ಮನೆ ದೇವಸ್ಥಾನ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರು

ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರು

0

ಕಳಸ ದೇವಾಲಯದ ಕಡತದಲ್ಲಿ ಅಗಸ್ತ್ಯ ಉಲ್ಲೇಖಿತ ಹೊರನಾಡ ಈ ಅನ್ನಪೂರ್ಣೇಶ್ವರಿ

Join Our Whatsapp Group

     ಶ್ರೀ ಕ್ಷೇತ್ರ ಹೊರನಾಡಿನ ಆಧಿ ದೇವತೆಯಾಗಿರುವ ಶ್ರೀ ಆದಿಶಕ್ತ್ಯಾ ತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ಮೂಲ ದೇವಿಯ ಈ ಯಂತ್ರ ಸ್ಥಾಪನೆ ತೇತ್ರಾಯುಗದಲ್ಲಿ ಅಗಸ್ತ್ಯರಿಂದ ಆಯಿತು ಎಂಬುದಾಗಿಯೂ ಅಗಸ್ತ್ಯರು ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದ ಕಳಸದಲ್ಲಿ ನೆಲೆಸಿದ್ದರೆಂದೂ ಪ್ರತೀತಿ.  ಮಾನವನ ಅಭಿಷ್ಟ ಸಿದ್ದಿಗೆ ಮೋಕ್ಷ ಸಾಧನೆಗೆ ಪರಮೇಶ್ವರನು ಪಾರ್ವತಿ ದೇವಿಗೆ ಬೋಧಿಸಿದ ಅನುಷ್ಠಾನ ಮಾರ್ಗವೇ ಈ ಯಂತ್ರ ಎಂದು ಕರೆಸಿಕೊಳ್ಳುತ್ತದೆ ವಿಗ್ರಹಾ ರಾಧನೆಗೂ ಮೊದಲು ಈ ಯಂತ್ರಾ ರಾಧನೆ ಪ್ರಚಲಿತವಿತ್ತೆಂಬುದು ತಿಳಿದುಬರುತ್ತದೆ.ಶಿವ,ಶಕ್ತಿಯ ಸಂಜ್ಞೆಯಾಗಿ ಅಭೀಷ್ಟ ಸಿದ್ದಿಯ ಸಂಕೇತವಾಗಿಯೂ ಇದೆ. ದೇವಿಯನ್ನು ನಿರ್ಮಲ ಚಿತ್ತದಿಂದ ಧ್ಯಾನಿಸಿದರೆ ಸಕಲ ಸಿದ್ದಿಯು ಸಾಧಿತವಾಗುವುದೆಂಬ ಅನನ್ಯ ನಂಬಿಕೆ ಇಂದಿಗೂ ಇದೆ.ಪವಾಡ  ಸದೃಶವಾದ ಹಲವಾರು ಘಟನೆಗಳೂ ಇವೆ.ಬೆಳೆಯ ಫಲವನ್ನೀವ ಆದಿದೇವತೆ ಯಾಗಿಯೂ ಶ್ರೀ ಅನ್ನಪೂರ್ಣೇಶ್ವರಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಭಕ್ತರ ಬೇಡಿಕೆಯನ್ನು ಸುಲಭವಾಗಿ ಈಡೇರಿಸುವ ಮಹಾಮ್ಮಾಯಿ, ವರದಯಿನಿ ಎಂಬ ಅಭಿದಾನಗಳೂ ಇವಳಿಗಿದೆ.ಈ ಕಾರಣದಿಂದಲೇ ಶ್ರದ್ಧಾ ಭಕ್ತಿಯಿಂದ ಇವಳಿಗೆ ನಡೆದುಕೊಳ್ಳುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಿದೆ. ಶ್ರೀ ಆದಿಶಂಕರರು ಕಾಶಿಯ ಅನ್ನಪೂರ್ಣೇಯನ್ನು ಸೋತ್ರ ಮಾಡಿದ್ದಾರೆ. ಕಳಸದ ಕಳಸೇಶ್ವರ ದೇವಾಲಯದ ಕಡತವೂಂದರಲ್ಲಿ ಅನಾಮಿಕರೊಬ್ಬರು ಬರೆದಿರುವ ಹೊರನಾಡ ಅನ್ನಪೂರ್ಣೇಯ ಕುರಿತು ಮಾಹಿತಿ ಪೌರಾಣಿಕ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಇದರಲ್ಲಿ ಪ್ರದೇಶದಲ್ಲಿ ಅಗಸ್ತ್ಯರು ಅನ್ನಪೂರ್ಣೇಶ್ವರಿಯ ಪೂಜಿಸಿದ ಕುರಿತು ಉಲ್ಲೇಖವಿದೆ .

 ಪುರಾತನ ಹಸ್ತಪ್ರತಿ ಶ್ರೀ ಅನ್ನಪೂರ್ಣೇಶ್ವರಿ :

    ಕಾಗದ ಬಳಕೆ ಇಲ್ಲದ ಸಂದರ್ಭದಲ್ಲಿ ಭಾರತೀಯರು ಶೀಲಾಫಲಕ ಅಥವಾ ಶಿಲಾ ಶಾಸನ, ತಾಮ್ರ ಫಲಕ ತಾಡೆಯೋಲೆ, ಭೂರ್ಜಪತ್ರ ಮೊದಲಾದ ಸಾಮಗ್ರಿಗಳನ್ನು ಬಳಸಿ ದಾನದ ವಿಚಾರ,ಆಡಳಿತದ ವಿಚಾರಗಳನ್ನು ದಾಖಲಿಸುವುದಿದೆ. ಅಂತಹ ಸಾಮಾಗ್ರಿಗಳಲ್ಲಿ ಶಿವಮೊಗ್ಗ.ಚಿಕ್ಕಮಂಗಳೂರು. ದಕ್ಷಿಣಕನ್ನಡ ಮತ್ತು ಉತ್ತರಕನ್ನಡಗಳಲ್ಲಿ ಹೆಚ್ಚಾಗಿ ಲಭ್ಯವಾಗುವಂತಹ ಕಡತಗಳೂ ಒಂದು. ಇವು ಚಿಕ್ಕಮಂಗಳೂರು  ಜೊತೆಗೆ ಮಲೆನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತ ಹವುಗಳಾಗಿದ್ದರೂ ಅದರ ಬಳಕೆ ಆಗದೆ ಇದ್ದಿದ್ದರಿಂದ ಇತಿಹಾಸ ರಚನೆಯಲ್ಲಿ ಕೇವಲ ಶಾಸನಗಳನ್ನು ಮಾತ್ರ ಬಳಸುವುದು ರೂಢಿಯಲ್ಲಿದ್ದು ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಇಂತಹ ಕಡತಗಳು ಬಂಡಿಗಟ್ಟಲೆ ಲಭ್ಯವಿದ್ದು ಶೃಂಗೇರಿ ಮಠದಲ್ಲಿಯೇ ಸಾಕಷ್ಟು ಕಡತಗಳು ಅಧ್ಯಯನಕ್ಕೆ ಒಳಗಾಗದೇ ಹಾಗೆಯೇ ಉಳಿದಿವೆ.ಇದರ ಜೊತೆಯಲ್ಲಿ ಬೆಂಗಳೂರಿನ ರಾಜ್ಯ ಪತ್ರಾಗಾರ ಇಲಾಖೆ, ಚೆನ್ನೈನ ಪ್ರಾಚ್ಯಪುಸ್ತಕ ಭಂಡಾರ,ಕೇರಳದ ಮಂಜೇಶ್ವರ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ. ಕೊಲ್ಲೂರು, ಕಮಲಶಿಲೆ, ಹಲಸ ನಾಡು, ಬೈಂದೂರು ಗೋವಾ ರಾಜ್ಯದ ಗೋಕರ್ಣ ಪತಗಾಳಿ ಮಠ, ಮೈಸೂರಿನ ವಿಭಾಗಿಯ ಪತ್ರಾಗಾರದಲ್ಲಿರುವ ಯಳಂದೂರು ಕಡತ, ಕಾಶಿಯಲ್ಲಿ ದೊರೆತ ಮೈಸೂರು ಅರಸರ ಕಾಲದ ಪ್ರಸಿದ್ಧ ದಳವಾಯಿ ಮನೆತನಗಳಲ್ಲೊಂದಾದ ಕಳಲೆ ನಂಜರಾಜರಿಗೆ ಸಂಬಂಧಿಸಿದ ಕಡತಗಳು ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಾಹದಾಗಿವೆ. ಡಾಕ್ಟರ್ ಕೆ ಏನ್ ಚಟ್ನಿಸ್, ಡಾಕ್ಟರ್ ಎ.ಕೆ. ಶಾಸ್ತ್ರಿ ಮೊದಲುಗೊಂಡು ಹಲವರು ಈ ಕಡಿತನ್ನಾಧರಿಸಿ  ಸಂಶೋಧನೆ ನಡೆಸಿದ್ದಾರೆ.ಚಿಕ್ಕಮಂಗಳೂರು ಕಳಸ ಹೊರನಾಡು ಈ ಪ್ರದೇಶದ ಇತಿಹಾಸ ಮೇಲೆ ಬೆಳಕು ಚೆಲ್ಲುವಂತಹ ಕಡತಗಳು ಕಲಸದ ಕಾಳೇಶ್ವರ ದೇವಾಲಯದ ಮಹಡಿಯ ಮೇಲೆ ತುಂಬಲಾಗಿತ್ತು. ಸುಮಾರು 800ಕ್ಕೂ ಹೆಚ್ಚು ಕಡತಗಳು ಹಿಂದೆ ಸುಣ್ಣ ಬಳಿದು….. ಇವರಿಗೆ ಓಟು ಕೊಡಿ ಎಂದು ಬರೆದು ಹಾಕಲಾಯಿತ್ತು. ಹೆಚ್ಚಿನ ಕಡತಗಳು ನಾಶವಾಗಿ ಅದರಲ್ಲಿ 50 60 ಕಡತಗಳು, ಅದೂ ಅಪೂರ್ವ ಅವ್ಯಸ್ಥೆಯಲ್ಲಿ ಲಭ್ಯವಾಯಿತು. ಇದನ್ನು ಕೆಳದಿ ಮಸ್ತು ಸಂಗ್ರಹಾಲಯ ರಕ್ಷಿಸುವ ಕೆಲಸ ನಿರ್ವಹಿಸುತ್ತಿದೆ. ಇನ್ನು ಇಂತಹ ಕಡಕಗಳ ಪತ್ರಾಗಾರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಕೆಳದಿ ಅರಸರ ಮೂರನೆಯ ರಾಜ್ಯದಾನಿ ಭುವನಗಿರಿದುರ್ಗದಲ್ಲಿದ್ದ ಸುಮಾರು ಸಾವಿರಕ್ಕೂ ಹೆಚ್ಚು ಕಡತಗಳು ನಾಶವಾಗಿದ್ದು ಇತಿಹಾಸಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ದಕ್ಷಿಣಕನ್ನಡ ಜಿಲ್ಲೆಯ ಕಲೆಕ್ಟರ್ ಆಗಿದ್ದ ಕರ್ನಲ್ ಮನ್ರೋವಿನ್  ಕಾಲಾದಲ್ಲಿ ಕಡತಗಳು ಕಂಡು ಇವುಗಳು ಬ್ರಿಟಿಷರ ವಿರೋಧ ಸೂಚಿಸುವ ದಾಖಲೆಗಳೆಂದು ಪರಿಗಣಿಸಿ ಅಧಿಕಾರಿಗಳಿಗೆ ಅಗ್ನಿಗಾಹುತಿ ಮಾಡಲು ಆದೇಶವಿತ್ತನು. ಇದರಿಂದ ಭಾರತೀಯ ಪೌರಾಣಿತಿ ಹಾಸಗಳು ಕಣ್ಮರೆಯಾಯಿತಿ. ಅಳಿದುಡಿದ  ಕಡತಗಳನ್ನು ಸರ್ವೇ ಕ್ಷಣೆಯಲ್ಲಿ ಗುರಿತಿಸಿ ಸಂಗ್ರಹಿಸಿ ಕೆಳದಿ ವಸ್ತುಸಂಗ್ರಹಾಲಯದಲ್ಲಿ  ಸಂರಕ್ಷಿಸಲಾಗಿದೆ.

     ಸಾಮಾನ್ಯವಾಗಿ ಕಡತಗಳು ನಿರೂಪ, ಭಿನ್ನವತ್ತಲೆಗಳನ್ನು ಒಳಗೊಂಡಿರುತ್ತದೆ. ಇವು ಹೆಚ್ಚಾಗಿ ಮೋಡಿ ಕನ್ನಡ ಲಿಪಿಯಲ್ಲಿ ಬರೆದಿರುತ್ತವೆ.  ಈ ಹಾಗಿದ್ದೂ ಮರಾಠಿ,ಸಂಸ್ಕೃತ,ತಿಗಳಾರಿ ಲಿಪಿಯಲ್ಲಿಯೂ ಬರೆದಿರುವುದಿದೆ. ಕಡತಗಳು ಶಾನುಬೋಗರಿಂದ  ಕಾಲ ಕಾಲಕ್ಕೆ ಬರೆಯಲ್ಪಟ್ಟ ಮೂಲ ಶಾಸನ,ದಾಖಲೆಗಳ ಪ್ರತಿ ಆಗಿರುತ್ತವೆ, ಶೃಂಗೇರಿ ಮಠದ ಕಡತಗಳು ಆ ಮಠಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಒದಗಿಸುವಂತೆ ಕಳಸದ ದೇವಾಲಯದ ಕಡತಗಳು ಆ ದೇವಾಲಯದ ಪೂಜಾ ಕೈಂಕರ್ಯಗಳು,ಜಮಾ ಖರ್ಚಗಳು, ಕಳಸ, ಆ ಪ್ರದೇಶ ಇತರ ದೇವಾಲಯ, ಮಠ ಮಾನ್ಯಗಳಿಗೆ ಬಿಟ್ಟ ದಾನದ ನಿರೂಪದ  ಪ್ರತಿಗಳು ಇವುಗಳನ್ನು ಒಳಗೊಂಡಿರುವುದಿದೆ. ಇವು ರಾಜರು ಮತ್ತು ಆ ಕ್ಷೇತ್ರದ ಸಂಬಂಧವನ್ನು ಪರಿಚಯಿಸುವಲ್ಲಿ ಸಹಕಾರಿಯಾಗಿರುತ್ತದೆ.ಹಿಂದೆ ರಾಜರಿಂದ ಕೊಡಲ್ಪಟ್ಟ ಮೂಲ ತಾಮ್ರಪಟ ಅಥವಾ ದಾಖಲೆಗಳು ನಶಿಸಿದ್ದರಿಂದ ಕಡತಗಳಲ್ಲಿಯ ದಾಖಲೆಗಳು ಈ ದಾಖಲೆಗಳ ಪ್ರತಿ ಆಗಿರುವುದರಿಂದ ಇವು ಗಮನ ಸಳೆಯುವಂತಹುವಾಗಿರುತ್ತವೆ. ಸುಮಾರು 14ನೇ ಶತಮಾನದಿಂದ  19 ನೇ ಶತಮಾನದವರೆಗಿನ ರಾಜಕೀಯ,ಧಾರ್ಮಿಕ, ಹಾರ್ದಿಕ, ಮತ್ತು ಸಾಮಾಜಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಕಡತಗಳು ಮಾಡುತ್ತವೆ. ಭೂದಾನ, ಗೃಹನಿವೇಶದ ದಾನಪಟ್ಟೆ, ಶಿಸ್ತಿನ ತೋಟದ ಪಟ್ಟೆ ಭೂಮಿ ಸಾಗುವಳಿ, ಗ್ರಾಮ ಗುತ್ತಿಗೆ, ಭೂಮಿ ಹಾವಾಲೆ ಚರದಾಯದ ಗುತ್ತಿಗೆ, ಉಗ್ರಾಣ ಸುಂಕ,ಮಣಿಯ, ಸಂಬಳ,ದೊಡ್ಡ ಪಾರುಪಾರುಪತ್ಯ ಚಿಕ್ಕಪಾರುಪತ್ಯ, ಪ್ರಸಾದ, ವಸ್ತ್ರ, ಮಂತ್ರಾಕ್ಷತೆ,ನವರಾತ್ರಿ, ವಸಂತ, ದೀಪಾವಳಿ ಆಚಾರ ವಿಚಾರ, ಆಶೀರ್ವಾದ ಪತ್ರಿಕೆ,ಚರಣಕಾಣಿಕೆ ಅಗ್ರತಾಂಬೂಲ,ಪ್ರಾಯಶ್ಚಿತ್ತ ಕಾಣಿಕೆ, ಧರ್ಮಶಾಸನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳು ಕಡಿತದಲ್ಲಿ ಇರುತ್ತವೆ.