ಮನೆ ಮನರಂಜನೆ ಡಿಸೆಂಬರ್ 29 ರಂದು “ಅಲೆಕ್ಸಾ’ ತೆರೆಗೆ

ಡಿಸೆಂಬರ್ 29 ರಂದು “ಅಲೆಕ್ಸಾ’ ತೆರೆಗೆ

0

“ಅಲೆಕ್ಸಾ’ ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಪವನ್‌ ತೇಜ್‌ ನಾಯಕರಾಗಿರುವ ಈ ಚಿತ್ರವನ್ನು ವಿ.ಚಂದ್ರು ನಿರ್ಮಿಸಿದ್ದು, ಜೀವ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜೀವ, “ಅಲೆಕ್ಸಾ ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. ಭುಜಂಗ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ ಅಲೆಕ್ಸಾ ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್‌ 29 ನಮ್ಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ’ ಎಂದರು.

“ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್‌ ಪೊಲೀಸ್‌ ಆಫೀಸರ್‌. ಅಲೆಕ್ಸಾ ನನ್ನ ಪಾತ್ರದ ಹೆಸರು. ನನಗೆ ನಿಜ ಜೀವನದಲ್ಲಿ ಪೊಲೀಸ್‌ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ’ ಎನ್ನುವುದು ನಾಯಕಿ ಅದಿತಿ ಮಾತು. ನಾಯಕ ಪವನ್‌ ತೇಜ್‌ ಕೂಡಾ ತಮ್ಮ ಪಾತ್ರ ಪರಿಚಯ ಮಾಡಿದರು.

ಹಿಂದಿನ ಲೇಖನಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಅಪಮಾನ: ಆರಗ ಜ್ಞಾನೇಂದ್ರ ಆರೋಪ
ಮುಂದಿನ ಲೇಖನಜನತಾಕಾಲನಿ ಸರಕಾರಿ ಶಾಲೆ ಭೂ ವಿವಾದ, ಪ್ರತಿಭಟನಾ ಧರಣಿ