ಮನೆ ಮನರಂಜನೆ ಕೆಜಿಎಫ್: ಚಾಪ್ಟರ್- 2 ಚಿತ್ರ ತಂಡದಿಂದ ಮತ್ತೊಂದು ಸಾಂಗ್​​ ರಿಲೀಸ್​

ಕೆಜಿಎಫ್: ಚಾಪ್ಟರ್- 2 ಚಿತ್ರ ತಂಡದಿಂದ ಮತ್ತೊಂದು ಸಾಂಗ್​​ ರಿಲೀಸ್​

0

ಹೈದರಾಬಾದ್(Hydarabad) : ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್​ ನೀಲ್​​ ನಿರ್ದೇಶನದ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’.(KGF:chapter-2) ಸದ್ಯ ಈ ಚಿತ್ರದ ಟ್ರೈಲರ್ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಇದೀಗ ಕೆಜಿಎಫ್​ ಚಿತ್ರತಂಡ ಹೊಸ ಹಾಡೊಂದನ್ನ ಬಿಡುಗಡೆ ಮಾಡಿದೆ.

‘ಗಗನ ನೀ..’ ಎಂಬ ಹಾಡನ್ನ ಬಿಡುಗಡೆ ಮಾಡಿದೆ. ಈ ಹಾಡಿಗೆ ಕಿನ್ನಲ್​ ರಾಜ್​ ಸಾಹಿತ್ಯ ಬರೆದಿದ್ದು, ಸುಚೇತಾ ಬಸ್ರೂರು ಅವರ ಕಂಠದಲ್ಲಿ ಈ ಎಮೋಷನಲ್​ ಗೀತೆ ಮೂಡಿಬಂದಿದೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್​ಗಳಲ್ಲಿ ಸಾಂಗ್​ ರಿಲೀಸ್​ ಆಗಿದೆ. ನಟಿ ಅರ್ಚನಾ ಜೋಯಿಸ್​ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ರಾಕಿ ಬಾಯಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

ಈಗ ತಾಯಿ ಸೆಂಟಿಮೆಂಟ್​ ಸಾಂಗ್​ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ, ಚಿತ್ರದ ಬಗ್ಗೆ ಮತ್ತೊಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ವಸಿಷ್ಠ ಸಿಂಹ, ಪ್ರಕಾಶ್​ ರಾಜ್​, ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

ಹಿಂದಿನ ಲೇಖನಐಪಿಎಲ್: ಕೆಕೆಆರ್ ವಿರುದ್ಧ ಚೊಚ್ಚಲ ಜಯದ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್
ಮುಂದಿನ ಲೇಖನಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ತಡೆ