ಮನೆ ಕಾನೂನು ಜೂನ್ 12 ರವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಅವಕಾಶ

ಜೂನ್ 12 ರವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಅವಕಾಶ

0

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಹೆಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

Join Our Whatsapp Group

ಇಂದು ಮಧ್ಯರಾತ್ರಿ 12 ರವರೆಗೆ ಗಡುವು ನೀಡಲಾಗಿತ್ತು, ಆದರೆ ಎರಡ್ಮೂರು ಬಾರಿ ಗಡುವು ವಿಸ್ತರಣೆ ಮಾಡಿದರೂ ಸಹ ನಂಬರ್ ಪ್ಲೇಟ್ ಅಳವಡಿಕೆ ಕಡಿಮೆ ಪ್ರಮಾಣದಲ್ಲಿ ಆಗಿದೆ. ರಾಜ್ಯದ 2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 41 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೊಳ್ಳಲು ಮುಂದಾಗಿದ್ದಾರೆ.

ಈಗಾಗಲೇ ಹೈಕೋರ್ಟ್ ಜೂನ್ – 12 ರ ವರೆಗೆ ಹೆಚ್ಎಸ್ಆರ್ಪಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ 12 ರ ವರೆಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿದೆ. ಹೈಕೋರ್ಟ್ ಕೊಟ್ಟ ಗಡುವು ಮುಗಿದ ನಂತರವೂ ಅಳವಡಿಸಿಕೊಂಡಿಲ್ಲ ಎಂದರೆ ಮೊದಲ ಬಾರಿ 500 ರುಪಾಯಿ ಎರಡನೇ ಬಾರಿ 1 ಸಾವಿರ ಮೂರನೇ ಬಾರಿ ಗಾಡಿ ಸೀಜ್ ಮಾಡ್ತಿವಿ ಎಂದು ರಾಜ್ಯ ಸಾರಿಗೆ ಇಲಾಖೆ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಈಗಾಗಲೇ ಹೆಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ ಹತ್ತಿರವಾಗ್ತಿದಂತೆ ವಾಹನ ಮಾಲೀಕರು ಮುಗಿಬಿದ್ದು ಆನ್ಲೈನ್ ಮೂಲಕ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡಲು ಮುಂದಾಗ್ತಿದ್ದಾರೆ. ಇದರಿಂದ ಸಾಕಷ್ಟು ನಕಲಿ‌ ಕಂಪನಿಗಳು ಹುಟ್ಟಿಕೊಂಡಿದ್ದು ಅಸಲಿ ನಕಲಿ ಗೊತ್ತಾಗದೆ ವಾಹನ ಮಾಲೀಕರು ನಕಲಿ ಕಂಪನಿಗಳಲ್ಲಿ ಹಣ ಹಾಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಆರ್ಟಿಓ ಅಧಿಕಾರಿಗಳು ತನಿಖೆ ಮಾಡಿ ಫ್ಯೂಜನ್ ಅನ್ನೋ ನಕಲಿ ಕಂಪನಿ ವಿರುದ್ಧ ಹನುಮಂತನಗರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಮಾತಾನಾಡಿದ ಟ್ರಾಫಿಕ್ ಎಕ್ಸ್ಪರ್ಟ್ ಶ್ರೀ ಹರಿ ಎರಡ್ಮೂರು ಬಾರಿ ಅವಕಾಶ ಕೊಟ್ಟರು ನಮ್ಮ ಜನರು ಯಾಕೆ ಅಳವಡಿಸಿಕೊಳ್ಳಲು ಮುಂದಾಗಿಲ್ಲ ಅಂತ ಗೊತ್ತಾಗ್ತಿಲ್ಲ ಅಳವಡಿಸದ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಸಾರಿಗೆ ಇಲಾಖೆ ಏನೋ ಬೈಕ್ ಕಳ್ಳತನವನ್ನು ತಡೆಗಟ್ಟಲು ಎಲ್ಲಾ ಹಳೆಯ ವಾಹನಗಳಿಗೂ ಹೆಚ್ ಎಸ್ ಆರ್‌ ಪಿ ಕಡ್ಡಾಯಗೊಳಿಸಿದೆ.

ಹಿಂದಿನ ಲೇಖನ300ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಯುಪಿಎಸ್‌ಸಿ ಅಧಿಸೂಚನೆ ಬಿಡುಗಡೆ
ಮುಂದಿನ ಲೇಖನಭ್ರೂಣಹತ್ಯೆ ಪ್ರಕರಣ: ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನ