ಮನೆ ರಾಷ್ಟ್ರೀಯ ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ

0
ಚಿತ್ರ ಕೃಪೆ: ಎಎನ್‌ ಐ

ನವದೆಹಲಿ (New Delhi): ದೆಹಲಿ ಕರೋಲ್‌ ಬಾಗ್‌ನ ಗಫ್ಫಾರ್‌ ಮಾರುಕಟ್ಟೆಯಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಗಫ್ಫಾರ್‌ನ ಶೂ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ  39 ಅಗ್ನಿಶಾಮಕ ವಾಹನಗಳು ಹಾಗೂ ಸುಮಾರು 200 ಮಂದಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವು.

ಬೆಂಕಿ ಹರುಡುವುದನ್ನು ನಿಯಂತ್ರಿಸಲಾಗಿದ್ದು, ಜನರು ಗಾಯಗೊಂಡಿರುವುದು ಅಥವಾ ಕಟ್ಟಡದಲ್ಲಿ ಸಿಲುಕಿರುವುದು ವರದಿಯಾಗಿಲ್ಲ. ಬೆಂಕಿ ಹೊತ್ತಲು ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಬೆಂಕಿಯಲ್ಲಿ ಸಿಲುಕಿದ್ದ ಕುಟುಂಬದ ಐದು ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಸುಮಾರು 15–16 ಅಂಗಡಿಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿ ರೋಹಿಣಿ ಪ್ರದೇಶದಲ್ಲಿರುವ ಬ್ರಹ್ಮ ಶಕ್ತಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದರಿಂದಾಗಿ ಉಂಟಾದ ಆಮ್ಲಜನಕದ ಕೊರತೆಯಿಂದಾಗಿ 64 ವರ್ಷ ವಯಸ್ಸಿನ ರೋಗಿಯೊಬ್ಬರು ಸಾವಿಗೀಡಾದರು. ಅದರ ಬೆನ್ನಲ್ಲೇ ಇಂದು ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.