ಮನೆ ಜ್ಯೋತಿಷ್ಯ ರಕ್ತ ಹೀನತೆ

ರಕ್ತ ಹೀನತೆ

0

     ರಕ್ತಹೀನತೆ ಎಂದಾಗ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯನ್ನು ಸೂಚಿಸುತ್ತದೆ. ಇದರಿಂದ ರಕ್ತ ವರ್ಣವೂ ಸಹ ಕಡು ಕೆಂಪಾಗಿರದೆ, ಸ್ವಲ್ಪ ತೆಳ್ಳಗೆ ಇರುವುದರಿಂದ ರಕ್ತವು ತಿಳಿಕೆಂಪಾಗಿರುತ್ತದೆ. ರಕ್ತಲೋಮನಾಳಗಳೂ ಸಹ ಪಾದರಸಕವಾಗಿ ಬಿಳುಪಾಗಿ ಕಾಣುತ್ತದೆ. ಆದ್ದರಿಂದ  ರಕ್ತಹೀನತೆ ಇರುವವರ ಕಣ್ಣು ಗುಡ್ಡೆಯ ಕೆಳಗೆ ಬಿಳಿಪು ಕೈ ಬೆರಳುಗಳ ತುದಿಗಳು ರಕ್ತ ತೆಳುವಾಗಿ ಬಿಳಿಚಿಕೊಂಡಿರುತ್ತದೆ

Join Our Whatsapp Group

    ಮಾನವನ ಶರೀರದಲ್ಲಿ ಸದಾ ಕಾಲ ರಕ್ತವು ಎಲ್ಲಾ ಅವಯವಗಳಲ್ಲಿ ಸಂಚರಿಸುತ್ತಾ ಇರುತ್ತದೆ. ಹೀಗೆ ಸಂಚರಿಸುತ್ತಾ ಶರೀರದ ಅಂಗಗಳಿಗೆ ಬೇಕಾಗುವ ಆಮ್ಲಜನಕ,ಆಹಾರವನ್ನು ಅನ್ನಾಂಗಗಳ ನೀಡಿ ಅಲ್ಲಿಂದ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್ ಮತ್ತಿತರ ಕಲ್ಮಶಗಳನ್ನು ಈ ರಕ್ತದ ಮುಖಾಂತರವೇ ಸಾಗಿಸಿ, ಅದನ್ನು ಶ್ವಾಸಕೋಶ ಮತ್ತು ಮೂತ್ರಕೋಶಗಳಿಗೆ ನೀಡಿ, ವಿಸರ್ಜಿಸುವಂತೆ ಮಾಡುತ್ತದೆ. ಮತ್ತೆ ಸ್ವಾಶಕೋಶಗಳು ನಮ್ಮ ಉಸಿರಾಟದಿಂದ ಬರುವ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿ,ರಕ್ತಕ್ಕೆ  ನೀಡುತ್ತದೆ. ಅದು ಮುಂದೆ ಸಣ್ಣ ಕರುಳಿನ ಗ್ರಂಥಿಗಳ ಮುಖಾಂತರ ಆಹಾರದಲ್ಲಿರುವ ಪ್ರೋಟೀನ್ ವಿಟಾಮಿನ್, ಗ್ಲುಕೋಸ್ ಇತರ ಆಹಾರ ಕಣಗಳನ್ನು ಹೀರಿಕೊಂಡು ರಕ್ತಕ್ಕೆ ನೀಡುತ್ತದೆ.ಹೀಗೆ ರಕ್ತ ಸಂಚಾರದಿಂದ ನಮ್ಮ ದೇಹದ ಅಂಗಾಂಗಗಳು ನಿರಂತರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ.ರಕ್ತದಲ್ಲಿ ಕೆಂಪು, ಬಿಳಿ ರಕ್ತಕಣಗಳು, ರಕ್ತರಸ ಇರುತ್ತದೆ ಈ ಕೆಂಪು ರಕ್ತಕಣಗಳಲ್ಲಿ ಇರುತ್ತದೆ.

 ಹಿಮೋಗ್ಲೋಬಿನ್ –

    ಕೆಂಪು ರಕ್ತಕಣಗಳಲ್ಲಿ ಕ್ರಿಯಾತ್ಮಕವಾದ ಮೂಲಭೂತ ರಾಸಾಯನಿಕ ವಸ್ತುವಾಗಿದೆ. ಇದು ಬಣ್ಣರಹಿತ ಮೃದುವಾದ ಕಣಗಳ ಅಂಗವಾಗಿದೆ.ಇದು ಉಸಿರಾಟದ ಕ್ರಿಯೆ ಹೊಂದಿದೆ ದ್ರವ್ಯವಾಗಿದೆ.

     ಹಿಮೋಗ್ಲೋಬಿನ್ ಕಬ್ಬಿನಾಂಶದಿಂದ ಕೂಡಿದೆ = ಕಬ್ಬಿಣ+ ಪೂಲಿಕ್  ಆಮ್ಲ + ಬಿ=(Haemi) ಮತ್ತು ಪ್ರೋಟೀನ್( ಸಸಾರಜನಕ )(Globin) ಜೊತೆ ಸೇರಿ, ಸಂಯುಕ್ತವಾಗಿ (Haemoglobin)ಆಗಿದೆ.

      ಇದು ಆಮ್ಲಜನಕವನ್ನು ಶ್ವಾಸಕೋಶದಲ್ಲಿ ಹೀರಿಕೊಂಡು ಆಕ್ಸಿಹಿಮೋಗ್ಲೋಬಿನ್ ಯಾಗಿ  ಪರಿವರ್ತನೆ ಹೊಂದಿ ಮುಂದೆ ರಕ್ತದ ಕೆಂಪುಕಣಗಳ ಜೊತೆ ಸಂಚರಿಸುತ್ತಾ ದೇಹದ ಅಂಗಾಂಗ ಗಳಲ್ಲಿರುವ ಸ್ನಾಯುಗಳ ಜೀವಕೋಶಗಳಿಗೆ ಅವಶ್ಯಕವಾದ ಆಮ್ಲಜನಕವನ್ನು ತಲುಪಿಸುತ್ತದೆ. ಬಿಳಿರಕ್ತಕಣಗಳು ದೇಹದಲ್ಲಿ ವಿಷ ಕ್ರೀಮಿ ಬರದಂತೆ ತಡೆಯುತ್ತದೆ.

     ರಕ್ತ ಕೊರತೆ ಇದ್ದರೆ ಲೋಮಾ ನಾಳಗಳು ಪಾರದರ್ಶಕವಾಗಿ ಬಿಳಿಯ ವರ್ಣದಲ್ಲಿರುತ್ತದೆ. ಊರಿನಲ್ಲಿ ನಾಲಿಗೆ ತುಟಿಯ ಒಳಭಾಗ, ಕಣ್ಣಿನ ರೆಪ್ಪೆಯೊಳಗೆ ಇತರಭಾಗದಲ್ಲಿ ಬಿಳಿಯಾದಂತಾಗಿರುತ್ತದೆ. ಸಾಮಾನ್ಯ ಮನುಷ್ಯನ ದೇಹದಲ್ಲಿ ಐದರಿಂದ ಆರು ಲೀಟರ್ ಸಂಚರಿಸುತ್ತಿರುತ್ತದೆ.ಇದರಲ್ಲಿ 35 ರಿಂದ 50 ಭಾಗ ರಕ್ತ ಕಣಗಳು, ಉಳಿದಿದ್ದು ರಕ್ತರಸ, ರಕ್ತಕಣಗಳಲ್ಲಿ ಶೇಕಡ 99.8 ಭಾಗ ಕೆಂಪು ರಕ್ತ ಕಣಗಳು ಇದು ಸಾಮಾನ್ಯಕ್ಕಿಂತ ಶೇಕಡ 30 ಭಾಗಕ್ಕಿಂತ ಕಡಿಮೆ ಇದ್ದರೆ ರಕ್ತ ಹೀನತೆಯನ್ನು ಸೂಚಿಸುತ್ತದೆ.100 ಸಿ ಸಿ ರಕ್ತದಲ್ಲಿ ಸ್ತ್ರೀಯರಲ್ಲಿ 11 ರಿಂದ 14 ಗ್ರಾಂನಷ್ಟು ಇರಬೇಕು.ಇದು 11ಕ್ಕಿಂತ ಕಡಿಮೆಯಾದರೆ ಸಿ. ಸಿ. ರಕ್ತದಲ್ಲಿ ಸ್ತ್ರೀಯರಲ್ಲಿ 11 ರಿಂದ 14 ಗ್ರಾಂ ನಷ್ಟು ಇರಬೇಕು ಇದು. 11ಕ್ಕಿಂತ ಕಡಿಮೆಯಾದರೆ ಸಿ, ಸಿ ರಕ್ತ ಹೀನತೆ ಎನ್ನುತ್ತರವೆ. ಕೆಂಪು ಕಣಗಳು ಒಂದು ಸಿ.ಸಿ. ರಕ್ತದಲ್ಲಿ 3.5 ರಿಂದ 5 ಲಕ್ಷ ಇರಬೇಕು

1. ರಕ್ತವರ್ಣವಸ್ತುವಿನ ಉತ್ಪಾದನೆಗೆ ಅವಶ್ಯಕ ಕೊರತೆ, ಕಬ್ಬಿಣ, ಪೋಲಿಕ್ ಆಮ್ಲ ಬಿ 12 ಅನ್ನಾಂಗ (ವಿಟಾಮಿನ್) ಕೊರತೆಯಾದರೆ….

2. ರಕ್ತಸ್ರಾವದಿಂದ ರಕ್ತ ನಷ್ಟವಾದಷ್ಟು ಕೆಂಪು ರಕ್ತ ಕಣಗಳು ಮೂಳೆಯ ರಜ್ಜುವಿನಲ್ಲಿ ಉತ್ಪಾದಿಸ ಬೇಕಾಗುತ್ತದೆ.ಅದು ನಿಯಂತ್ರಣ ಮೀರಿ ಉತ್ಪಾದನೆ ಮಾಡದಿದ್ದರೆ ರಕ್ತಹೀನತೆ.

3. ಕೆಲವು ಅಪರೂಪದ ವ್ಯಾದಿಗಳಿಂದ  ಕೆಂಪುರಕ್ತಕಣಗಳ ಜೀವಾವಧಿಯು 120 ದಿನಗಳಾಗಿದೆ, ಅಸ್ತಿ ರುಜುವಿನ ವ್ಯಾದಿಯಿಂದ 40 ರಿಂದ 60 ದಿನಗಳಾದರೆ. ರಕ್ತಹೀನತೆ  ವೈದ್ಯರು 3 ರೀತಿಯಲ್ಲಿ ತಿಳಿದುಕೊಳ್ಳಬೇಕು ರಕ್ತದಲ್ಲಿ ಹಿಮೋಗ್ಲೋಬಿನ್ ನೂರು ಸಿ.ಸಿ. ಗೆ ರಕ್ತದಲ್ಲಿ 8ರಿಂದ 10 ಗ್ರಾಂ ಇದ್ದರೆ ಸಾಮಾನ್ಯ 5ರಿಂದ 8 ಗ್ರಾಂ ಸಾಧಾರಣ ಕೊರತೆ 5 ಗ್ರಾಂಗಿಂತ ಕಡಿಮೆ ತ್ರಿವ್ರ ಪ್ರಮಾಣದ ರಕ್ತ ಹೀನತೆ.

     ಎರಡನೆಯದಾಗಿ ಕಬ್ಬಿಣಾಂಶದ ಕೊರತೆಯಿಂದ ರಕ್ತ ಕಣಗಳು ಸಣ್ಣದಾಗಿ ಸಾಕಷ್ಟು ಕೆಂಪುಗಾಗಿರುವುದಿಲ್ಲ ಅಲ್ಲದೆ, ಅದರಿಂದ ಆಮ್ಲಜನಕ ಕೊರತೆ ಇರುತ್ತದೆ.

     ಮೂರನೆಯದಾಗಿ ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ ಕೊರತೆ.ಜಠರದ ಹುಣ್ಣಿನಿಂದ ರಕ್ತಸ್ರಾವ, ಮಕ್ಕಳಲ್ಲಿ ಕೊಕ್ಕೆಹುಳು ಹಾವಳಿ, ಥೈರಾಯ್ಡ್ ಹಾರ್ಮೋನ್ ಕೊರತೆ, ಮೂಲವ್ಯಾಧಿ ಸ್ತ್ರಿ ರಜಸ್ವಲೆಯಾದಾಗ ರಕ್ತ ಕೊರತೆ ಕಾಣುತ್ತದೆ. ಕೆಲವು ಬಡ ಮಹಿಳೆಯರಲ್ಲಿ ಹಿಮೋಗ್ಲೋಬಿನ್ 5 ಗ್ರಾಂ ನಷ್ಟು ಇದ್ದರೂ  ಸಹ ಚೆನ್ನಾಗಿರುತ್ತಾರೆ. ಅವನ ನೈಸರ್ಗಿಕ ಪ್ರಕೃತಿ ಹಾಗೆ ಇರುತ್ತದೆ.

        ರಕ್ತದಲ್ಲಿ ಕೆಂಪು ರಕ್ತ ಕೊರತೆಯಿಂದ ದೇಹದ ಅಂಗಾಂಗಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಆಮ್ಲಜನಕ ಸರಬರಾಜುವುದಿಲ್ಲ. ಆಗ ಹೃದಯ ಹೆಚ್ಚು ಕೆಲಸ ಮಾಡಿ. ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪಂಪ್ ಮಾಡಲು ಪ್ರಾರಂಭಿಸುತ್ತದೆ. ಆಗ ಹೃದಯ ಕೆಲಸ ಹೆಚ್ಚಾಗಿ, ರಕ್ತದ ಒತ್ತಡ ಹೆಚ್ಚಾಗುತ್ತದೆ ಮತ್ತು ಅಂಗಾಂಗಗಳು ಆಮ್ಲಜನಕ, ಆಹಾರ ಕೊರತೆಯಿಂದ ನಡೆಯಲು ಸುಸ್ತು, ನಿಶಕ್ತಿ, ಅದರಲ್ಲೂ ಮೆದುಳಿಗೆ ಅಂಗಗಳೂ ಸಹ ಆಮ್ಲಜನಕ ಕಬ್ಬಿನಾಂಶ, ಆಹಾರ ಕೊರತೆಯಿಂದ ಬಳಲುತ್ತದೆ. ಮಿದುಳಿನಲ್ಲಿ ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಿಸುವ ಕೊಠಡಿಗಳಿರುತ್ತವಗ. . ಈ ಕೊಠಡಿಗೆ ಶುದ್ಧರಕ್ತ ಸರಿಯಾಗಿ ಸರಬರಾಜಾಗದಿದ್ದರೆ ಆ ಅಂಗದಲ್ಲಿ ಆಮ್ಲಜನಕ ಸೇರದೆ, ಅದು ನಿಯಂತ್ರಣ ತಪ್ಪುತ್ತದೆ.