ವಿನಷ್ಠಾರ್ಥಸ್ಯ ಲಾಭೇಂದೇ ಶೀಘ್ರಂ ಮಂದೇ ಪ್ರಯತ್ನತಃ|
ಸ್ಯಾದ್ ದೂರೇ ಶ್ರವಣಂ ಮಧ್ಯೇ ಶ್ರುತ್ಯಾಪ್ತೀ ನ ಸುಲೋಚನೆ ||
ಅಂಧ ನಕ್ಷತ್ರದಲ್ಲಿ ಕಳೆದು ಹೋದ ಧನ ಶೀಘ್ರಪ್ರಾಪ್ತಿಯಾಗುತ್ತದೆ.ಮಂದಾಕ್ಷದಲ್ಲಿ ಪ್ರಯತ್ನ ಮಾಡಿದ ನಂತರ,ಮಧ್ಯಾಕ್ಷದಲ್ಲಿ ದೂರದಿಂದ ಕೇವಲ ಶ್ರಾವಣಮಾತ್ರವಾಗುತ್ತದೆ.ಅಂದರೆ ಇಂಥ ಸ್ಥಾನದಲ್ಲಿದೆ ಎಂಬುದು ಗೊತ್ತಾಗುತ್ತದೆ. ಆದರೆ,ಅದು ದೊರೆಯುವುದಿಲ್ಲ ಸಮಾಲೋಚನದಲ್ಲಿ ವ್ಯಾಪ್ತಿಯಾಗುವುದಿಲ್ಲ ಮತ್ತು ಧನದ ಕುರಿತು ಗೊತ್ತು ಆಗುವುದಿಲ್ಲ.
ಧನ ಕೊಡು ಕೊಳ್ಳುವುದಕ್ಕೆ ವರ್ಜ್ಯ ನಕ್ಷತ್ರ :
ತೀಕ್ಷ್ಣಾ ಮಿಶ್ರಧ್ರುವೋಗೈರ್ಯದ್ ದ್ರವಂ ದತ್ತ ನಿವೇಶಿತಮ್|
ಪ್ರಯುಕ್ತಶ್ಚವಿನಷ್ಟಂಶ ವಿಷ್ಟಯಾಂ ಪಾತೇ ನ ಚಾಪ್ಯತೇ||
ತೀಕ್ಷ್ಣಸಂಜ್ಞಕಕ,ಮಿಶ್ರಸಂಜ್ಞಕ, ಧ್ರುವಸಂಜ್ಞಕ ಮತ್ತು ಉಗ್ರಸಂಜ್ಞಕ ನಕ್ಷತ್ರಗಳಲ್ಲಿ ಯಾರಿಗಾದರೂ ನೀಡಿದ ಅಥವಾ ಮುಚ್ಚಿಟ್ಟ ವ್ಯವಹಾರದಲ್ಲಿ ತೊಡಗಿಸಿದ ಅಥವಾ ನಷ್ಟವಾದ ಧನ ಪ್ರಾಪ್ತಿಯಾಗುವುದಿಲ್ಲ ಮತ್ತು ಅಂಧ್ಯಾಕ್ಷ,ಭದ್ರಾ ಹಾಗೂ ವ್ಯತಿಪಾತ ಯೋಗದಲ್ಲಿ ವ್ಯವಹಾರದಲ್ಲಿ ತೊಡಗಿಸಿದ ಧನ ಬೇಗ ಹಿಂದಿರುಗಿ ಕೈ ಸೇರುತ್ತದೆ.
ಬಾವಿ ತೋರಿಸುವುದು ಮತ್ತು ಕಟ್ಟುವುದು :
ಮಿತ್ರಾರ್ಕ ಧ್ರವ ವಾಸ ವಾಂಬುಪಮಘಾತೋಯಾಂತ್ಯ ಪುಷ್ಯೇಂದುಭಿಃ
*ಪಾಪೈರ್ಹಿನಬಲೈಸ್ತನೌ ಸುರಗುರೌ ಜ್ಞೇ ವಾ ಭೃಗೌ ಖೇ ವಿಧೌ |
ಆಪ್ಯೇ ಸರ್ವಜಲಾಯಶಯಸ್ಯ ಖನನಂ ವೃಂಭೋಮಘೈಃ ಸೇಂದ್ರಭೈ
ಸೈನೃತ್ಯಂ ಹಿಬುಕೇ ಶುಭೈಸ್ತನುಗೃಹೇ ಜ್ಞೇಬ್ಜಜ್ಞರಾಶೌ ಶುಭಮ್||
ಅನುರಾಧಾ, ಹಸ್ತ, ದ್ರುವಸಂಜ್ಞಕ, ಧನಿಷ್ಠಾ, ಶತಭಿಷಾ ಮಾಘಾ, ಪೂರ್ವಾಷಾಢಾ, ರೇವತಿ,ಪುಷ್ಯ,ಮೃಗಶಿರಾ, ಈ ನಕ್ಷತ್ರಗಳಲ್ಲಿ ಪಾಪಗ್ರಹ ದುರ್ಬಲವಾಗಿದ್ದರೆ,ಲಗ್ನದಲ್ಲಿ ಗುರು ಅಥವಾ ಬುಧನಿದ್ದರೆ ಲಗ್ನದಿಂದ ದಶಮ ಭಾವದಲ್ಲಿಶುಕ್ರನಿದ್ದರೆ, ಜಲಚರ ರಾಶಿಯ ಚಂದ್ರನಿದ್ದರೆ ಇಂಥ ಸಮಯದಲ್ಲಿ ಬಾವಿ, ಕಲ್ಯಾಣಿ, ಕೆರೆಯನ್ನು ತೋರಿಸಬೇಕು. ಪೂರ್ವಾಷಾಢಾ, ಮತ್ತು ಮಘಾ ಈ ನಕ್ಷತ್ರಗಳನ್ನು ಹೊರತುಪಡಿಸಿ, ಜೇಷ್ಠಾ ಮತ್ತು ಈ ಮೇಲೆ ಹೇಳಿದ ನಕ್ಷತ್ರಗಳಲ್ಲಿ ಚತುರ್ಥ ಭಾವದಲ್ಲಿ ಶುಭಗ್ರಹ ಮತ್ತು ಲಗ್ನದಲ್ಲಿ ಬುಧನಿದ್ದಾರೆ,ಕನ್ಯಾ ಅಥವಾ ಮಿಥುನದಲ್ಲಿ ಚಂದ್ರನಿದ್ದರೆ, ನೃತ್ಯಾರಂಭ ಶುಭವಾಗುತ್ತದೆ.














