ಮನೆ ರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆಗೆ ಹಣ ವರ್ಗಾವಣೆ ಆರೋಪ: ಬಂಧಿತ ಪುತ್ತೂರು, ಬಂಟ್ವಾಳ ಮೂಲವ ಐವರ ತೀವ್ರ ವಿಚಾರಣೆ

ಭಯೋತ್ಪಾದನಾ ಚಟುವಟಿಕೆಗೆ ಹಣ ವರ್ಗಾವಣೆ ಆರೋಪ: ಬಂಧಿತ ಪುತ್ತೂರು, ಬಂಟ್ವಾಳ ಮೂಲವ ಐವರ ತೀವ್ರ ವಿಚಾರಣೆ

0

ಪುತ್ತೂರು: ಭಯೋತ್ಪಾದನಾ ಚಟುವಟಿಕೆಗೆ ಹಣ ವರ್ಗಾಯಿಸಿದ ಆರೋಪದಲ್ಲಿ ಬಿಹಾರದ ಪಟ್ನಾದ ಪುಲ್ವಾರಿ ಶರೀಫ್‌’ನಲ್ಲಿ ಬಂಧಿತರಾಗಿರುವ ಪುತ್ತೂರು ಹಾಗೂ ಬಂಟ್ವಾಳದ ಐವರಿಗೆ ವಿದೇಶದಿಂದ ಹಣ ಪೂರೈಕೆ ಆಗಿರುವ ಅಂಶ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಬಂಧಿತರನ್ನು ಪಟ್ನಾದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೇಶಾದ್ಯಂತ ಭಯೋತ್ಪಾದನ ಕೃತ್ಯಕ್ಕೆ ವಿದೇಶದಿಂದ ಹಣ ಪೂರೈಕೆ ಆಗುತ್ತಿದ್ದು, ಅದನ್ನು ಉಗ್ರ ಕೃತ್ಯಗಳಲ್ಲಿ ತೊಡಗು ವವರಿಗೆ ನೀಡಲು ಬೇರೆ ಬೇರೆ ರಾಜ್ಯಗಳಲ್ಲಿ ತಂಡ ಕಾರ್ಯಾಚರಿಸುತ್ತಿರುವ ಅಂಶ ಆತಂಕ ಮೂಡಿದೆ. ಪಟ್ನಾ ಘಟನೆಗೆ ಕರಾ ವಳಿಯಿಂದ ಹಣ ಸಂದಾಯ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.

ಈಗಾಗಲೇ ಕೋಟ್ಯಂತರ ರೂ. ವರ್ಗಾಯಿಸಲಾಗಿದ್ದು, ಇದ ಕ್ಕಾಗಿ ಪಿಎಫ್‌’ಐ ಸಹಿತ ಹಲವು ಸಂಘಟನೆ ಸದಸ್ಯರ ಖಾತೆಗಳನ್ನು ಬಳಸಿಕೊಳ್ಳಲಾಗಿದೆ. ಕೆಲವೆಡೆ ಸದಸ್ಯರಲ್ಲದವರ ಖಾತೆಯಿಂದಲೂ ಹಣ ವರ್ಗಾಯಿಸಲಾಗಿದೆ. ಇಡೀ ದೇಶದಲ್ಲಿ ಈ ಜಾಲ ಹಬ್ಬಿದ್ದು, ಕರಾವಳಿಯೇ ಇದರ ಮೂಲವಾಗಿ ರುವ ಅಂಶ ಬೆಳಕಿಗೆ ಬಂದಿದೆ.

ಹಿಂದಿನ ಲೇಖನವಿಧಾನಸೌಧದಲ್ಲಿ ಮದ್ಯದ ಬಾಟಲಿ ಸಾಗಣೆ ಪ್ರಕರಣ: ಬಿಜೆಪಿ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ
ಮುಂದಿನ ಲೇಖನಹಳದಿ ಬಣ್ಣದಲ್ಲಿ ಐಫೋನ್‌ 14 ಪ್ಲಸ್‌’ನ ನೂತನ ಆವೃತ್ತಿಯ ಮೊಬೈಲ್ ಬಿಡುಗಡೆ