ನವದೆಹಲಿ(New Delhi): ಅಮೂಲ್ ಹಾಗೂ ಮದರ್ ಡೈರಿ ಪ್ರತಿ ಲೀಟರ್ ಹಾಲಿಗೆ ಎರಡು ರೂ. ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಅಮೂಲ್ ಗೋಲ್ಡ್ ಬೆಲೆ ಇದೀಗ ಪ್ರತಿ ಅರ್ಧ ಲೀಟರ್ಗೆ 31 ರೂ, ಅಮೂಲ್ ತಾಜಾ ಅರ್ಧ ಲೀಟರ್ಗೆ 25 ರೂ, ಹಾಗೂ ಅಮೂಲ್ ಶಕ್ತಿ ಅರ್ಧ ಲೀಟರ್ಗೆ 28 ರೂಪಾಯಿ ಆಗಲಿದೆ. ಎಂಆರ್ಪಿಯಲ್ಲಿ ಶೇ. 4ರಷ್ಟು ಜಾಸ್ತಿಯಾಗಿದೆ.
ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್ಗೆ 45 ರೂ ಆಗಲಿದೆ.
ಹಾಲಿನ ಉತ್ಪಾದನೆಯ ವೆಚ್ಚ ಹೆಚ್ಚಳವಾಗಿರುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೂಲ್ ಕಂಪನಿ ತಿಳಿಸಿದೆ.
Saval TV on YouTube