ಭಾದ್ರಪದ ಬಹುಳ ತದಗಿ ಶನಿವಾರ ಕೃತಿಕಾ ನಕ್ಷತ್ರ,ವೃತಿಪಾದ ಯೋಗ ಭದ್ರಾವಕರಣ, ಗುಳಿಗಾಲ ಇವುಗಳಿಂದ ಕೂಡಿದ ಕಾಲ ಸಮಯದಲ್ಲಿ ಈ ವಾಸ್ತುದೇವ ಸೃಷ್ಟಿಯಾಯಿತು.
ಬ್ರಹ್ಮನಿಂದ ಅನುಗ್ರಹಿತನಾದ ವಾಸ್ತುದೇವನ “ದೇವಾ! ನನ್ನ ಅನುಗ್ರಹ ಪೂರ್ತಿಯಾದ ಬ್ರಹ್ಮದೇವಾ ! ನನಗೆ ಸದ್ಗತಿಯನ್ನು ಅನುಗ್ರಹಿಸು ಕಾಪಾಡು” ಎಂದೆನ್ನಲು ಬ್ರಹ್ಮದೇವನು ವಾಸ್ತುದೇವನೆ! ಭೂಮಿಯ ಮೇಲೆ ಮನೆ ಮಠ, ಗ್ರಾಮ ದುರ್ಗ, ಕೋಟೆ, ನಗರ,ಪಟ್ಟಣ, ದೇವಾಲಯ, ವನ,ಉದ್ಯಾನ,ಅರಮನೆ, ಕೆರೆ, ಬಾವಿ,ಮೊದಲಾದ ಕಟ್ಟಡಗಳನ್ನು ಹೊಸದಾಗಿ ಕಟ್ಟಿಸುವಾಗ್ಗೆ ಮೊದಲ ಪೂಜೆ ನಿನಗೆ ಆಗಲೇಬೇಕು ಈ ಸಮಯದಲ್ಲಿ ಮೊದಲು ನಿನ್ನನ್ನು ಪೂಜಿಸದೇ ಯಾರು ಕಟ್ಟಡಗಳ ಕಾರ್ಯ ಪ್ರಾರಂಭಿಸುವರೋ ಅಂಥವರಿಗೆ ನೀನು ಅವರ ಪ್ರತಿಯೊಂದು ಕಾರ್ಯಗಳಿಗೆ ಕಾರ್ಯಕಂಟಕನಾಗಿ ಕಾಡುತ್ತಲಿರು.ಯಾರು ನಿನ್ನನ್ನು ಮೊಟ್ಟಮೊದಲು ವಿಧಿಪೂರ್ವ ಪೂಜಿಸಿ ನಿನ್ನನ್ನು ಸಂತೃಪ್ತಿಪಡಿಸುವವರೋ ಅಂಥವರ ಪ್ರತಿಯೊಂದು ಕಾರ್ಯಕ್ಕೂ ಜಯವನ್ನು, ಸೌಖ್ಯವನ್ನು ನೀಡುತ್ತಲಿರು. ಇದೇ ನಿನ್ನ ಕಾರ್ಯ ; ಇದೇ ನಿನಗೆ ನಾನು ನೀಡುವ ಸದ್ಗತಿ” ಎಂದು ಹೇಳಿ ಬ್ರಹ್ಮದೇವನು ಅಂತರ್ಧಾನನಾದನು ಬ್ರಹ್ಮದೇವನಿಂದ ಅನುಗ್ರಹಿತನಾದ ಈ ವಾಸ್ತುದೇವನಿಗೆ ವಾಸ್ತು ಪುರುಷ ಕವಡ ಕಟಕ ಎಂದೂ ಉಪನಾಮಗಳಿಂದ ಕರೆಯುತ್ತಾರೆ
ಆದ್ದರಿಂದ ಗೃಹಾರಂಭ,ಗೃಹಪ್ರವೇಶ, ದ್ವಾರಕಟ್ಟಣ ನಿರ್ಮಾಣ ದೇವಾಲಯ, ಯಜ್ಞ, ಯಾಗ,ವಿವಾಹ ಮಂಟಪ, ಜೀರ್ಣೋದ್ಧಾರ ಕಾಗೆ ಗೂಗೆಗಳು ಪ್ರವೇವಾದ ಗೃಹ ಪೀಡ ದೀಕ್ಷೆ ಉಪನಯನ ಸತ್ಕಾರ್ಮದಿ ವೃತಗಳು ಇವೇ ಮೊದಲಾದ ಕಾರ್ಯಗಳಲ್ಲಿ “ವಾಸ್ತು ಪೂಜೆ ” “ವಾಸ್ತು ಶಾಂತಿ”ಯನ್ನು ಯಥಾಶಕ್ತಿಯಿಂದ ಪದ್ಧತಿಯುಕ್ತ ವಾಗಿ ಮಾಡಿದ್ದಾದರೆ ನಮ್ಮ ಮುಂದಿನ ಕಾರ್ಯಗಳು ನಿರ್ವಿಘ್ನವಾಗಿ ಯಶಸ್ವಿಯಾಗಿ ನೆರವೇರುವುದಲ್ಲದೆ ಕುಟುಂಬದಲ್ಲಿ ವ್ಯಾಪಾರ, ವ್ಯವಹಾರದಲ್ಲಿ ಸರ್ವ ರೀತಿಯಲ್ಲಿ ಸುಖ ಶಾಂತಿಗಳು ಲಭಿಸುತ್ತವೆ.