ಮನೆ ಅಪರಾಧ ಚೈತ್ರ ಕುಂದಾಪುರ ವಿರುದ್ಧ ಕೋಟಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

ಚೈತ್ರ ಕುಂದಾಪುರ ವಿರುದ್ಧ ಕೋಟಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

0

ಉಡುಪಿ: ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ನಂಬಿಸಿ ಐದು ಲಕ್ಷ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲೂಕಿನ ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2015ರಲ್ಲಿ ಪರಿಚಯವಾದ ಚೈತ್ರ ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹಲವು ಸಚಿವರು, ಶಾಸಕರು ನಿಕಟ ಸಂಪರ್ಕದಲ್ಲಿದ್ದಾರೆ ಎಂದು ನಂಬಿಸಿದ್ದಾರೆ. ಉಡುಪಿ ಹಾಗೂ ಕೋಟಾದಲ್ಲಿ ಬಟ್ಟೆ ಅಂಗಡಿಗಳನ್ನು ಹಾಕಲು ನೆರವು ನೀಡುತ್ತೇನೆ ಎಂದು 2018 ರಿಂದ 2022ರ ವರೆಗೆ ಹಂತ ಹಂತವಾಗಿ 5 ಲಕ್ಷ ಪಡೆದಿದ್ದಾರೆ. ನಂತರ ಚೈತ್ರ ನಡೆ ಬಗ್ಗೆ ಅನುಮಾನಗೊಂಡು ಬಟ್ಟೆ ಅಂಗಡಿ ಹಾಕಿ ಕೊಡುವಂತೆ ಪಟ್ಟು ಹಿಡಿದಾಗ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸುದಿನ ಎಂಬುವವರು ದೂರು ನೀಡಿದ್ದು, ಚೈತ್ರ ವಿರುದ್ಧ ಪ್ರಕರಣ ದಾಖಲಾಗಿದೆ.