ಮನೆ ಯೋಗಾಸನ ಬಲಿಷ್ಠವಾದ ಮೂಳೆಗಳಿಗೆ ಅದ್ಭುತವಾದ ಯೋಗ ಭಂಗಿಗಳು

ಬಲಿಷ್ಠವಾದ ಮೂಳೆಗಳಿಗೆ ಅದ್ಭುತವಾದ ಯೋಗ ಭಂಗಿಗಳು

0

ಯೋಗಾಸನವು ಹಲವಾರು ವರ್ಷಗಳಿಂದ ಪ್ರಪಂಚದಾದ್ಯಂತ ಅಭ್ಯಾಸ ಮಾಡುತ್ತಿದ್ದಾರೆ. ಯೋಗ, ಅದರ ಅದ್ಭುತ ಪ್ರಯೋಜನಗಳಿಂದ ಜನಪ್ರಿಯತೆ ಪಡೆದಿದೆ. ಎಲ್ಲರಿಗೂ ತಿಳಿದಿರುವಂತೆ, ಯೋಗ ಎಲ್ಲಾ ರೀತಿಯ ಕಾಯಿಲೆಗಳ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಯೋಗಾಭ್ಯಸ ಮಾಡುವುದರಿಂದ ನಿಮ್ಮ ಮೂಳೆಗಳನ್ನು ಬಲಿಷ್ಠವಾಗಿಸುತ್ತದೆ.

ಇತ್ತೀಚೆಗೆ ಬಹುತೇಕರಿಗೆ ಮೂಳೆ ಮುರಿತ, ಮೂಳೆ ಸವೆಯುವ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಋತುಬಂಧದ ನಂತರ ಯೋಗವು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸಬಹುದು. ಯೋಗ ನಮ್ಯತೆ, ಸ್ಥಿರತೆ ಮತ್ತು ಚುರುಕುತನವನ್ನು ಸುಧಾರಿಸಲು ಸಹಾಯ ಮಾಡುತ್ತದೆ

ನಿಮ್ಮ ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ೫ ಯೋಗ ಭಂಗಿಗಳು ಇಲ್ಲಿವೆ.

1. ಯೋಗದಿಂದ ಮೂಳೆಯ ಆರೋಗ್ಯ

ಮುಖ್ಯವಾಗಿ ಯೋಗ ದೇಹದ ಸಮತೋಲನ ಮತ್ತು ಪ್ರೊಪ್ರಿಯೋಸೆಪ್ಟಿವ್ ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಹರಿವಿನ ಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮ್ಮ ಬೆನ್ನುಮೂಳೆಗಳನ್ನು ಆರೋಗ್ಯಕರವಾಗಿಸಲು ಯೋಗದ ಭಂಗಿಗಳು ಸಹಾಯ ಮಾಡುತ್ತವೆ. ವಾರಕ್ಕೆ ೫ ದಿನಗಳಂತೆ, ಪ್ರತಿನಿತ್ಯ ೩೦ ನಿಮಿಷಗಳ ಕಾಲ ಲೇಖನದಲ್ಲಿ ಹೇಳಲಾಗುವ ಯೋಗ ಭಂಗಿಗಳನ್ನು ಮಾಡುವುದರಿಂದ ಬಲಿಷ್ಠವಾದ ಮೂಳೆಗಳನ್ನು ಪಡೆಯಬಹುದು.

2. ವೀರಭದ್ರಾಸನ

ಈ ಆಸನವು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಆಸನವನ್ನು ಮಾಡುವ ವಿಧಾನ ಇಲ್ಲಿದೆ.

• ಮೊದಲು ನಿಂತುಕೊಳ್ಳಿ, ನಿಮ್ಮ ಎರಡೂ ಪಾದಗಳು ಸಮಾನಾಂತರವಾಗಿ ಚಾಚಿ.

• ನಿಮ್ಮ ಎಡಗಾಲನ್ನು ಅಲ್ಲಿಯೇ ಇರಿಸಿ, ನಿಮ್ಮ ಬಲಗಾಲಿನ ಕಡೆ ದೇಹವನ್ನು ತಿರುಗಿಸಿ.

• ನಿಮ್ಮ ಮುಂಭಾಗದ ಮೊಣಕಾಲುಗಳನ್ನು ೯೦ ಡಿಗ್ರಿ ಕೋನದಲ್ಲಿ ಬಗ್ಗಿಸಿ, ನಿಮ್ಮ ಹಿಂಭಾಗದ ಕಾಲನ್ನು ನೇರವಾಗಿ ಇರಿಸಿ.

• ನಿಮ್ಮ ಎರಡೂ ಕೈಗಳನ್ನು ಭುಜಕ್ಕೆ ಸರಿಸಮಾನವಾಗಿ ಚಾಚಿ.

• ಈ ಒಂದು ಭಂಗಿಯಲ್ಲಿ ೩೦ ಸೆಕೆಂಡ್ ಗಳ ಕಾಲ ಹಾಗೆಯೇ ಇದ್ದು, ಪುನರಾವರ್ತಿಸಿ.

3. ಶವಾಸನ

ಶವಾಸನವು ಬೆನ್ನು ನೋವಿಗೆ ಹಾಗು ಶಕ್ತಿಯುತ ಮೂಳೆಗೆ ಅತ್ಯದ್ಭುತವಾದ ಆಸನವಾಗಿದೆ. ಈ ಆಸನವನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.

• ಮೊದಲು ನಿಮ್ಮ ದೇಹವನ್ನು ಮಲಗುವ ಸ್ಥಿತಿಗೆ ತನ್ನಿ. ನಿಮ್ಮ ಕೈ ಹಾಗು ಕಾಲುಗಳಿಗೆ ಸಂಪೂರ್ಣವಾದ ವಿಶ್ರಾಂತಿ ಕೊಡಿ.

• ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ದೇಹಕ್ಕೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ.

• ದೀರ್ಘವಾದ ಹಾಗು ನಿಧಾನವಾಗಿ ಉಸಿರು ಬಿಡುತ್ತಾ ಇರಿ.

• ಇದೇ ಭಂಗಿಯಲ್ಲಿ ೨ ನಿಮಿಷಗಳ ಕಾಲ ಇದ್ದು, ಸಾಮಾನ್ಯ ಸ್ಥಿತಿಗೆ ಬನ್ನಿ ಹಾಗು ಪುನರಾವರ್ತಿಸಿ.

4. ಕುರ್ಚಿ ಭಂಗಿ ಅಥವಾ ಉತ್ಕಟಾಸನ

ಉತ್ಕಟಾಸನವು ಮೂಳೆಗಳಿಗೆ ಅತ್ಯಂತ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ. ಮಾಡುವ ವಿಧಾನ ಇಲ್ಲಿದೆ.

• ನಿಮ್ಮ ಪಾದಗಳ ಮೇಲೆ ಸರಿಯಾಗಿ ನಿಲ್ಲಿ, ನೇರವಾದ ದೃಷ್ಟಿ ಇರಲಿ.

• ನಿಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ನೀವು ಕಾಲ್ಪನಿಕ ಕುರ್ಚಿಯಲ್ಲಿ ಕುಳಿತಿರುವಂತೆ ಎರಡು ಕಾಲುಗಳ ಮೇಲೆ ನಿಮ್ಮ ಮೊಣಕಾಲುಗಳನ್ನು ಬಾಗಿಸಿ.

• ನಿಮ್ಮ ಸೊಂಟವನ್ನು ಹಿಂದೆ ಎಳೆದು, ನಿಮ್ಮ ಮೊಣಕಾಲನ್ನು ಬಾಗಿಸಿರಿಸಿ.

• ಸುಮಾರು ೩೦ ರಿಂದ ೬೦ ಸೆಕೆಂಡ್ ಗಳ ಕಾಲ ಉಸಿರನ್ನು ತೆಗೆದುಕೊಳ್ಳುವುದು ಹಾಗು ಬಿಡುವುದನ್ನು ಈ ಭಂಗಿಯಲ್ಲಿ ಮಾಡಿ.

• ಈ ಭಂಗಿಯನ್ನು ೧೦ ರಿಂದ ೧೫ ಬಾರಿ ಪುನರಾವರ್ತಿಸಿ.

5.ತಡಾಸನ

ತಡಾಸನವು ದೇಹದಲ್ಲಿನ ರಕ್ತಪರಿಚಲನೆ ಸುಗಮವಾಗಿಸಲು ಹಾಗು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಾಡುವ ವಿಧಾನ ಇಲ್ಲಿದೆ.

• ನಿಮ್ಮ ಕಾಲುಗಳ ಮೇಲೆ ನೇರವಾಗಿ ನಿಂತುಕೊಳ್ಳಿ. ನಿಮ್ಮ ಎರಡೂ ಕೈಗಳನ್ನು ಆಕಾಶಕ್ಕೆ ಚಾಚುವಂತೆ ಮೇಲಕ್ಕೆ ಎತ್ತಿ.

• ತೊಡೆಯ ಸ್ನಾಯುಗಳನ್ನು ಬಿಗಿಯಾಗಿಸಿ.ಈ ಭಂಗಿ ಮಾಡುವಾಗ ಆಗಾಗ ನಿಮ್ಮ ಮೊಣಕಾಲುಗಳನ್ನು ಎತ್ತುತ್ತಾ ಇರಿ.

• ನಿಮ್ಮ ಪಾದ ಹಾಗು ಸೊಂಟದ ಸಹಾಯದಿಂದ ದೇಹವನ್ನು ಮೇಲಕ್ಕೆ ಎತ್ತಿ.

• ನಿಧಾನವಾಗಿ ಉಸಿರು ತೆಗೆದುಕೊಳ್ಳುವುದು ಹಾಗು ಬಿಡುವುದು ಮಾಡಿ.

• ೧೦ ರಿಂದ ೧೫ ಬಾರಿ ಈ ಭಂಗಿ ಮಾಡಿದ ನಂತರ ನಿಧಾನವಾಗಿ ನಿಮ್ಮ ಕೈಗಳನ್ನು ಕೆಳಗೆ ಬಿಡಿ.

6. ಪ್ಲ್ಯಾಂಕ್ ಪೋಸ್

ಈ ಪರಿಣಾಮಕಾರಿ ಭಂಗಿಯು ನಿಮ್ಮ ಕೆಳಹೊಟ್ಟೆ ಹಾಗು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಮಾಡುವ ವಿಧಾನ ಇಲ್ಲಿದೆ.

• ಈ ಭಂಗಿಯನ್ನು ನೆಲದ ಮೇಲೆ ಪ್ರಾರಂಭಿಸಿ. ನಿಮ್ಮ ತೋಳುಗಳು ಹಾಗು ಮೊಣಕಾಲುಗಳ ಮೇಲೆ ನಿಮ್ಮ ದೇಹದ ಭಾರವನ್ನು ಕೈಗಳ ಮೇಲೆ ಬಿಡಿ.

• ನಿಮ್ಮ ಎಲ್ಲಾ ಬೆರಳುಗಳನ್ನು ಅಗಲವಾಗಿಡಿ. ಇದರಿಂದ ನಿಮ್ಮ ಮಣಿಕಟ್ಟು ನೋವಿಗೆ ಒಳಗಾಗುವುದಿಲ್ಲ.

• ನಿಧಾನವಾಗಿ ಉಸಿರಾಡಿ, ನಿಮ್ಮ ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ.

• ನಿಮ್ಮ ದೇಹವು ತಲೆಯಿಂದ ಹಿಮ್ಮಡಿಯವರೆಗೆ ನೇರವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.

• ಈ ಭಂಗಿಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ಇದ್ದು, ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬನ್ನಿ. ೫ ರಿಂದ ೧೦ ಬಾರಿ ಪುನರಾವರ್ತಿಸಿ.

ಹಿಂದಿನ ಲೇಖನಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಮುಂದಿನ ಲೇಖನಕಾರಣವಿಲ್ಲದೇ ಹವಳದ ಉಂಗುರ ಧರಿಸಿದರೆ ಈ ಅಡ್ಡಪರಿಣಾಮಗಳಾಗುತ್ತೆ..!