ಮನೆ ಅಪರಾಧ ಅಕ್ರಮವಾಗಿ ಜಮೀನು ಪರಭಾರೆ ಮಾಡಿದ ಆರೋಪ : ತಹಸೀಲ್ದಾರ್ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲು

ಅಕ್ರಮವಾಗಿ ಜಮೀನು ಪರಭಾರೆ ಮಾಡಿದ ಆರೋಪ : ತಹಸೀಲ್ದಾರ್ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲು

0

ಬೆಳಗಾವಿ : ಜಮೀನನ್ನು ಅಕ್ರಮವಾಗಿ ಬೇರೆಯವರಿಗೆ ಪರಭಾರೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಹಶೀಲ್ದಾರ್ ಮೋಹನ ಭಸ್ಮೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗೋಕಾಕ್ ತಾಲೂಕಿನ ಮಮದಾಪುರ ಗ್ರಾಮದ ಸಂಗೀತ ಬನ್ನೂರ್ ಎನ್ನುವವರಿಗೆ ಸೇರಿದ 4 ಎಕರೆ ಜಮೀನಲ್ಲಿ 20 ಗುಂಟೆ ಭೂಮಿಯನ್ನು ಗುಲಾಬ್ ಓಸ್ವಾಲ್ ಎನ್ನುವ ಆರೋಪಿಗೆ ಪರಭಾರೆ ಮಾಡಿದ ಆರೋಪ ಕೇಳಿ ಬಂದಿದೆ.

ಸಂಗೀತ ಬನ್ನೂರು ಎಂಬವರಿಗೆ ಸೇರಿದ 20 ಗುಂಟೆ ಜಾಗವನ್ನು ತಹಸಿಲ್ದಾರ್ ಪರಭಾರೆ ಮಾಡಿದ್ದಾರೆ. ಮಮದಾಪುರ ಗ್ರಾಮದಲ್ಲಿ ಸಂಗೀತ ಬನ್ನೂರು ಎಂಬವರಿಗೆ 20 ಗುಂಟೆ ಜಮೀನು ಸೇರಿತ್ತು. ಸರ್ವೇ ನಂಬರ್ 122/1 (1) 4 ಎಕರೆ ಪೈಕಿ 20 ಗುಂಟೆ ಜಾಗ ಪರಭಾರೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗ್ರಾಮದಲ್ಲಿ ಅಧಿಕಾರಿಗಳು ಗುಲಾಬ್‌ ಓಸ್ವಾಲ್ ನೀಡಿದ ಆಮಿಷಕ್ಕೆ ಒಳಗಾಗಿ ಪರಭಾರೆ ಮಾಡಿದ್ದಾರೆ.

ಪ್ರಕರಣ A1 ಆರೋಪಿ ಗುಲಾಬ್ ಓಸ್ವಾಲ್ ಹೆಸರಿಗೆ ಜಮೀನು ಪರಭಾರೆ ಮಾಡಲಾಗಿದೆ. ಗೋಕಾಕ್ ತಾಸಿಲ್ದಾರ್ ಮೋಹನ್ ಭಸ್ಮೆ A2 ಆರೋಪಿಯಾಗಿದ್ದಾರೆ. ಅದೇ ರೀತಿ A3 ಕಂದಾಯ ನಿರೀಕ್ಷಕ ಎಸ್ ಎಂ ಹಿರೇಮಠ್, A4 ಗ್ರಾಮ ಲೆಕ್ಕಾಧಿಕಾರಿ ತುಕಾರಾಂ ಪಮ್ಮಾರ್, A5 ಲ್ಯಾಂಡ್ ಸರ್ವೆಯರ್ ಸಿ. ತಿಮ್ಮಯ್ಯ ಮೇಲೆ ಇದೀಗ ಕೇಸ್ ದಾಖಲಾಗಿದೆ. ಮಾರ್ಚ್ 26ರಂದು ಬೆಳಗಾವಿ ಜಿಲ್ಲೆಯ ಗೋಕಾಕ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಮದಾಪುರ ಗ್ರಾಮದ ಸಂಗೀತ ಬನ್ನೂರು ನೀಡಿದ ದೂರಿನ ಮೇರೆಗೆ ಇದೀಗ ತಹಶೀಲ್ದಾರ ಸೇರಿದಂತೆ ಐವರ ವಿರುದ್ಧ FIR ದಾಖಲಾಗಿದೆ. ಗೋಕಾಕ್ ದಿವಾನಿ ನ್ಯಾಯಾಲಯದ ಆದೇಶದ ಮೇರೆಗೆ ದೂರು ದಾಖಲಾಗಿದೆ. ಐಪಿಸಿ 1860ರಡಿ ಸೆಕ್ಷನ್ 409, 418, 420, 423, 427, 466, 468, 149ರ ಅಡಿಯಲ್ಲಿ ಕೇಸ್ ದಾಖಲಾಗಿದೆ.