ಆಮಶಂಕೆಯಲ್ಲಿ ಬ್ಯಾಸಿಲರಿ ಆಮಶಂಕೆ, ಅಮೀಬಿಕ್ ಡಿಸೆಂಟರಿ ಎಂದು ಎರಡು ವಿಧವಿದೆ —ಇವೆರಡಕ್ಕೂ ಸೂಕ್ಷ್ಮ ವಿಷ ಕ್ರಿಮಿಗಳೇ ಕಾರಣ ಅವುಗಳನ್ನು ನಾಶ ಮಾಡುವಂತಹ ಔಷಧಿಯನ್ನು ಸೇವಿಸಬೇಕು.
1. ಕರಿ ಬೇವಿನ ಸೊಪ್ಪನ್ನು ಅರೆದು,ಮಜ್ಜಿಗೆಯಲ್ಲಿ ಮಿಶ್ರ ಮಾಡಿ ಸೇವಿಸುವುದರಿಂದ ರಕ್ತಭೇದಿ ನಿವಾರಣೆಯಾಗುತ್ತದೆ
2. ಖರ್ಜೂರವನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಅಮಶಂಕೆ ನಿವಾರಣೆಯಾಗುವುದಲ್ಲದೆ ನಮ್ಮ ಹತ್ತಿರ ಸುಳಿಯುವುದಿಲ್ಲ
3. ಗಟ್ಟಿ ಮೊಸರಿನಲ್ಲಿ ಮೆಂತ್ಯವನ್ನು ನೀನೇ ಹಾಕಿ ಅದನ್ನು ಸೇವಿಸುವುದರಿಂದ ರಕ್ತ ಭೇದಿ ನಿಲ್ಲುತ್ತದೆ
4. ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯುವುದರಿಂದ ಆಮಶಂಕೆ ನಿವಾರಣೆ ಆಗುತ್ತದೆ
5. ಅಂಗಡಿಯಲ್ಲಿ ಸಿಕ್ಕುವ ಬಾರ್ಲಿಯನ್ನು ನೀರಿನಲ್ಲಿ ಹಾಕಿ ಬೇಯಿಸಿ ಮಾಡಿದ ಗಂಜಿಯನ್ನು ಸೇವಿಸಿದರೆ ರಕ್ತ ಭೇದಿ ಮಾಣುವುದು.
6. ಬಾಳೆ ಹಣ್ಣನ್ನು ಸಕ್ಕರೆ ಬೆರೆಸಿ ಸೇವಿಸಿದರೆ ರಕ್ತ ಬೇದಿ ನಿರ್ಮೂಲನ ಆಗುವುದು.
7. ಟೀ ಎಲೆಯನ್ನು ತಂದು ನೀರಿನಲ್ಲಿ ಹಾಕಿ ಕಾಯಿಸಿ ಕಷಾಯ ಮಾಡಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸೇವಿಸಿದರೆ ರಕ್ತಭೇದಿ ನಿಲ್ಲುವುದು.
8. ಬೇಯಿಸಿದ ಹುರುಳಿಯ ಕಟ್ಟನ್ನು ಮಾತ್ರ ತೆಗೆದುಕೊಂಡು ಆ ಸಾರನ್ನು ಸೇವಿಸುವುದರಿಂದ ರಕ್ತಬೇದಿ ನಿರ್ನಾಮವಾಗುವುದು.
9. ಊಟವಾದ ಮೇಲೆ ಓಮಿನ ಕಾಳನ್ನು ಚೆನ್ನಾಗಿ ಅಗಿದು ನೀರನ್ನು ಕುಡಿಯುತ್ತಾ ಬಂದರೆ ರಕ್ತಭೇದಿ ನಿಂತು ಹೋಗುವುದು.
10. ಒಳ್ಳೆಯ ಜೇನು ತುಪ್ಪದಲ್ಲಿ ಕರಿಬೇವಿನ ಎಲೆಯನ್ನು ಅದ್ದಿ ತಿನ್ನುತ್ತಾ ಬಂದರೆ ರಕ್ತ ಭೇದಿ ನಿಂತು ಹೋಗುತ್ತದೆ
11. ಬೀಟ್ ರೂಟ್ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅಮಶಂಕೆ ನಿವಾರಣೆ ಯಾಗುವುದು.
12. ತಣ್ಣೀರಿನಲ್ಲಿ ದಾಳಿಂಬೆ ಬೀಜವನ್ನು ಅರೆದು ನೀರಿನಲ್ಲಿ ಕದಡಿ ಕುಡಿಯುವುದರಿಂದ ಅಮಶಂಕೆ ನಿವಾರಣೆ ಆಗುವುದು.
13. ನೆರಳೆ ಹಣ್ಣಿನ ಷರಬತ್ತು ಅಂಗಡಿಗಳಲ್ಲಿ ಸಿಕ್ಕುತ್ತದೆ. ಅದನ್ನು ಸೇವಿಸುತ್ತಾ ಪಥ್ಯದಲ್ಲಿದ್ದು ಮಜ್ಜಿಗೆ ಕುಡಿಯುತ್ತಾ ಬರಲು ಅಮಶಂಕೆ ಗುಣವಾಗುವುದು.
14. ಕುರಿಯ ಹಾಲನ್ನು ಶೇಖರಿಸಿ ಅದಕ್ಕೆ ನಿಂಬೇರಸವನ್ನು ಹಿಂಡಿ ಸೇವಿಸುವುದರಿಂದ ಅಮಶಂಕೆ ನಿವಾರಣೆ ಆಗುತ್ತದೆ.
15. ಚೆನ್ನಾಗಿ ಬಲಿತಿರುವ ಸೀವೆ ಕಾಯಿಯ ತಿರುಳನ್ನು ಹಾಲಿನಲ್ಲಿ ಹಾಕಿ,ಜೇನು ಸೇರಿಸಿ ಕುಡಿಯುವುದರಿಂದ ಅಮಶಂಕೆ ಗುಣವಾಗುವುದು .
16. ಬಾಳೇಕಾಯಿಯನ್ನು ಬಿಸಿ ಬೂದಿಯಲ್ಲಿಟ್ಟು ಚೆನ್ನಾಗಿ ಬೆಂದಮೇಲೆ ತಿನ್ನುವುದರಿಂದ ರಕ್ತಭೇದಿ ಗುಣವಾಗುವುದು.
17. ಅಮಶಂಕೆಯಿಂದ ನರಳುತ್ತಿರುವವರು ಈರುಳ್ಳಿಯನ್ನು ಸೇವಿಸುತ್ತಾ ಬಂದರೆ ಶೀಘ್ರಗುಣ ಕಂಡುಬರುವುದು
18. ಒಂದು ಲೋಟ ಮಜ್ಜಿಗೆಯಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮಸೆದು ಸೇವಿಸುತ್ತಾ ಬರಲು ಆಮಶಂಕೆ ನಿವಾರಣೆ ಆಗುವುದು
19. ಉತ್ತರಣಿ ಸೊಪ್ಪಿನ ರಸ ಎರಡು ಚಮಚಕ್ಕೆ ಎರಡು ಚಮಚ ಜೇನು ಬೆರೆಸಿ, ಸಕ್ಕರೆ ಬೆರೆಸಿ ಸೇವಿಸಲು ಅಮಶಂಕೆ ಗುಣವಾಗುವುದು.