ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ಕಚೇರಿ ಮೇಲೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಯದುಕೃಷ್ಣ ಹೆಸರಿನ ಅಧಿಕಾರಿಯೊಬ್ಬರನ್ನು ಲಂಚದ ದುಡ್ಡು ಸಮೇತ ಬಂಧಿಸಿದ್ದಾರೆ.
ಯದುಕೃಷ್ಣ ಕಾಮಗಾರಿ ಟೆಂಡರ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಾರೆ. ಲೋಕಾಯುಕ್ತ ಪೊಲೀಸರು ಯದುಕೃಷ್ಣಗೆ ಸೇರಿದ ಕಾರಿಂದ ದಾಖಲೆಯಿಲ್ಲದ ₹ 2.06 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.














