ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಹೊಸ ಮನ್ವಂತರಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, ಇಂದು ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನೂ ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಟ್ಟಿದೆ.

ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.















