ಶ್ರೀರಂಗಪಟ್ಟಣ: ಜೆಡಿಎಸ್ ಶಾಸಕರಿಗೆ ಕ್ಷೇತ್ರದ ಅಭಿವೃದ್ದಿ ಬೇಕಾಗಿಲ್ಲ ಸಂಸದರ ಬರ ವಿರುದ್ದ ಮಾತನಾಡುವುದೇ ಅಭಿವೃದ್ದಿ ಕೆಲಸ ಎಂದುಕೊAಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಪಟ್ಟಣದ ಖಾಸಗಿ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಮಹಿಳಾ ಕಾರ್ಯಕರ್ತೆಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕನ್ನಂಬಾಡಿ ಅಣೆಕಟ್ಟೆ ರಕ್ಷಣೆ ಹಾಗೂ ಅಕ್ರಮ ಗಣಿಗಾರಿಕೆ ಸ್ಪೋಟಕಗಳಿಂದ ಮನೆಗಳು ಬಿರುಕು ಬಿಡುತ್ತಿವೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ, ಅಕ್ರಮ ಗಣಿಗಾರಿಕೆ ವಿರುದ್ದ ನಾನು ಧ್ವನಿಯೆತ್ತಿದ್ದೆ.ಕ್ಷೇತ್ರದ ಜನಪ್ರತಿನಿಧಿಯಾಗಿ ನನ್ನ ಪರವಾಗಿ ಕೈ ಜೋಡಿಸಬೇಕಿದ್ದ ಜೆಡಿಎಸ್ ಶಾಸಕರುಗಳು,ನನ್ನ ವಿರುದ್ದವೇ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು.ಅವರ ಅಕ್ರಮ ಗಣಿಗಾರಿಕೆ ಮತ್ತು ಪಾಲುದಾರಿಕೆಗಳ ಮುಚ್ಚಿಕೊಳ್ಳಲು ಸಂಸದರ ವಿರುದ್ದ ಮಾತನಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು ಎಂದು ಪರೋಕ್ಷವಾಗಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಹಾಗೂ ಸಿ.ಎಸ್.ಪುಟ್ಟರಾಜು ವಿರುದ್ದ ಹರಿಹಾಯ್ದರು.
ಶ್ರೀರಂಗಪಟ್ಟಣವು ಐತಿಹಾಸಿಕವಾಗಿ ಪವಿತ್ರವಾಗಿದ್ದು,ಜಗತ್ ಪ್ರಸಿದ್ದಿ ಹೊಂದಿದೆ. ಇಲ್ಲಿನ ದೇವಾಲಯಗಳು, ಕಾವೇರಿ ನದಿ, ಕನ್ನಂಬಾಡಿ ಅಣೆಕಟ್ಟೆ ಹೀಗೆ ಸಾಕಷ್ಟು ಪ್ರಮುಖ ಸ್ಥಳಗಳ ಅಭಿವೃದ್ದಿ ಯಾಗದೆ ಉದ್ಯೋಗ ಸೃಷ್ಠಿಇಲ್ಲದೆ ಜನರಿಗೆ ಸಮಸ್ಯೆಗಳಾಗುತ್ತಿವೆ ಈ ಬಗ್ಗೆ ಶಾಸಕರು ಗಮನ ಹರಿಸದ ಶಾಸಕರುಗಳ ಕುಟುಂಬ ರಾಜಕಾಣವನ್ನು ಕಿತ್ತೊಗೆಯಿರಿ. ಮಹಿಳೆಯರು ಜಾಗೃತರಾಗಿದ್ದು, ಅಭಿವೃದ್ದಿಯ ಕನಸ್ಸು ಕಾಣುತ್ತಿರುವ ಸಚ್ಚಿದಾನಂದರಿಗೆ ತಾವೆಲ್ಲರೂ ಆಶೀರ್ವಾದ ಮಾಡಿ ಕ್ಷೇತ್ರದ ಜನತೆ ಕುಟುಂಬ ರಾಜಕಾರಣಕ್ಕೆ ತೆರೆ ಎಳೆಯಬೇಕಿದ್ದು, ಮೊದಲ ಭಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಅವರನ್ನು ಗೆಲ್ಲಿಸುವಂತೆ ಸಂಸದರು ಮನವಿ ಮಾಡಿದರು.
ಇದಕ್ಕೂ ಮೊದಲು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಇಂಡುವಾಳು ಸಚ್ಚಿದಾನಂದ, ರಾಜಕೀಯಕ್ಕೆ ನಾನೇ ಮೊದಲು, ನಾನೇ ಕೊನೆ.ನನಗೆ ಕುಟುಂಬ ರಾಜಕಾರಣ ಇಷ್ಟವಿಲ್ಲ. ವಂಶರಾಜಕಾರಣ ಮಾಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹಲವಾರು ಜನಪರ ಯೋಜನೆಗಳು ಜನ ಸಾಮಾನ್ಯರ ಬದುಕಿಗೆ ವರವಾಗಿದೆ.ಕಳೆದ ಐದಾರು ವರ್ಷಗಳಿಂದಲೂ ಸಾಮಾಜಿಕವಾಗಿ ಹತ್ತಾರು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಸೇವೆ ಮಾಡಿಕೊಂಡು ಬಂದಿದ್ದೇನೆ.ನಿಮ್ಮ ಮನೆಯ ಮಗ ಎಂದು ತಿಳಿದು ನನಗೆ ಮತ ನೀಡುವಂತೆ ಅವರು ಮತಯಾಚಿಸಿದರು.
ಬಿಜೆಪಿ ರಾಜ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ,ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಜಿ.ಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ತಾಲ್ಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಸಂತೋಷ್ ಕುಮಾರ್ ಸೇರಿದಂತೆ ಇತರ ಮಹಿಳಾ ಪದಾಧಿಕಾರಿಗಳು,ಮುಖಂಡರು ಉಪಸ್ಥಿತರಿದ್ದರು.