ಮನೆ ಸುದ್ದಿ ಜಾಲ ಅಂಬಿಗರ ಚೌಡಯ್ಯ ಮತ್ತು ವೇಮನ ವಿಚಾರವಂತ ವಚನಕಾರರು: ಶಿವಕುಮಾರ್

ಅಂಬಿಗರ ಚೌಡಯ್ಯ ಮತ್ತು ವೇಮನ ವಿಚಾರವಂತ ವಚನಕಾರರು: ಶಿವಕುಮಾರ್

0

ಮೈಸೂರು: ಅಂಬಿಗರ ಚೌಡಯ್ಯನವರು ಮತ್ತು ವೇಮನ ಇಬ್ಬರು ವಿಚಾರವಂತ ವಚನಕಾರರು. ಇವರು ರಚಿಸಿರುವ ಎಷ್ಟೋ ವಚನಗಳು ಸಮಾಜದ ನಿರ್ಮಾಣಕ್ಕೆ ಉಪಯುಕ್ತವಾದ ಅಂಶಗಳಿಂದ ಕೂಡಿವೆ. ಇವುಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಮತ್ತು ಮಹಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯನವರು ಸಮುದ್ರದ ನೀರಿನ ಹಾಗೆ ಆಕಾಶಕ್ಕೆ ಏರಿ ಮಳೆಯ ನೀರಾಗಿ ಪರಿವರ್ತನೆಯಾಗಬೇಕು ಎಂಬ ವಚನವನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ ಎಂದರು.

ರಾಜಕೀಯವಾಗಲಿ ವಾಸ್ತವವಾಗಲಿ ಜಾತಿಗಳು ಮತ್ತು ಸಮುದಾಯಗಳು ಒಗ್ಗಟ್ಟಾಗಿ ನಿಲ್ಲುವುದರಿಂದ ಮಾತ್ರ ನಮ್ಮಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಅದ್ದರಿಂದ ಒಗ್ಗಟಾಗಿ ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಕಾರ್ಯವನ್ನು ಮಾಡಬೇಕು ಎಂದ ಅವರು ಅಂಬಿಗರ ಚೌಡಯ್ಯನವರ ಹೆಸರನ್ನು ಅತೀ ಶೀಘ್ರದಲ್ಲೇ ಮೈಸೂರಿನ ಪ್ರಮುಖ ರಸ್ತೆಗೆ ನಾಮಕರಣ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಪ್ರಮುಖ ಭಾಷಣಕರಾರದ ಕೆ.ಎಸ್ ರಾಮ್ ಪ್ರಸಾದ್ ಅವರು ಅಂಬಿಗರ ಚೌಡಯ್ಯ ಮತ್ತು ವೇಮನ ಅವರ ಜೀವನ ಚರಿತ್ರೆ ಪ್ರಮುಖ ವಚನಗಳು ಹಾಗೂ ಸಂಬAಧಿತ ವಿಚಾರಗಳ ಬಗ್ಗೆ ತಿಳಿಸಿದರು.

ಶಿವಶರಣರಲ್ಲೇ ಅಂಬಿಗರ ಚೌಡಯ್ಯ ಅವರು ಅತ್ಯಂತ ಪ್ರಮುಖರು. ಅಂಬಿಗ ಚೌಡಯ್ಯ ಅವರು ಹಿಂದುಳಿದ ಜಾತಿಯವರಿಗೆಗೋಸ್ಕರ ನಡೆಸಿದ್ದ ಹೋರಾಟ ಹಾಗೂ ಅಂಬಿಗ ಚೌಡಯ್ಯನವರು ಪರಿಶಿಷ್ಟ ಜಾತಿಯವರ ಬಗ್ಗೆ ನುಡಿದ ವಚನದ ಅರ್ಥವನ್ನು ತಿಳಿಸಿಕೊಟ್ಟರು. ಆಂಧ್ರಪ್ರದೇಶದಲ್ಲಿ ವ್ಯಭಿಚಾರಿಯಾದ್ದ ವೇಮನ ಜೀವನದಲ್ಲಿ ನಡೆದ ಹಲವು ಘಟನೆಗಳಿಂದ ಬದಲಾಗಿ ವೈರಾಗ್ಯವನ್ನು ಪಡೆದ ವಿಚಾರವನ್ನು ತಿಳಿಸಿದರು. ಈ ಇಬ್ಬರು ಶಿವಶರಣರು ಮತ್ತು ವಚನಕಾರರ ವಿಚಾರವಂತಿಕೆಗಳನ್ನು ಜೀವನದ ಅಡಿಪಾಯಕ್ಕೆ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ ಬಿ ರೂಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಕರದ ಡಾ ಎಂ.ಇ ಸುದರ್ಶನ್ ಸೇರಿದಂತೆ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.