ಮನೆ ಸ್ಥಳೀಯ ತಾರತಮ್ಯ ತೊಡೆದುಹಾಕಿ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ: ಟಿ.ಎಸ್. ಶ್ರೀವತ್ಸ

ತಾರತಮ್ಯ ತೊಡೆದುಹಾಕಿ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ: ಟಿ.ಎಸ್. ಶ್ರೀವತ್ಸ

0

ಮೈಸೂರು: ಮನುಷ್ಯರ ನಡುವೆ ಇದ್ದಂತಹ ತಾರತಮ್ಯವನ್ನು ತೊಡೆದುಹಾಕಿ ತಮ್ಮ ವಚನಗಳ ಮೂಲಕ ಬೆಳಕನ್ನು ಚೆಲ್ಲಿದವರು ಅಂಬಿಗರ ಚೌಡಯ್ಯ ಇಂತಹ ವಚನಕಾರರ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿ ಇರುವುದು ಸಂತೋಷಕರವಾದoತಹ ವಿಷಯ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀ ವತ್ಸ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮoದಿರಲ್ಲಿ ಹಮ್ಮಿಕೊಂಡಿದ್ದ, ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

 ಅನುಭವ ಮಂಟಪದ ಸುತ್ತ ನದಿ, ಹೊಳೆ ಏನು ಇಲ್ಲ ಹೇಗೆ ನೀವು ಅಂಬಿಗರ ವೃತ್ತಿಯನ್ನು ಮಾಡುತ್ತೀರಾ ಎಂದು ಕೇಳಿದಾಗ ಮಾನವ ಎಂಬ ಸಂಪನ್ಮೂಲ ಏನಿದೆ ಅದರ ಹೊಳೆಯಲ್ಲಿ ಮನುಷ್ಯರ ನಡುವೆ ತಾರತಮ್ಯ ಹೊಡೆದು ಹಾಕಿ ಅವರೆಲ್ಲರನ್ನೂ ದಡ ಸೇರಿಸುತ್ತೇನೆ. ಅವರಲ್ಲಿ ಸಮಾಜ ಶೋಷಣೆಗೆ ಒಳಗಾದ ಮನುಷ್ಯರನ್ನು ಮೇಲೆತ್ತುವ ಕಾಯಕವೇ ನನ್ನ ಅಂಬಿಗನ ವೃತ್ತಿ ಎಂಬ ವಿಚಾರವನ್ನು ಅಂಬಿಗ ಚೌಡಯ್ಯ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅನುಭವ ಮಂಟಪವನ್ನು ಮೊದಲ ಪಾರ್ಲಿಮೆಂಟ್ ಎಂದು ಕರೆಯುತ್ತೇವೆ. ಅನುಭವ ಮಂಟಪದ ಚಿತ್ರಣವನ್ನು ವಿಧಾನಸಭೆಯಲ್ಲಿ ಸ್ಪೀಕರ್ ಅವರು ಅನಾವರಣ ಮಾಡಿರುವುದು ಶ್ಲಾಘನೀಯ ಎಂದರು.

 ಅಂಬಿಗರ ಚೌಡಯ್ಯ ಅವರು ಸಾವಿರಾರು ವಚನಗಳನ್ನು ಬರೆದಿದ್ದಾರೆ ಎಂಬ ಮಾಹಿತಿ ನಮಗೆ ಇದ್ದರೂ ಸಹ ಆನೇಕ ಗ್ರಂಥಗಳಲ್ಲಿ ಅವರ ಬಗ್ಗೆ ಹೇಳಬೇಕಾದರೆ ಅಂಬಿಗರ ಚೌಡಯ್ಯ ಎಂಬ ನಾಮಾಂಕಿತದೊoದಿಗೆ ಅವರ ವಚನಗಳು ಕೊನೆಗೊಳ್ಳುತ್ತಿದ್ದವು. ಇಂತಹ ಸಂಗತಿಯ ನಡುವೆಯೂ ಕೆಲವು ಕಡೆ 275 ರಿಂದ 300 ವಚನಗಳು ಉಳಿದುಕೊಂಡಿದ್ದು ಅವುಗಳು ಮಾತ್ರ ಸಂಗ್ರಹವಾಗಿವೆ ಎಂದು ತಿಳಿಸಿದರು.

ಅಂಬಿಗರ ಚೌಡಯ್ಯ ನವರ ವಚನವನ್ನು ಶುಭಕಾರ್ಯಗಳಲ್ಲಿ ಹೇಳುತ್ತಾ ಹೆಚ್ಚಿನ ಪ್ರಚಾರಕ್ಕೆ ಒಳಪಡಿಸುತ್ತ ಪ್ರಸ್ತುತದಲ್ಲಿಯೂ ಉಳಿದುಕೊಳ್ಳುವಂತೆ ಮಾಡಿದವರು ಅವರ ಮಗ ಎಂದು ಹೇಳಿದರು. ಜೊತೆಗೆ ನಮ್ಮೆಲ್ಲರಿಗೂ ಈ ಕಾಲದಲ್ಲಿಯೂ ಸಹ ಬೆಳಕನ್ನು ಚೆಲ್ಲುತ್ತ ಇರುವುದು ಅಂಬಿಗ ಚೌಡಯ್ಯ ರವರ ವಚನಗಳು ಎಂದರು.

ಮಹಾರಾಜ ಕಾಲೇಜಿನ, ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಆರ್.ಎನ್. ಪದ್ಮನಾಭ ಅವರು ಮಾತನಾಡಿ ಅಂಬಿಗರ ಚೌಡಯ್ಯ ದೈತ್ಯ ಪ್ರತಿಭೆ, ಮಹಾಯೋಗಿ, ಭಾರತ ದರ್ಶನದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ, ಅವರ ಅನುಭವದಿಂದ ಸತ್ಯವನ್ನು ತಿಳಿಸಿದ ಮಹಾಪುರುಷ, ಮಹಾಹರಿಕಾರ, ಕ್ರಾಂತಿಕಾರಿ ಚಿಂತಕ, ಎಲ್ಲದಗಿಂತ ಹೆಚ್ಚಾಗಿ ಇವರು ಸಮಾಜ ಸುಧಾರಕರು ಹಾಗೂ ನೇರ ನುಡಿಯನ್ನು ಹೊಂದಿದ್ದವರು. ಇಂತಹವರು ನಿಜವಾಗಿಯೂ ನಮ್ಮೆಲ್ಲರ ಬದುಕಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸಮಾಜದ ಭೂಟಾಟಿಕೆಯ ವ್ಯವಸ್ಥೆಯನ್ನು ಕಂಡು ಕೋಪಕೊಂಡು ಸಮಾಜದ ಧೋರಣೆಗಳನ್ನು ನಿಜ ಶರಣರಾಗಿ ಖಂಡಿಸಿದವರು ಅಂಬಿಗರ ಚೌಡಯ್ಯ. ನಿಜವಾಗಿಯೂ ಅವರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅವರ ವಚನಗಳನ್ನು ಓದಿ ಅಳವಡಿಸಿ ಕೊಳ್ಳಬೇಕು ಇದರಿಂದ ನಾವು ಅವರಿಗೆ ಗೌರವವನ್ನು ಸಲ್ಲಿಸಿದಂತೆ ಆಗುತ್ತದೆ ಎಂದು ಹೇಳಿದರು.

ನಮ್ಮ ಬದುಕಿನಲ್ಲಿ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಹಾಗೂ ವಚನಗಳು ಎಂಬ ಐದು ಚಿನ್ನದ ಗಣಿಗಳಿದ್ದು, ಮೇಲಿನ ನಾಲ್ಕು ಗಣಿಗಳಿಗಿಂತ ವಚನ ಸಾಹಿತ್ಯ ತುಂಬಾ ಸುಲಭ, ಸಾಧಾರಣ, ಹಾಗೂ ಸರಳವಾಗಿದೆ ಎಂದರು. ಈ ಐದು ಚಿನ್ನದ ಗಣಿಗಳನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತರೋ ಅಂತಹವರು ಸಂತೋಷ, ಸುಖ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇವರು ಒಬ್ಬ ಮಹಾವಿಚಾರವಂತರಾಗಿದ್ದರು. ಇವರು ವಿಚಾರ ಮಾಡದೆ ಯಾವುದನ್ನು ಒಪ್ಪಿಕೊಳ್ಳುತ್ತಾ ಇರಲಿಲ್ಲ, ಹಿರಿಯರು ಹೇಳಿದ್ದಾರೆ ಎಂದು ಅವರು ಕೇಳಲಿಲ್ಲ ಕಿರಿಯರು ಹೇಳಿದ್ದಾರೆ ಎಂದು ಅವರನ್ನು ಕಡೆಗಣಿಸಲಿಲ್ಲ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದರು. ಅದೇ ರೀತಿಯಲ್ಲಿ ಯಾವುದೇ ವಿಷಯ ಕುರಿತು ವಿಚಾರಮಾಡುವಂತಹ ಶಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇವರು ಏಕದೇವೋ ಉಪಸಕರಾಗಿದ್ದರು. ಶಿವನಲ್ಲಿ ದೇವರನ್ನು ನೆನೆದು ಹಸಿವನ್ನು ಮುಚ್ಚಿ, ಜನರನ್ನು ಗೌರವಿಸಿ ನಡೆದುಕೊಂಡರೆ ಮೋಕ್ಷ ಸಾಧ್ಯ ಎಂಬ ಮಾತನ್ನು 12 ನೇ ಶತಮಾನದಲ್ಲೇ ನಮಗೆ ಹೇಳಿದ್ದಾರೆ. 12 ನೇ ಶತಮಾನದಲ್ಲಿ ಹೇಳಿದ ಮಾತನ್ನು 21ನೇ ಶತಮಾನದಲ್ಲಿ ವೈಭವೀಕರಿಸಿ ನೋಡುತ್ತಿದ್ದೇವೆ ಎಂದರೇ ಅದು ಅವರು ಹೇಳಿದ ಮಾತು, ಮಾಡಿಕೊಂಡು ಬಂದ ಕೆಲಸ, ನಡೆದುಕೊಂಡು ಬಂದ ವಿಚಾರಗಳಿಗೆ ಎಷ್ಟು ಬೆಲೆ ಇದೆ ಇದನ್ನು ಕೇಳುತ್ತಿರುವ ನಾವೇ ಪುಣ್ಯವಂತರು ಎಂದು ಹೇಳಿದರು. ಇದೇ ರೀತಿ ಅಂಬಿಗರ ಚೌಡಯ್ಯ ಜಯಂತಿ ನಿರಂತರವಾಗಿ ನಡೆಯಲಿ ಅವರ ವಚನಗಳು ಎಲ್ಲರಿಗೂ ಸ್ಪೂರ್ತಿಯಾಗಿ ದಾರಿದೀಪವಾಗಲಿ ಎಂದರು.

ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇಂತಹ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತ ಇರುವುದು ಉತ್ತಮವಾಗಿದೆ. ಇಂತಹ ಒಳ್ಳೆಯ ಕೆಲಸಗಳನ್ನು ಇನ್ನು ಹೆಚ್ಚು ಮಾಡುವುದರಿಂದ ಸಮಾಜದಲ್ಲಿ ಎಲ್ಲರು ಒಂದೇ ಎಂಬ ಮಾನೋಭಾವ ಪ್ರತಿಯೊಬ್ಬರಲ್ಲೂ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್, ಮುಖಂಡರಾದ ರಂಗಸ್ವಾಮಿ ಹಾಗೂ ಅಂಬಿಗರ ಚೌಡಯ್ಯ ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.