ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಬೆಲೆಯ ಏರಿಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರೀ ಸದ್ದು ಮಾಡುತ್ತಿದೆ.
ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದಂತೆ ವ್ಯಕ್ತಿಯೊರ್ವ ಬಿಯರ್ನಿಂದ ಚಲಿಸುವ ಹೊಸ ವಾಹನ ಒಂದನ್ನು ತಯಾರಿಸಿದ್ದಾನೆ.
ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿಯೇ ಬಿಯರ್ ನಿಂದ ಚಲಿಸುವ ಬೈಕ್ ನ್ನು ಅನ್ವೇಷಿಸಿದಾತ. ಬೈಕ್ ಗೆ ಪೆಟ್ರೋಲ್ ಬದಲು ಬಿಯರ್ ತುಂಬಿಸಿದರೆ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ.
ಸದ್ಯ ಈ ವಿಡಿಯೋ ಯೂಟ್ಯೂಬ್ ನಲ್ಲಿ ಭಾರೀ ವೈರಲ್ ಆಗುತ್ತಿದೆ.
ಮೈಕೆಲ್ಸನ್ ಗೆ ಯಾವುದೇ ಮದ್ಯಪಾನದ ಅಭ್ಯಾಸವಿಲ್ಲವಂತೆ, ನಾನು ಬಿಯರ್ ಕುಡಿಯುವುದಿಲ್ಲ, ಆದರೆ ಬಿಯರ್ ನಿಂದ ಚಲಿಸುವ ಗಾಡಿಯನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನನಗೆ ಹಿಂದಿನಿಂದಲೂ ಇತ್ತು. ಇದೀಗಾ ನೆರವೇರಿದೆ ಎಂದು ಮೈಕೆಲ್ಸನ್ ಹೇಳಿಕೊಂಡಿದ್ದಾರೆ.
ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕನ್ನು ಅಲ್ಲಿನ ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಆದರೆ ಇನ್ನು ಮುಂದರ ಇದರ ಸಾಮರ್ಥ್ಯದ ಬಗ್ಗೆ ಪರೀಕ್ಷಿಸಿ, ಚಾಲನೆಗೆ ತರುವ ಪ್ರಯತ್ನದಲ್ಲಿದ್ದಾರೆ ಮೈಕೆಲ್ಸನ್.