ಮನೆ ಅಪರಾಧ ಅಂಬ್ಯುಲೆನ್ಸ್ – ಬೈಕ್ ಅಪಘಾತ: ಮೂವರ ಸಾವು

ಅಂಬ್ಯುಲೆನ್ಸ್ – ಬೈಕ್ ಅಪಘಾತ: ಮೂವರ ಸಾವು

0

ಶಿವಮೊಗ್ಗ: ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂರು ಜನ ಬೈಕ್ ಸವಾರರು ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ  ತರಲಘಟ್ಟ ಬಳಿ ಜೂ.29ರ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ.

Join Our Whatsapp Group

ಪ್ರಸನ್ನ (25), ಕಾರ್ತಿಕ್ (27), ಅಜಯ್ (25) ಮೃತ ದುರ್ದೈವಿಗಳು. ಮೃತಪಟ್ಟವರನ್ನು ಹೊಸ ಜೋಗದ ನಿವಾಸಿಗಳು ಎನ್ನಲಾಗುತ್ತಿದೆ.

ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಹಾಗೂ ಶಿಕಾರಿಪುರದ ಕಡೆಯಿಂದ ಹೊಸ ಜೋಗದ ಕಡೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು, ನಾಲ್ವರಿಗೆ ಗಾಯ
ಮುಂದಿನ ಲೇಖನಕರಾವಳಿ ಜಿಲ್ಲೆಗಳಲ್ಲಿ ಮೂರು ದಿನಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ