ಮನೆ ರಾಷ್ಟ್ರೀಯ ಆಂದ್ರ ಪ್ರದೇಶ: 15,233 ಕೋಟಿಯ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಆಂದ್ರ ಪ್ರದೇಶ: 15,233 ಕೋಟಿಯ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

0

ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ₹15,233 ಕೋಟಿ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಇದರಂತೆ ₹2,917 ಕೋಟಿ ವೆಚ್ಚದ ಒಎನ್‌’ಜಿಸಿಯ ಯು-ಫೀಲ್ಡ್ ಆನ್‌’ಶೋರ್ ಡೀಪ್ ವಾಟರ್ ಬ್ಲಾಕ್ ಯೋಜನೆಯನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು.

ಆಂಧ್ರಪ್ರದೇಶ ಯೂನಿವರ್ಸಿಟಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಯೋಜನೆಗಳನ್ನು ವರ್ಚುವಲ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಬಿಶ್ವಭೂಷಣ ಹರಿಚಂದನ್, ಮುಖ್ಯಮಂತ್ರಿ ವೈ.ಎಸ್. ಜಗನಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

₹3,778 ಕೋಟಿ ವೆಚ್ಚದಲ್ಲಿ ಆರು ಪಥದ ಗ್ರೀನ್‌’ಪೀಲ್ಡ್ ರಾಯ್‌’ಪುರ-ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್‌’ನ ಆಂಧ್ರಪ್ರದೇಶದ ವಿಭಾಗಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಪ್ರಧಾನಿಯವರು ಶ್ರೀಕಾಕುಳಂ-ಗಣಪತಿ ಕಾರಿಡಾರ್‌ನ ಭಾಗವಾಗಿ ₹200 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎನ್‌’ಎಚ್-326ಎ ನರಸನ್ನಪೇಟೆ-ಪಥಪಟ್ಟಣಂ ವಿಭಾಗವನ್ನು ಉದ್ಘಾಟಿಸಿದರು.