ಕಾಂತಾರ : ಚಾಪ್ಟರ್ 1 ಚಿತ್ರವನ್ನು ಬಾಲಿವುಡ್ ಮಂದಿ ಒಪ್ಪಿ ಅಪ್ಪಿಕೊಂಡಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆಯಾಗಿ ರಿತೇಶ್ ದೇಶಮುಖ್ ರಿಷಬ್ ಶೆಟ್ಟಿ ಅವರನ್ನು ಈಗ ಹಾಡಿ ಹೊಗಳಿದ್ದಾರೆ. IMAX ನಲ್ಲಿ ರಿತೇಶ್ ದೇಶಮುಖ್ ಸಿನಿಮಾ ವೀಕ್ಷಿಸಿ ಕಾಂತಾರಕ್ಕೆ ಮೆಚ್ಚುಗೆ ಚಪ್ಪಾಳೆ ತಟ್ಟಿ ಸಿನಿಮಾ ತಂಡವನ್ನು ಅಭಿನಂದಿಸಿದ್ದಾರೆ.
ಕಾಂತಾರವನ್ನು IMAX ನಲ್ಲಿ ನೋಡಿದ್ದು ನಿಜಕ್ಕೂ ಒಂದು ಅದ್ಭುತ ಭಾರತೀಯ ಚಲನಚಿತ್ರ ವೀಕ್ಷಣೆಯ ಅನುಭವವಾಗಿತ್ತು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ನೀವೊಬ್ಬ ಅದ್ಭುತ ವ್ಯಕ್ತಿಯಾಗಿದ್ದು. ನಿಮ್ಮ ಅಭಿನಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಉನ್ನತ ದರ್ಜೆಯ vfx, ಆಕ್ಷನ್, ಅತ್ಯುತ್ತಮ ಛಾಯಾಗ್ರಹಣ, ರೋಮಾಂಚಕ BGM, ಧ್ವನಿ ವಿನ್ಯಾಸ, ನಿರ್ಮಾಣ ಎಲ್ಲವೂ ಅತ್ಯುತ್ತಮವಾಗಿದೆ.
ರುಕ್ಮಿಣಿ ವಸಂತ್ ಉತ್ತಮ ನಟಿ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಗುಲ್ಶನ್ ದೇವಯ್ಯ ನಿಮ್ಮ ದುಷ್ಟ ವ್ಯಕ್ತಿತ್ವದ ಅಭಿನಯ ಅಮಲೇರಿಸುವಷ್ಟು ಅದ್ಭುತವಾಗಿತ್ತು. ಈ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಕಾರಣರಾದ ಹೊಂಬಾಳೆ ಫಿಲ್ಮ್‌ನವರಿಗೆ ಅಭಿನಂದನೆಗಳು. ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದು ಶ್ಲಾಘಿಸಿದ್ದಾರೆ.














