ಮನೆ ರಾಷ್ಟ್ರೀಯ ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – ಮಹುವಾ ಮೊಯಿತ್ರಾ ಹೇಳಿಕೆ..!

ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – ಮಹುವಾ ಮೊಯಿತ್ರಾ ಹೇಳಿಕೆ..!

0

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.

ಭಾರತಕ್ಕೆ ಬಾಂಗ್ಲಾ ಪ್ರದೇಶಗಳ ಒಳನುಸುಳುವಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಅಮಿತ್‌ ಶಾ ತಲೆಯನ್ನು ಕತ್ತರಿಸಿ, ಪ್ರದರ್ಶನಕ್ಕಾಗಿ ಟೇಬಲ್‌ ಮೇಲೆ ಇಡಬೇಕು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಒಂದು ವೇಳೆ ಭಾರತದ ಗಡಿಯನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ರೆ, ನೂರಾರು ಸಂಖ್ಯೆಯಲ್ಲಿ ನುಸುಳುಕೋರರು ಒಳನುಸುಳುತ್ತಿದ್ದರೆ, ನಮ್ಮ ಮಹಿಳೆಯರನ್ನ ಅಗೌರವಿಸುತ್ತಿದ್ದರೆ ಅಥವಾ ನಮ್ಮ ಭೂಮಿಯನ್ನ ಅತಿಕ್ರಮಿಸಿಕೊಳ್ಳುತ್ತಿದ್ದರೆ..? ಅಮಿತ್‌ ಶಾ ಅವರ ತಲೆ ಕತ್ತರಿಸಿ ಟೇಬಲ್‌ ಮೇಲೆ ಪ್ರದರ್ಶನಕ್ಕಿಡುವುದು ನಿಮ್ಮ ಕರ್ತವ್ಯವಾಗಿದೆ. ಏಕೆಂದರೆ ಗಡಿ ಕಾಯಲು, ನುಸುಳುವಿಕೆ ತಡೆಯಲು ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ಮೋದಿಯ ಕೆಂಪುಕೋಟೆ ಭಾಷಣ ಉಲ್ಲೇಖಿಸಿದ ಮಹುವಾ, ʻಮೋದಿ ಕೆಂಪು ಕೋಟೆಯಲ್ಲಿ ನಿಂತು ನುಸುಳುಕೋರು ಜನಸಂಖ್ಯಾ ಬದಲಾವಣೆ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸದೇ ಗೃಹಸಚಿವರು ಮುಂದಿನ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಗಡಿಯಲ್ಲಿ ಭದ್ರತಾ ಪಡೆಗಳಿದ್ದೂ ಒಳನುಸುಳುವಿಕೆ ಏಕೆ ಮುಂದುವರಿಯುತ್ತಿದೆ..? ಅದರಲ್ಲೂ ಪಶ್ಚಿಮ ಬಂಗಾಳದ ಗಡಿಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಡೆಯುವಲ್ಲಿ ಶಾ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಹುವಾ ಮೊಯಿತ್ರಾ ಅವರ ಹೇಳಿಕೆಯಿಂದ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಮೊಯಿತ್ರಾ ಲಜ್ಜೆಗೆಟ್ಟ ಹೇಳಿಕೆ ನೀಡಿದ್ದಾರೆ. ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ಪ್ರದೀಪ್‌ ಭಂಡಾರಿಯಾಗಿದ್ದು, ರಾಜಕೀಯ ಮೀರಿದ ಅಪ್ಪಟ ದ್ವೇಷ ಭಾಷಣ, ಇದರಲ್ಲಿ ವಿಷ ತುಂಬಿದೆ ಎಂದು ಕಿಡಿಕಾರಿದ್ದಾರೆ.