ಮನೆ ರಾಜ್ಯ ವೃದ್ಧರಿಗಾಗಿ ‘ಅನ್ನ ಸುವಿಧಾ’ ಯೋಜನೆ: ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ

ವೃದ್ಧರಿಗಾಗಿ ‘ಅನ್ನ ಸುವಿಧಾ’ ಯೋಜನೆ: ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ

0

ಬೆಂಗಳೂರು : ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ  ಅವರು ಬಜೆಟ್ ​​ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.

80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ ಯೋಜನೆಯನ್ನು ಅವರು ಬಜೆಟ್​ ನಲ್ಲಿ ಘೋಷಣೆ ಮಾಡಿದ್ದಾರೆ. ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ. ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನ ಸುವಿಧಾ ಯೋಜನೆಯು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುವುದು. ಈ ಯೋಜನೆ ಮೂಲಕ 80 ವರ್ಷ ವಯಸ್ಸು ದಾಟಿದ ವೃದ್ಧರ ಅಥವಾ ವೃದ್ಧೆಯರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್​​ನಲ್ಲಿ ತಿಳಿಸಿದರು.

ವಲಸೆ ಕಾರ್ಮಿಕರಿಗೂ ಕೊಡುಗೆ

10 ಜಿಲ್ಲೆಗಳಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಸಮುಚ್ಚಯಕ್ಕಾಗಿ 100 ಕೋಟಿ ರೂ. ಅನುದಾನ ನೀಡಲಾಗುವುದು. ಕೊಳಗೇರಿ ನಿವಾಸಿಗಳಿಗೆ ಶೀಘ್ರದಲ್ಲೇ 48,796 ಮನೆಗಳ ಹಸ್ತಾಂತರ ಮಾಡಲಾಗುವುದು. ಕಾರ್ಮಿಕರಿಗೆ ಇಎಸ್​ಐ ಯೋಜನೆಯಡಿ ಸೂಪರ್​ಸ್ಪೆಷಾಲಿಟಿ ಸೇವೆಗೆ 313 ಕೋಟಿ ರೂ. ಅನುದಾನ ಮೀಸಲು ಇಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಆಶಾದೀಪ ಯೋಜನೆಯಡಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಸೌಲಭ್ಯ ವಿಸ್ತರಣೆ ಮೂಲಕ ಶಿಷ್ಯವೇತನ ಅವಧಿ ಒಂದು ವರ್ಷಕ್ಕೆ ಹೆಚ್ಚಳ. ಖಾಯಂ ನೇಮಕಾತಿ ಮಾಡಿಕೊಂಡಲ್ಲಿ ವೇತನ ಮರುಪಾವತಿ ಅವಧಿ ಎರಡು ವರ್ಷಕ್ಕೆ ಹೆಚ್ಚಳ ಹಾಗೂ ವೇತನದ ಗರಿಷ್ಠ ಮಿತಿ 7,000 ರೂ. ಗಳಿಗೆ ಹೆಚ್ಚಳ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಸಾರಿಗೆ ವಾಹನಗಳ ಕಾರ್ಮಿಕರಿಗೆ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿ

ಇಎಸ್ ಐ ಯೋಜನೆಯಡಿ ಒಟ್ಟಾರೆ 311 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸೇವೆ ಹಾಗೂ ಸೌಲಭ್ಯಗಳ ವಿಸ್ತರಣೆ.