ಮನೆ ಜ್ಯೋತಿಷ್ಯ ಇನ್ನೊಂದು ವಿಧ ದುಷ್ಟ ರಜೋ ದರ್ಶನ ಶಾಂತಿ

ಇನ್ನೊಂದು ವಿಧ ದುಷ್ಟ ರಜೋ ದರ್ಶನ ಶಾಂತಿ

0

       ದುಷ್ಟ ವಾರ,ದುಷ್ಟ ತಿಥಿ,ದುಷ್ಟ ನಕ್ಷತ್ರ,ದುಷ್ಟಯೋಗ,, ದುಷ್ಟ ಕಾರಣ, ದುಷ್ಟ ಲಗ್ನ, ಇವುಗಳಲ್ಲಿ ಸ್ತ್ರಿಯಗಳಿಗೆ ಪ್ರಥಮ ರಾಜ್ಯೋ ದರ್ಶನವಾದರೆ ಮಹಾ ಅರಿಷ್ಟ ವುಂಟಾಗುವುದು ತದ್ದೋಷ  ಪರಿಹಾರಾರ್ಥವಾಗಿ ಕೆಳಗೆ ತಿಳಿಸಿರುವಂತೆ ಶಾಂತಿಯನ್ನು ಮಾಡಿಸಬೇಕು.

Join Our Whatsapp Group

     ಒಂದು ಮಣ್ಣಿನ ಹೊಸ ಕುಂಭದ ತುಂಬಾ ಜವೆ ಗೋಧಿ ಅಥವಾ ತೊಗರೆ ಅಥವಾ ತೊಗರೆ ಬೇಳೆಯನ್ನು ತುಂಬಿ ಅದರಲ್ಲಿ ಸುವರ್ಣ,ರಜತ.ಒಂದು ಮುತ್ತು, ಒಂದು ಹವಳ, ದಕ್ಷಿಣೆ ಇವುಗಳನ್ನು ಹಾಕಿ ಅದನ್ನು ಷೋಡ ಶೋಪಚಾರದಿಂದ ಪೂಜಿಸಿ ಋತುಮತಿಯಾಗಿದ್ದ ಸ್ತ್ರೀಯಳು ಕೈಮುಗಿದು ಕೆಳಗಿನ ಮಂತ್ರ ಹೇಳಬೇಕು.

 ಇಂದ್ರಾಣಿಂ ಪೂಜೆಯೇ ದೇವಿ ಇಂದ್ರಾಣಿ ಮಾಷುನಾರೀಷು| ಇಂದ್ರತ್ವಾ ವೃಷಭಂ ತ್ವಿಂದ್ರಂ ಶಾಪ ಹಾರೈಃ ಪ್ರಪೂಜಯೇತ್||

     ಈ ಮಂತ್ರದಿಂದ ಸದರೀ ಕುಂಭವನ್ನು ರಜಸ್ವಲೆ ದೋಷ ಹೊಂದಿದ್ದ ಸ್ತ್ರೀಯಳಿಂದ ಸಾಯಂಕಾಲದಲ್ಲಿ ಗೋಧೂಳಿ ಲಗ್ನದಲ್ಲಿ  ಪೂಜ್ಯರಿಗೆ  ದಾನ ಕೊಡಬೇಕು. ಶಕ್ಯವಿದ್ದರೆ ಗೋದಾನ, ಹಿರಣ್ಯ ದಾನ ಮಾಡಬೇಕು.

ಋತು ಶಾಂತಿಗೆ ಮುಹೂರ್ತ:

     ರೋಹಿಣಿ,ಮೃಗಶಿರ,ಆರಿದ್ರಾ ಪುನರ್ವಸು,ಪುಷ್ಯ, ಪೂರ್ವಾ, ಉತ್ತರಾ, ಹಸ್ತಾ ಚಿತ್ರಾ, ಸ್ವಾತಿ ವಿಶಾಖಾ ಅನುರಾಧಾ ಪೂರ್ವಾಷಾಡ,ಉತ್ತರಾಷಾಢ, ಶ್ರಾವಣ, ದನಿಷ್ಟ, ಶತತಾರಾ, ಪೂರ್ವಭಾದ್ರಪದ,ಉತ್ತರಾ   ಭಾದ್ರಪದ ನಕ್ಷತ್ರಗಳೂ ಒಂದು, ಎರಡು, ಮೂರು,ನಾಲ್ಕು, ಐದು, ಆರು, ಏಳು, ಹತ್ತು, ಹನ್ನೆರಡು, ಹದಿಮೂರು, ಈ ಇತಿಥಿಗಳೂ ವೃಷಭ, ಕರ್ಕ, ಕನ್ಯಾ, ಮೀನ, ಲಗ್ನಗಳೂ ಋತು ಶಾಂತಿ ಮಾಡಲಿಕ್ಕೆ ಶುಭ ಮುಹೂರ್ತವಾದದ್ದವುಗಳು.

 ಋತುಮತಿಯಾದ ಸ್ತ್ರೀಯರು ಪಾಲಿಸತಕ್ಕ ನೇಮಗಳು

     ಸ್ತ್ರೀಯಳು ರಜಾಸ್ಪಾಲಿಯಾದ ಕೂಡಲೇ ಆಕೆ ಜನ ಸಂಚಾರ ಹೆಚ್ಚು ಇದರ ಮೇಲೆ ಕೋಣೆಯಲ್ಲಿಯೇ ಇರಬೇಕು. ಯಾರನ್ನು ಮುಟ್ಟಿಸಿಕೊಳ್ಳದಂತೆ ಇರಬೇಕು. ದೊಡ್ಡ ಶ್ರೀಮಂತರ ಮನೆಯ ಸ್ತ್ರೀಯಳಾಗಿದ್ದರು ಮೂರು ದಿನಗಳವರೆಗೆ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಹೂಗಳನ್ನು ಮುಡಿಯುವುದು, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು ಇತ್ಯಾದಿಗಳನ್ನು ಬಿಡಬೇಕು. ಅಲ್ಲದೆ, ಸದಾ ಸೀರೆಯನ್ನು ಧರಿಸಿಕೊಂಡು ಯಾರಿಗೂ ತನ್ನ ಮುಖವನ್ನು ತೋರಿಸದಂತೆ, ಯಾರಿಗೂ ತನ್ನ ಧ್ವನಿಯು ಕೇಳದಂತೆ ಸಾಧ್ಯವಾದ ಮಟ್ಟಿಗೆ ಏಕಾಂತದಲ್ಲಿರಬೇಕು.ಮತ್ತು ಮಣ್ಣಿನ ಹೊಸ ಪಾತ್ರೆಯಲ್ಲಿ ಊಟ ಮಾಡಿ ಬೊಗಸೆಗಳಿಂದ ನೀರು ಕುಡಿಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ,ಸದಾ ದೇಹದ ಪರಮ ಪವಿತ್ರನಾದ ಗುರು ಕರುಣಿಸಿದ ಇಷ್ಟಲಿಂಗವನ್ನು ಧರಿಸಿಕೊಂಡಿರುವ ವೀರಶೈವರಿಗೆ ಯಾವ ಸೂತಕಾದಿಗಳು ಇರುವುದಿಲ್ಲವೆಂದು ಧರ್ಮಶಾಸ್ತ್ರ ಹೇಳುವದರಿಂದ ಮೇಲೆ ಬರದ ಸೂತಕದ ಆಚರಣೆಯನ್ನು ವೀರಶೈವ ಸ್ತ್ರೀಯರು ಆಚರಿಸುವುದು ಅನಾವಶ್ಯಕವೆಂದು ಹೇಳುವದಿದೆ .ಆದರೂ ಆರೋಗ್ಯ ಶಾಸ್ತ್ರದ ಪ್ರಕಾರ ಆಚರಿಸುವುದು ಒಳ್ಳೆಯದು.

      ದೊಡ್ಡ ಧ್ವನಿಯಿಂದ ಮಾತನಾಡುವುದು, ನಗುವುದು,ದುಃಖಪಡೋಣ ಸಿಟ್ಟು ಸಿಡುಕುವಿನಿಂದ ಇರುವುದು,ಊರಿನಿಂದ ಊರಿಗೆ ಹೋಗುವುದು ಬಾರ ವಸ್ತುಗಳನ್ನು ಎತ್ತುವುದು ಇವುಗಳನ್ನು ಮಾತ್ರ ಎಲ್ಲ ಧರ್ಮದ ಮುಟ್ಟಾದ ಸ್ತ್ರೀಯರು ಮಾಡಬಾರದು.ಸಮಾಧಾನ ಮನಸ್ಸಿನಿಂದ ಇರಬೇಕು. ಶ್ರಮದ ಕೆಲಸವನ್ನು ಮಾಡದೇ ಇರುವುದು ಒಳ್ಳೆಯದು . ಇತ್ತಿತ್ತಲಾಗಿ ದುಡಿಯುವ ಮಹಿಳೆಯರು, ಶಾಲೆ ಕಾಲೇಜುಗಳಿಗೆ ಹೋಗುವ ಸ್ತ್ರೀಯರು ಇಷ್ಟೊಂದು ಕಟ್ಟು ನಿಟ್ಟಿನಿಂದ ನಿಯಮ ಪಾಲಿಸಕ್ಕಾಗದಿದ್ದರೂ ಶ್ರಮದ ಕೆಲಸಗಳನ್ನು ಮಾಡಬಾರದು. ಓಡುವದು ವ್ಯಾಯಾಮ ಮಾಡುವುದು. ಅತಿಸಿಚ್ಚು ನಗೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ.ಇಂದಿನ ಸುಧಾರಿಸಿದ ತಿಳುವಳಿಕೆಯುಳ್ಳ ಯುವತಿಯರಿಗೆ ಈ ಬಗ್ಗೆ ಹೇಳುವದೇನಿದೆ?