ಮನೆ ಸುದ್ದಿ ಜಾಲ ಅಮರಾವತಿ: ಕಾರು ಬಾವಿಗೆ ಉರುಳಿ ಬಿದ್ದು ಕರ್ನಾಟಕದ ಮೂವರು ಸಾವು!

ಅಮರಾವತಿ: ಕಾರು ಬಾವಿಗೆ ಉರುಳಿ ಬಿದ್ದು ಕರ್ನಾಟಕದ ಮೂವರು ಸಾವು!

0

ಅಮರಾವತಿ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಾಲಂವರಿಪಲ್ಲಿ ಗ್ರಾಮದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಕರ್ನಾಟಕದ ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಾಲೂಕಿನ ಮುತ್ತಕದಲ್ಲಿ ಲೋಕೇಶ್, ಚಂದ್ರನಹಳ್ಳಿ ಗ್ರಾಮದ ನಿವಾಸಿ ಶಿವಾನಂದ ಮತ್ತು ಕೋಲಾರ ಜಿಲ್ಲೆಯ ಸುಗಟೂರಿನ ಚಲಪತಿ ಎನ್ನುವವರು ಎಂದು ಗುರುತಿಸಲಾಗಿದೆ.

ತಂಡುಪಲ್ಲಿಯ ಐವರು ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಹಾಗೆಯೇ ಶನಿವಾರ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಮದುವೆಯಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಂವರಿಪಲ್ಲಿಯಲ್ಲಿ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ.

ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುನಿಲ್ ಹಾಗೂ ತಿಪ್ಪಾ ರೆಡ್ಡಿ ಕಾರಿನ ಹಿಂಭಾಗದ ಕಿಟಕಿಗಳನ್ನು ಒಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಬಾವಿಯಿಂದ ಹೊರತೆಗೆದರು. ಘಟನೆಯ ಕುರಿತು ಪಿಲೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.