ಮೈಸೂರು(Mysuru): ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಇಂದಿನಿಂದ ಅ. 31 ರವರೆಗೆ ಏಕತಾ ಸಪ್ತಾಹದ ದಿನಾಚರಣೆಯ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಸಮಯದ ಪ್ರದರ್ಶನವನ್ನು ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ರೈಲು ನಿಲ್ದಾಣಗಳ ಆವರಣದಲ್ಲಿ ಆಯೋಜಿಸಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಭಾರತೀಯ ರಾಜಪ್ರಭುತ್ವದ ರಾಜ್ಯಗಳ ಏಕೀಕರಣ ನಡೆಸಿ ನಾವು ಈಗ ನೋಡುತ್ತಿರುವ ಸಮಗ್ರ ಭಾರತೀಯ ಒಕ್ಕೂಟ ವ್ಯವಸ್ಥಯ ರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದುದಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜೀವನ ಮತ್ತು ಕೊಡುಗೆಯನ್ನು ಪ್ರದರ್ಶಿಸುವ ಮತ್ತು ಬಿಂಬಿಸುವ ಈ ಪ್ರದರ್ಶನವು ಭಾರತದ ಏಕತೆ ಮತ್ತು ಸಮಗ್ರತೆಯ ಶಕ್ತಿಯನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿದ್ದೂ, ಇದನ್ನು 2022 ಸಾಲಿನ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು “ಪಂಚ ಪ್ರಾಣ” ಎಂದು ಉಲ್ಲೇಖಿಸಿದ್ದಾರೆ.