ಮನೆ ಸ್ಥಳೀಯ ನಾಳೆ ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ನಾಳೆ ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

0

ಅಕ್ಟೋಬರ್‌ 3ರಂದು ಕರ್ನಾಟಕ ರಾಜ್ಯ ಮುಕ್ತ ವಿ‍ಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ದಸರಾ ಚಲನಚಿತ್ರೋತ್ಸವ ನಡೆಯಲಿದ್ದು, ಸಿದ್ದತೆಗಳು ಭರದಿಂದ ಸಾಗುತ್ತಿದೆ.

Join Our Whatsapp Group

ಆರಂಭದಲ್ಲಿ ಸ್ವಾಗತ ಕಮಾನಿನಲ್ಲಿ ದ್ವಾರಕೀಶ್ ರಾಜಕುಮಾರ್ ಒಳಗೊಂಡ ವೃತ್ತದಿಂದ ಮಾಡಿದ ಚಿತ್ರಗಳು, ಸಾಗುವ ದಾರಿಯುದ್ದಕ್ಕೂ ಬಣ್ಣದಿಂದ ಅಲಂಕೃತವಾಗಿ ಛತ್ರಿ ಆಕಾರದ ವಿನ್ಯಾಸಗಳನ್ನು ಮಾಡಲಾಗಿದೆ.

ಕನ್ನಡ ಸಿನಿಮಾದ ಹುಟ್ಟು ಹಾಗೂಷಯಇತಿಹಾಸವನ್ನು ಬಿಂಬಿಸುವ ಪೋಟೋಗಳನ್ನು ಒಳಗೊಂಡದ ಪೋಟೋ ಪ್ರದರ್ಶನದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕನ್ನಡ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್‌ ಸವಿನೆನಪಿಗಾಗಿ ಈ ಬಾರಿಯ ದಸರಾ ಚಲನಚಿತ್ರೋತ್ಸ ಆಯೋಜನೆ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌, ಸಪ್ತಮಿಗೌಡ, ಶರಣ್ಯ ಶೆಟ್ಟಿ, ಅಂಕಿತ ಬೋಪಯ್ಯ ಸೇರಿದಂತೆ ಹಲವು ನಟನಟಿಯರು ಭಾಗವಹಿಸಲಿದ್ದಾರೆ. ಸಾಧುಕೋಕಿಲ ತಂಡದಿಂದ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.