೂ, ಅದು ಮೈಮನಸ್ಸುಗಳಿಗೆ ಉಲ್ಲಾಸವನ್ನು ಸುಖವನ್ನು ತರುವುದಿಲ್ಲ. ಬೆಳಿಗ್ಗೆ ಎದ್ದಾಗ ಲವಲವಿಕೆಯ ಬದಲು, ಮಂಕುತನ, ಜಡತ್ವ ಇರಬಹುದು. ಅಥವಾ ತಲೆಶೂಲೆ, ವಾಕರಿಕೆ ಆದರೂ ಆಶ್ಚದ್ಯವಿಲ್ಲ. ಅಲ್ಲದೆ ನಿರೀಕ್ಷಿತ ಅವಧಿಯ ನಿದ್ದೆ ಮಾಡಲು, ಬೇಕಾಗುವ ಆಲೋಹಾಲ್ ಪ್ರಮಾಣ ದಿನ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಆದರಿಂದಾಗಿ ನಿದ್ರೆ ಮಾಡಲು ಆಲೋಹಾಲ್‌ನ ಸಹಾಯ ಪಡೆಯುವುದು, ಅಪಾಯಕ್ಕೆ ಆಹ್ವಾನ ಕೊಟ್ಟಂತೆ
ಆಲ್ಕೋಹಾಲ್ ಮೈಕೈನೋವನ್ನು, ಗಾಯದ ನೋವನ್ನು ಮರೆಸುತ್ತದೆ
ಹೆಚ್ಚು ಕೆಲಸ ಮಾಡಿ, ದಣಿದು, ಮೈಕೈ ನೋಯುತ್ತಿದೆಯೇ? ಬಿದ್ದು ಏಟಾಗಿ ಗಾಯವಾಗಿ, ತಡೆಯಲಾಗದ ನೋವೇ? ಬ್ರಾಂದಿ (ಅಥವಾ ಇನ್ಯಾವುದೇ ಮಾದಕ ಪಾನೀಯ) ಸೇವಿಸಿ. ನೋವು ಮರೆಯಾಗುತ್ತದೆ ಎಂದು ಜನ ಹೇಳುತ್ತಾರೆ. ಹಾಗೇ ತಾವು ಮದ್ಯ ಸೇವಿಸಲು ಇದೇ ಕಾರಣವನ್ನು ಕೊಡುತ್ತಾರೆ. ಮದ್ಯಸಾರ, ಮಿದುಳಿನ ಸಂವೇದನಾ ಭಾಗವನ್ನು ನಿಷ್ಕ್ರಿಯಗೊಳಿಸಿ ನೋವು ವ್ಯಕ್ತಿಯ ಅರಿವಿಗೆ ಬಾರದಂತೆ ಮಾಡುವುದೇನೋ ನಿಜ. ಆದರೆ ಇದು ಒಳ್ಳೆಯ ಪರಿಹಾರವೇ? ಬೆಂಕಿಯನ್ನು ಕಂಡು, ಬಟ್ಟೆಯ ತೆರೆ ಎಳೆದು ಸಮಾಧಾನ ಪಟ್ಟುಕೊಂಡ ಕಥೆಯಾಗುತ್ತದೆ. ಆಗ ನಮಗೆ ಬೆಂಕಿ ಕಾಣುವುದಿಲ್ಲ. ಆದರೆ ಬೆಂಕಿ ಆರಿಲ್ಲ. ಅದು ಉರಿದು ಎಲ್ಲವನ್ನೂ ಸುಡುತ್ತದೆ. ಹಾಗೇ ಮದ್ಯ ಸೇವಿಸಿ, ಶರೀರದ ನೋವನ್ನು ಮರೆಯುವುದು ಉಚಿತವಲ್ಲ. ಆಲ್ಲೋಹಾಲ್‌ಗಿಂತ ಹೆಚ್ಚು ಸುರಕ್ಷಿತ ನೋವು ನಿವಾರಕಗಳನ್ನು ವೈದ್ಯರು ಕೊಡಬಲ್ಲರು. ಜೊತೆಗೆ ದುಡಿತದಿಂದ ದಣಿದ ದೇಹಕ್ಕೆ ವಿರಾಮವು ಹಲವು ಆರೋಗ್ಯಕರ ವಿಧಾನಗಳಿಂದ ಸಿಗುತ್ತದೆ. ದುಡಿದು ದಣಿದಾಗ ಸಕ್ಕರೆ ಹಾಕಿದ ಹಣ್ಣಿನ ಈ. ಹಾಲು ಚೇತೋಹಾರಿ. ಪ್ರೀತಿಸುವ ಮಡದಿ ಮಕ್ಕಳೊಂದಿಗೆ ಕುಳಿತು ಮಾತನಾಡುವುದು, ಒಳಾಂಗಣ ಆಟ (ಕೇರಂ, ಚೌಕಾಬಾರ ಇತ್ಯಾದಿ) ಆಡುವುದು ಉಲ್ಲಾಸಕಾರಿ, ಇಷ್ಟ ದೇವರ ಧ್ಯಾನ, ದೇವಸ್ಥಾನಕ್ಕೆ ಭೇಟಿ. ನೆಮ್ಮದಿ ನೀಡಬಲ್ಲದು.ಹಿತವಾದ ಸಂಗೀತ. ಮನಸ್ಸಿಗೆ ಮುದಕೊಡಬಲ್ಲದು. ಅದನ್ನು ಬಿಟ್ಟು, ಮದ್ಯಪಾನದ ಮೊರೆ ಹೋಗುವುದು, ಬಿಸಿಲಿನಲ್ಲಿ ನೆರಳಿಗಾಗಿ ಕಪ್ಪೆ ಹಾವಿನ ಹೆಡೆಯ ಕೆಳಗೆ ಕುಳಿತಂತಾಗುತ್ತದೆ.
ಆರೋಹಾಲ್ ಸ್ಫೂರ್ತಿದಾಯಕ :
“ನೋಡಪ್ಪಾ ಅವರು ಹೆಸರಾಂತ ಸಂಗೀತಗಾರರು ಅವರು ಹಾಡು ಶುರು ಮಾಡಿದರೆ, ಕಾಲ, ದೇಶ ಎಲ್ಲವೂ ಮರೆತು ಹೋಗುತ್ತದೆ. ಆದರೆ ಒಂದೇ ತೊಡಕು ನೋಡು, ಅವರು ಆಲ್ಕೋಹಾಲ್ ಸೇವಿಸದೇ ಹೋದರೆ ಹಾಡಲು ಸ್ಫೂರ್ತಿಯೇ ಬರುವುದಿಲ್ಲವಂತೆ. ಆದ್ದರಿಂದ ಕಛೇರಿ ಶುರು ಮಾಡುವ ಮೊದಲು, ಕುಡಿಯಲು ವ್ಯವಸ್ಥೆ ಆಗಬೇಕು.”
“ಪ್ರಶಾಂತ ವಾತಾವರಣ, ಸಣ್ಣದನಿಯಲ್ಲಿ ಸಂಗೀತ, ಜೊತೆಗೆ ನನ್ನ ಮೆಚ್ಚಿನ ಬ್ರಾಂಡಿನ ಆಲೋಹಾಲ್. ಆಗ ನನ್ನ ಆಲೋಚನೆಗೆ ಚಾಲನೆ ದೊರೆಯುತ್ತದೆ. ಎಂತಹ ಕಠಿಣ ಸಮಸ್ಯೆಯನ್ನಾದರೂ ಬಿಡಿಸಬಲ್ಲೆ. ನನಗೆ ಒಳ್ಳೆಯ ಐಡಿಯಾಗಳು ಹೊಳೆಯಬೇಕೆಂದರೆ, ಆಲ್ನೋಹಾಲ್ ಬೇಕೇಬೇಕು.”
ಹೀಗೆ ಅನೇಕರು ಆಲೋಹಾಲನ್ನು ಸ್ಪೂರ್ತಿದಾಯಕ ಎಂದು ಹೊಗಳುತ್ತಾರೆ. ಅದಿಲ್ಲದಿದ್ದರೆ, ನಮ್ಮ ಸೃಜನಶೀಲತೆ ಬತ್ತಿ ಹೋಗುತ್ತದೆ ಎನ್ನುತ್ತಾರೆ. ಆಲಕೋಹಾಲ್ ಸ್ಫೂರ್ತಿದಾಯಕವೇ, ಖಂಡಿತ ಇಲ್ಲ.
ವಾಸ್ತವಿಕವಾಗಿ ಏನಾಗುವುದೆಂದರೆ, ವ್ಯಕ್ತಿ ಆಲೋಹಾಲ್‌ಮೇಲೆ ಮಾನಸಿಕ, ದೈಹಿಕ ಅವಲಂಬನೆ ಬೆಳೆಸಿಕೊಂಡಿರುತ್ತಾನೆ. ಆಗ ಸಹಜವಾಗಿ, ಸಮಯಕ್ಕೆ ಸರಿಯಾಗಿ ಆಲ್ನೋಹಾಲ್ ಸೇವನೆ ಮಾಡದಿದ್ದರೆ, ಅವನ ಮೈಮನಗಳು ನಿಷ್ಕ್ರಿಯ ವಾಗುತ್ತವೆ. ಅಗತ್ಯ ಪ್ರಮಾಣದ ಆಲ್ಲೋಹಾಲ್ ಸೇವನೆಯಿಂದ ಆತ ಮತ್ತೆ ಕ್ರಿಯಾ ಶೀಲನಾಗುತ್ತಾನೆ. ಇದನ್ನು ಆತ ತಪ್ಪಾಗಿ ಅರ್ಥೈಸಿ, ಆಲ್ಕೋಹಾಲ್ ಸ್ಫೂರ್ತಿದಾಯಕ ಎಂದುಮ್ ಸಮಜಾಯಿಷಿ ನೀಡುತ್ತಾನೆ. ಆಲ್ಕೋಹಾಲ್ ಮಿದುಳನ್ನು ಕುಗ್ಗಿಸುವುದರಿಂದ, ಸ್ಫೂರ್ತಿದಾಯಕವಾಗಲು, ಪ್ರಚೋದಕವಾಗಲು ಸಾಧ್ಯವೇ ಇಲ್ಲ.
ಆಲೋಹಾಲ್ ಲೈಂಗಿಕ ಪ್ರಚೋದಕ ಹಾಗೂ ಲೈಂಗಿಕಶಕ್ತಿವರ್ಧಕ :
“ಮನಸ್ಸಿಗೆ ಇಷ್ಟವಾದ ಹೆಣ್ಣು, ಜೊತೆಗೆ ಮದಿರೆ ಇದ್ದರೆ, ಲೈಂಗಿಕ ಸುಖದ ಸೂರೆಯಾಗುತ್ತದೆ” ಎಂದು ನಂಬುವವರಿದ್ದಾರೆ.
“ಆಲೋಹಾಲ್ ಸೇವಿಸಿದರೆ, ಲೈಂಗಿಕ ಆಸೆ ಹೆಚ್ಚುತ್ತದಂತೆ. ಚೆನ್ನಾಗಿ ಲೈಂಗಿಕ ಕ್ರಿಯೆ ಮಾಡಬಹುದಂತೆ. ನಿಜವೇ ಡಾಕ್ಟರೇ” ಎಂದು ಪ್ರಶ್ನಿಸುವವರಿದ್ದಾರೆ.
ಮಾಂಸಾಹಾರ, ಮದ್ಯ, ಲೈಂಗಿಕತೆಯನ್ನು ವೃದ್ಧಿಸುತ್ತವೆ ಎಂದು ಹೇಳುವವರಿ ದ್ದಾರೆ. ವಾಸ್ತವಿಕವಾಗಿ ಏನಾಗುತ್ತದೆ ಎಂಬುದನ್ನು ಪ್ರಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ ಮೊದಲೇ ಹೇಳಿಬಿಟ್ಟಿದ್ದಾನೆ. “Alcohol ಇಂಡ್ಯೂಸಸ್ desire but takes away the performance’ ಅಂದರೆ ಮದ್ಯಪಾನದಿಂದ ಲೈಂಗಿಕ ಆಸೆ ಏನೋ ಹುಟ್ಟುತ್ತದೆ. ಆದರೆ ನಿರ್ವಹಣಾ ಸಾಮರ್ಥ್ಯ ಕುಗ್ಗಿಹೋಗುತ್ತದೆ. ಮದ್ಯಸಾರ, ಮನಸ್ಸಿನ ಹಿಂಜರಿಕೆಗಳನ್ನು ದೂರ ಮಾಡುವುದರಿಂದ ವ್ಯಕ್ತಿ ಎಗ್ಗಿಲ್ಲದೆ, ಸಾಮಾಜಿಕ/ನೈತಿಕ ನಿಯಮಗಳನ್ನು ಗಮನಿಸದೆ, ಲೈಂಗಿಕತೆ ಬಗ್ಗೆ ಮಾತಾಡಬಲ್ಲ, ಆಸೆಯನ್ನು ವ್ಯಕ್ತಪಡಿಸಬಲ್ಲ. ಲೈಂಗಿಕ ಸಂಬಂಧಕ್ಕಾಗಿ ಒತ್ತಾಯಿಸಬಲ್ಲ, ಆದರೆ, ಲೈಂಗಿಕ ಕ್ರಿಯೆ ನಡೆಸುವಾಗ, ಶೀಘ್ರ ವೀರ್ಯಸ್ಖಲನ, ಲಿಂಗ ಸರಿಯಾಗಿ ಉದ್ರೇಕ ವಾಗದಿರುವಿಕೆ ಅಥವಾ ಹೊಂದಾಣಿಕೆ ಚಾಲನೆಯನ್ನು ಮಾಡಲಾಗದಿರುವಿಕೆಯಂತಹ ತೊಂದರೆ ಗಳಿಗೆ ಒಳಗಾಗುತ್ತಾನೆ. ಜೊತೆಗೆ ಲೈಂಗಿಕ ಸಂಗಾತಿಗೆ, ಆಲ್ನೋಹಾಲ್ ಸೇವನೆ ಹಿಡಿಸದಿದ್ದರೆ, ಆಕೆ, ಲೈಂಗಿಕ ಕ್ರಿಯೆಯಲ್ಲಿ ಅಸಹಕಾರವನ್ನು ತೋರಿಸುವುದರಿಂದ, ಕ್ರಿಯೆ ಸಮರ್ಥವಾಗಿ / ಸುಖದಾಯಕವಾಗಿ ನಡೆಯುವುದಿಲ್ಲ.
ಲೈಂಗಿಕ ದುರ್ಬಲತೆಯಿಂದ ಬಳಲುತ್ತಾ, ಚಿಕಿತ್ಸೆಗಾಗಿ ಬರುವ ಅನೇಕರಲ್ಲಿ ಅದು ಬರಲು ಕಾರಣ ಅವರ ಆಲ್ಕೋಹಾಲ್‌ನ ಸೇವನೆ ಎಂಬುದು ಗಮನಾರ್ಹ. ಆದ್ದರಿಂದ ಲೈಂಗಿಕ ಕ್ರಿಯೆ ಮಾಡುವ ಮೊದಲು ಮದ್ಯಪಾನ ಮಾಡುವುದು ಅಪಾಯಕಾರಿ ಎಂದು ತಿಳಿಯಬೇಕು.
‘ ಬೀರ್’ ಸೇವನೆಯಿಂದ ದೇಹದ ಚರ್ಮ ಕೆಂಪಾಗುತ್ತದೆ / ಮಾಂಸ ಖಂಡಗಳು ಉಬ್ಬುತ್ತವೆ
‘ ತಥ್, ಒಳ್ಳೇ ಕಡ್ಡಿ ಪೈಲ್ವಾನ್ ಥರ ಇರೋ ನಿನ್ನ ಯಾರು ಮೆಚ್ಚಿ ಕೋತಾರೋ, ಲವ್ ಮಾಡೋಕೆ ನಿನಗೆ ಒಬ್ಬ ಹುಡುಗಿಯೂ ಸಿಕ್ಕೊಲ್ಲ, ನಾನು ಹೇಳೋ ಮಾತು ಸ್ವಲ್ಪ ಕೇಳು. ಪ್ರತಿದಿನ ಒಂದು ಗ್ಲಾಸ್ ಬೀರ್ ಕುಡಿ. ಮೂರು ತಿಂಗಳಾದ ಮೇಲೆ ನೋಡು ಹೇಗಿದ್ದೀ ಅಂತ. ಕೆಂಪು ಕೆಂಪಗೆ ಒಳ್ಳೇ ಟೊಮ್ಯಾಟೋ ಥರ ಆಗಿಬಿಡ್ತೀಯಾ ಒಳ್ಳೇ ಬಾಡೀನೂ ಬರುತ್ತೆ’ ಎಂದು ಒಬ್ಬ ತನ್ನ ಗೆಳೆಯನಿಗೆ ಬುದ್ದಿವಾದ ಹೇಳಿದ. ಈ ರೀತಿ ಬುದ್ಧಿವಾದ ಹೇಳುವವರೂ, ಅದರಂತೆ ಬೀರ್ ಕುಡಿದು ತಾನು ಹೆಚ್ಚು ಸುಂದರನಾಗುತ್ತೇನೆಂದು ನಂಬುವವರೂ ಸಾಕಷ್ಟು ಮಂದಿ ಇದ್ದಾರೆ. ಬೀರ್ ಸೌಂದಯ್ಯ ವರ್ಧಕವೇನಲ್ಲ. ಹೆಚ್ಚು ಬಿಳುಪಾಗಿರುವವರು ಬೀರ್ ಸೇವಿಸಿದಾಗ, ಚರ್ಮದಡಿಯಲ್ಲಿ ಹೆಚ್ಚು ರಕ್ತ ಸಂಚಾರವಾಗಿ, ಸ್ವಲ್ಪ ಕೆಂಪಗೆ ಕಾಣಬಹುದೇ ಹೊರತು, ಚರ್ಮದ ಬಣ್ಣವೇನೂ ಬದಲಾಗುವುದಿಲ್ಲ. ಬೀರ್
ಕುಡಿದು, ಕುಡಿದು ಲಿವರ್ ದೊಡ್ಡದಾಗಿ, ಹೊಟ್ಟೆ ದಪ್ಪಗಾಗುತ್ತದೆಯೇ ವಿನಃ ಮಾಂಸ ಖಂಡಗಳು ದಪ್ಪಗಾಗುವುದಿಲ್ಲ. ಬೀರ್ ‘ಮಾದಕ ವಸ್ತುಗಳ ಸೇವನೆಗೆ’ ಹೆಬ್ಬಾಗಿಲು ಎನ್ನಬಹುದು. ಬೀರ್ ‘ಸಾಫ್ಟ್ ಡ್ರಿಂಕ್’ ಎಂದುಕೊಂಡು ಅದನ್ನು ಸೇವಿಸಲು ಪ್ರಾರಂಭಿಸುವ ವ್ಯಕ್ತಿ ಕ್ರಮೇಣ, ಇತರ ಮಾದಕ ವಸ್ತುಗಳತ್ತ ಕಣ್ಣು ಹಾಯಿಸುವುದು ಮಾಮೂಲಾಗುತ್ತದೆ. ಆದ್ದರಿಂದ ಬೀರ್ ಅಪಾಯಕಾರಿ ಎಂದು ಗುರುತಿಸುವುದು ಮುಖ್ಯ
ಆಲ್ನೋಹಾಲ್ ಚಳಿಗಾಲದಲ್ಲಿ ಮೈ ಬೆಚ್ಚಗಿಡಲು ಸಹಾಯ ಮಾಡುತ್ತದೆ :
‘ ಚಳಿದೇಶಗಳಲ್ಲಿ ವಾಸಿಸುವವರೆಲ್ಲರೂ ಮದ್ಯ ಸೇವಿಸುತ್ತಾರೆ. ನಮ್ಮ ಗಡಿ ಪ್ರದೇಶಗಳಲ್ಲಿ ಚಳಿ ಜಾಸ್ತಿ ಇದ್ದು ಅಲ್ಲಿ ಕೆಲಸ ಮಾಡುವ ಸೈನಿಕರಿಗೆಲ್ಲಾ ಸತ್ಕಾರವೇ ಮದ್ಯ ಸೇವಿಸಲು ಪರವಾನಗಿ ಕೊಡುತ್ತದೆ. ಅಂದಮೇಲೆ ಚಳಿಗಾಲದಲ್ಲಿ ಮದ್ಯ ಸೇವಿಸುವುದು ಒಳ್ಳೆಯದಲ್ಲವೇ’ ಎಂದು ಕೆಲವರು ಕೇಳುತ್ತಾರೆ. ಈ ಮೊದಲೇ ಹೇಳಿದಂತೆ ಆಲೋಹಾಲ್ ಚರ್ಮದಡಿಯ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ ವ್ಯಕ್ತಿಗೆ ಅದರ ಕಾವು ಗೊತ್ತಾಗಬಹುದು. ಮದ್ಯಸೇವನೆ ಮಾಡುತ್ತಿದ್ದಂತೆ ಮೈ ಬಿಸಿ ಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಚಟ ಹತ್ತಿಸುವ ಮದ್ಯ ಈ ರೀತಿ ಬಳಸುವುದು ಜಾಣತನವಾಗುವುದಿಲ್ಲ. ಚಳಿಯಲ್ಲಿ ಮೈ ಬೆಚ್ಚಗಿಡಲು ಕಂಬಳಿ / ದಪ್ಪ ಬಟ್ಟೆ / ಉಣ್ಣೆ ಬಟ್ಟೆ ತೊಡುವುದು ಹೆಚ್ಚು ಹಿತಕರ ಹಾಗೂ ಕ್ಷೇಮಕರ.
ಮದ್ಯಪಾನದಿಂದ ಮನಸ್ಸಿಗಾದ ನೋವು, ನಿರಾಶೆ, ದುಃಖ ಅಪಮಾನಗಳನ್ನು ದೂರ ಮಾಡಬಹುದು :
ದೇವದಾಸನ ಕಥೆ ಯಾರಿಗೆ ಗೊತ್ತಿಲ್ಲ. ಪ್ರೇಮದಲ್ಲಿ ವಿಫಲನಾಗಿ ಪ್ರೇಮಿಯಿಂದ ದೂರವಾಗುವ ಅವನು, ಆ ನೋವನ್ನು ಮರೆಯಲು ಮದ್ಯವ್ಯಸನಿ ಯಾಗಿ ಕೊನೆಗೆ ತನ್ನ ಪ್ರಾಣವನ್ನು ಬಲಿಕೊಡುತ್ತಾನೆ. ಬಹುತೇಕ ಸಿನೇಮಾ ಕಥೆಗಳಲ್ಲಿ ನೋವು ನಿರಾಶೆಗೆ ಒಳಗಾದ ವ್ಯಕ್ತಿ ಕುಡಿಯಲು ಶುರುಮಾಡುವುದನ್ನು ಕಾಣಬಹುದು ‘ಏನು; ಬೇಸರವೇ? ದುಃಖವೇ. ಏಕೆ ಚಿಂತೆ, ಸ್ವಲ್ಪ ಡ್ರಿಂಕ್ಸ್ ತೆಗೆದುಕೋ. ಎಲ್ಲವೂ ಮರೆಯುತ್ತದೆ’ ಎನ್ನುವ ಸ್ನೇಹಿತರಿಗೆ ಕೊರತೆ ಇಲ್ಲ. ಮದ್ಯದ ಅಮಲಿನಲ್ಲಿ ಮನಸ್ಸಿನ ನೋವನ್ನು ಮರೆಯುವುದು ಒಂದು ರೀತಿಯ ಪಲಾಯನ ಸೂತ್ರ. ಸಮಸ್ಯೆ ಹಾಗೇ ಇರುತ್ತದೆ. ವ್ಯಕ್ತಿಮಾತ್ರ ಭ್ರಮಾಲೋಕದಲ್ಲಿದ್ದು, ಸಮಸ್ಯೆಯಿಂದ ಪಾರಾಗಲು ವಿಫಲ ಯತ್ನ ಮಾಡುತ್ತಾನೆ. ಇದರಿಂದ ಸಮಸ್ಯೆಯ ತೀವ್ರತೆ ಹೆಚ್ಚುವುದಷ್ಟೇ ಅಲ್ಲ ಹೊಸ ಬಗೆಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ವ್ಯಕ್ತಿ ಅವನತಿಯ ಇಳಿಜಾರಿನಲ್ಲಿ ಬೀಳುತ್ತಾನೆ. ಅಧಃಪತನಕ್ಕೆ ತುತ್ತಾಗುತ್ತಾನೆ. ಆದ್ದರಿಂದ ಮನಸ್ಸಿನ ನೋವು ಮರೆಯಲು ಮದ್ಯಪಾನ ಮಾಡುವುದು ಅತ್ಯಂತ ಅಪಾಯಕಾರಿ ಪ್ರವೃತ್ತಿ ಎನ್ನದೇ ವಿಧಿ ಇಲ್ಲ.
ಮದ್ಯಸೇವನೆ ಮಾಡಿದರೆ ಪ್ರತಿಭಟಿಸುವುದು/ಆಕ್ರಮಣಶೀಲತೆಯನ್ನು ತೋರಿಸು ವುದು ಸುಲಭ. ಆಲೋಹಾಲ್ ಧೈರವರ್ಧಕ :
‘ಮದ್ಯ ಸೇವನೆಯಿಂದ ಮನಸ್ಸಿನ ಹೆದರಿಕೆ / ಹಿಂಜರಿಕೆ ಹೋಗುತ್ತದೆ. ಹೊಸ ಧೈಯ್ಯ, ಸಾಮರ್ಥ್ಯ ಬರುತ್ತದೆ ಆಗ ಪ್ರತಿಭಟಿಸುವುದು / ಎದುರಾಳಿಯನ್ನು ಹೆದರಿಸುವುದು / ಹೋರಾಡುವುದು ಸುಲಭ ಎಂದು ಕೆಲವರು ನಂಬುತ್ತಾರೆ. ಆಲ್ಕೋಹಾಲ್ ಶುರುವಿನಲ್ಲಿ ಮನಸ್ಸಿನ ಹಿಂಜರಿಕೆ ಪುಕ್ಕಲುತನವನ್ನೇನೋ ನಿವಾರಿಸು ಇದೆ. ಆದರೆ ವಿವೇಚನೆಯನ್ನು ಹಾಳು ಮಾಡಿಬಿಡುತ್ತದೆ. ನಾವು ಯಾವುದೇ ಸನ್ನಿವೇಶದಲ್ಲಿ ಯಾವುದೇ ವಿಚಾರವಾಗಿ ಪ್ರತಿಭಟಿಸಬೇಕಾದಾಗ, ಹೋರಾಡ ಬೇಕಾದಾಗ, ಧೈಯ್ಯದ ಜೊತೆಜೊತೆಯಲ್ಲೇ ವಿವೇಚನೆ ಬಹಳ ಮುಖ್ಯ. ವಿವೇಚನೆ ಇಲ್ಲದ ಧೈಯ್ಯ, ಪ್ರತಿಭಟನೆ , ಹೋರಾಟ ಅನರ್ಥ ಹಾಗೂ ಹೊಸ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು. ಆದ್ದರಿಂದ ಧೈಯಕ್ಕಾಗಿ. ಆಲೋಹಾಲನ್ನು ಅವಲಂಬಿಸುವುದು ಮೂರ್ಖತನ,














