ಅಹಮದಾಬಾದ್: ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳ (ಜಿಸಿಎಂಎಂಎಫ್) ತನ್ನ ಜನಪ್ರಿಯ ಅಮುಲ್ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2ರೂ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.
2022ರ ಗುಜರಾತ್ ವಿಧಾನಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಅಮುಲ್ ಹಾಲಿನ ಬೆಲೆ ಹೆಚ್ಚಳ ಆಗಿದೆ.
ಸಾರಿಗೆ ವೆಚ್ಚದಲ್ಲಿನ ಗಣನೀಯ ಹೆಚ್ಚಳದಿಂದ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿ ಮಾಡಲಾಗಿದೆ ಎಂದು ಜಿಸಿಎಂಎಂಎಫ್ ಮೂಲಗಳು ಹೇಳಿವೆ.
ಹೊಸ ದರದೊಂದಿಗೆ ಮಾರುಕಟ್ಟೆಯಲ್ಲಿ ಅಮುಲ್ ಎಮ್ಮೆ ಹಾಲು ಪ್ರತಿ ಲೀಟರ್ ಗೆ 68, ಅಮುಲ್ ಗೋಲ್ಡ್ 64, ಅಮುಲ್ ಹಸುವಿನ ಹಾಲು 54 ಹಾಗೂ ಅಮುಲ್ ತಾಜಾ ಹಾಲು 52ರಂತೆ ಮಾರಾಟವಾಗಲಿದೆ ಎಂದು ಹೇಳಿದೆ.
ಈ ಬೆಲೆ ಹೆಚ್ಚಳ ಗುಜರಾತ್ ನಲ್ಲಿ ಮಾತ್ರ ಅನ್ವಯವಾಗಲಿದ್ದು, ಕಳೆದ ಆರು ತಿಂಗಳ ಹಿಂದೆ ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಇದ್ದಿದ್ದರಿಂದ ಅಲ್ಲಿ ಬಿಟ್ಟು ದೇಶದ ಉಳಿದ ಕಡೆ 5 ಹೆಚ್ಚಳ ಮಾಡಲಾಗಿತ್ತು.
Saval TV on YouTube