ಮೈಸೂರು: ಸಾರ್ವಜನಿಕ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ಭ್ರಷ್ಟಾಚಾರದ ಹಗರಣವನ್ನು ಬಹಿರಂಗ ಪಡಿಸಲು ಮೈಸೂರು ಪಶ್ಚಿಮ ಸಾರಿಗೆ ಕಚೇರಿಯಲ್ಲಿರುವ ಸಿಸಿಟಿವಿ ಫೋಟೆಜ್ ದಾಖಲೆಗಳನ್ನು ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಪ್ರದೀಪ್ ಕುಮಾರ್ ಅವರು ಮನವಿ ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರಲ್ಲದ ವ್ಯಕ್ತಿಗಳು, ಸರ್ಕಾರಿ ನೌಕರರರಂತೆ ಬಿಂಬಿಸಿಕೊಂಡು ಸರ್ಕಾರಿ ಉಪಕರಣಗಳನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿರುವುದನ್ನೂ ಬಯಲಿಗೆಳೆಯಲು ವಿಡಿಯೋ ದಾಖಲೆ ನೀಡುವಂತೆ ಮೈಸೂರು ಸಾರಿಗೆ ವಿಭಾಗ ಪಶ್ಚಿಮ ಸಾರಿಗೆ ಕಛೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕೋರಲಾಗಿದೆ.
ಕಚೇರಿಯಲ್ಲಿ ಅಳವಡಿಸಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳಲ್ಲಿ ಫೆ. 8 ರ ಬೆಳಿಗ್ಗೆ 11.30 ರಿಂದ ಸಂಜೆ 5.30ರವರೆಗೆ ದಾಖಲಾಗಿರುವ ವೀಡಿಯೋ ಚಿತ್ರೀಕರಣದ ದಾಖಲೆಗಳನ್ನು ದೃಢೀಕರಿಸಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ.
ವಿಡಿಯೋ ಮಾಹಿತಿಯನ್ನು ನ್ಯಾಯಾಂಗಕ್ಕೆ ಸಲ್ಲಿಸುವ ಅವಶ್ಯಕತೆ ಇರುವುದರಿಂದ 30 ದಿನಗಳಲ್ಲಿ ನೀಡಬೇಕಾದ ಮಾಹಿತಿಯನ್ನು ತುರ್ತಾಗಿ ನೀಡಬೇಕೆಂದು ಮನವಿ ಮಾಡಲಾಗಿದೆ.
ಸಿಸಿಟಿವಿ ಫೋಟೆಜ್ ಸಂಗ್ರಹಿಸಲು ಮನವಿ
ಮೈಸೂರು ಪಶ್ಚಿಮ ಸಾರಿಗೆ ಕಚೇರಿಯ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ವಿಡಿಯೋ ಚಿಚಿತ್ರೀಕರಣದ ಸಾಧನ ಸಂಗ್ರಹಣೆಯ ಕೊರತೆ ಕಾರಣವನ್ನು ನೀಡಿ, ಇಲ್ಲವೇ ವಿಡಿಯೋ ಚಿತ್ರೀಕರಣದ ಸಾಧನವನ್ನು ಹಾಳು ಮಾಡಿ ದುರಸ್ಥಿಗೊಳಪಟ್ಟಿರುವ ಬಗ್ಗೆ ಸುಳ್ಳು ಮಾಹಿತಿಯನ್ನು ಸಾರ್ವಜನಿಕ ಅಧಿಕಾರಿಗಳು ನೀಡುವ ಸಾಧ್ಯತೆ ಇದೆ.
ಆದ್ದರಿಂದ ಸಾರಿಗೆ ಇಲಾಖೆ ಜಂಟಿ ಸಾರಿಗೆ ಆಯುಕ್ತರು ಕೂಡಲೇ ತಮ್ಮ ಅಧೀನದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕೋರಿರುವ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ.















