ಬಾಲಿವುಡ್ ನ ಬಹುಬೇಡಿಕೆಯ ನಾಯಕಿಯರಲ್ಲಿ ಈಗ ಆಲಿಯಾ ಭಟ್ ಮುಂಚೂಣಿಯಲ್ಲಿದ್ದು, ಇಂದು ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆಲಿಯಾ ಭಟ್ . ಯಾವುದೇ ಪಾತ್ರ ಕೊಟ್ಟರು ನೀರು ಕುಡಿದ ಹಾಗೇ ಸುಲಭವಾಗಿ ಮಾಡಿಬಿಡುತ್ತಾರೆ. ವಯಸ್ಸು ಚಿಕ್ಕದಾದರೂ ಸ್ಟಾರ್ ನಟಿ ಪಟ್ಟ ಪಡೆದುಕೊಂಡಿದ್ದಾರೆ.
ನೋಡಲು ತುಂಬಾ ಮುದ್ದಾಗಿರುವ ನಟಿ ಆಲಿಯಾ ಭಟ್, ತನ್ನ ತಂದೆ ಹೆಸರನ್ನು ಬಳಸಿಕೊಳ್ಳದೇ ತನ್ನ ಕಾಲಿನ ಮೇಲೆ ನಿಂತು ಇತರರಿಗೆ ಮಾದರಿಯಾಗಿದ್ದಾರೆ.
ಆಲಿಯಾ ಇಂದು ಹುಟ್ಟುಹಬ್ಬವನ್ನು ತಮ್ಮ ಸಹೋದರಿ ಹಾಗೂ ತಾಯಿಯೊಂದಿಗೆ ಮುಂಬೈ ಹೊರಗೆ ಆಚರಿಸುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.
ಮಾರ್ಚ್ 15, 1933ರಲ್ಲಿ ಮುಂಬೈನಲ್ಲಿ ಜನಿಸಿದ ಈಕೆ 1999ರಲ್ಲಿ ಬಾಲ ಕಲಾವಿದೆಯಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. 2012ರಲ್ಲಿ ‘ಸ್ಟೂಡೆಂಟ್ ಆಫ್ ದ ಇಯರ್’ ಚಿತ್ರದಲ್ಲಿ ಪ್ರಬುದ್ಧ ನಟಿಯಾಗಿ ಅಭಿನಯಿಸಿದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿಯನ್ನು ಶಾರುಖ್ ಖಾನ್ ‘ಅತಿ ವೇಗವಾಗಿ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ ನಟಿ’ ಎಂದು ಶ್ಲಾಘಿಸಿದ್ದಾರೆ.
ಈಕೆ ನಟಿಸಿದ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ‘ಸ್ಟೂಡೆಂಟ್ ಆಫ್ ದ ಇಯರ್’ ಚಿತ್ರದಲ್ಲಿ ಅಲಿಯಾ ಮನೋಜ್ಞವಾಗಿ ನಟಿಸಿ ಪ್ರತಿಭಾವಂತೆ ಎಂದು ನಿರೂಪಿಸಿದ್ದರು.
ತಮ್ಮ ಅದ್ಭುತ ಅಭಿನಯಕ್ಕಾಗಿ ಹಲವು ಫಿಲಂ ಫೇರ್ ಪ್ರಶಸ್ತಿಗಳು, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ಉತ್ತಮ ನಟಿಯೊಂದಿಗೆ ಗಾಯಕಿಯೂ ಆಗಿರುವ ಅಲಿಯಾ, ತನ್ನ 6 ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.















