ಮನೆ ಕಾನೂನು ಸಿಖ್ ವಿರೋಧಿ ದಂಗೆ: ಫೆ.21 ರಂದು ನ್ಯಾಯಾಲಯದಿಂದ ಸಜ್ಜನ್ ಕುಮಾರ್ ​ಗೆ ಶಿಕ್ಷೆ ಪ್ರಕಟ

ಸಿಖ್ ವಿರೋಧಿ ದಂಗೆ: ಫೆ.21 ರಂದು ನ್ಯಾಯಾಲಯದಿಂದ ಸಜ್ಜನ್ ಕುಮಾರ್ ​ಗೆ ಶಿಕ್ಷೆ ಪ್ರಕಟ

0

ನವದೆಹಲಿ: 1984ರ ನವೆಂಬರ್ 1ರಂದು ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ- ಮಗನ ಹತ್ಯೆಗೆ ಸಂಬಂಧಿಸಿದ 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಫೆಬ್ರವರಿ 21ರಂದು ಶಿಕ್ಷೆ ಪ್ರಕಟಗೊಳ್ಳಲಿದೆ. ಫೆಬ್ರವರಿ 12ರಂದು ರೋಸ್ ಅವೆನ್ಯೂ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.

Join Our Whatsapp Group

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪನ್ನು ಸಜ್ಜನ್ ಕುಮಾರ್ ಮುನ್ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಇನ್ನೂ ಲಿಖಿತ ಹೇಳಿಕೆಗಳನ್ನು ಸಲ್ಲಿಸದಿದ್ದರೂ, ನಿರ್ಭಯಾ ಮತ್ತು ಇತರ ಪ್ರಕರಣಗಳಲ್ಲಿ ಮಾರ್ಗಸೂಚಿಗಳ ಆಧಾರದ ಮೇಲೆ ಮರಣದಂಡನೆ ವಿಧಿಸಬೇಕೆಂದು ಅವರು ಕೋರಿದ್ದಾರೆ ಎಂದು ಸಂಸ್ಥೆ ವರದಿ ಮಾಡಿದೆ. ಫೆಬ್ರವರಿ 21 ರಂದು ಶಿಕ್ಷೆಯ ಕುರಿತಾದ ವಾದಗಳನ್ನು ಆಲಿಸಲು ನ್ಯಾಯಾಲಯವು ಪ್ರಕರಣವನ್ನು ಪಟ್ಟಿ ಮಾಡಿದೆ.

1984 ರ ನವೆಂಬರ್‌ನಲ್ಲಿ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ-ಮಗನ ಕೊಲೆ ಪ್ರಕರಣದಲ್ಲಿ ಕುಮಾರ್ ದೋಷಿ ಎಂದು ಸಾಬೀತಾಯಿತು. ಈ ಪ್ರಕರಣವು ನವೆಂಬರ್ 1, 1984 ರಂದು ನಡೆದ ಸಿಖ್ ವಿರೋಧಿ ಗಲಭೆಯ ಸಮಯದಲ್ಲಿ ರಾಷ್ಟ್ರ ರಾಜಧಾನಿಯ ಸರಸ್ವತಿ ವಿಹಾರ್‌ನಲ್ಲಿ ನಡೆದ ಇಬ್ಬರು ಸಿಖ್ಖರ ಹತ್ಯೆಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

ಸಜ್ಜನ್ ಕುಮಾರ್ ಅವರು ದಂಗೆ ನಡೆಸಿದ ಗುಂಪನ್ನು ಮುನ್ನಡೆಸಿದ್ದಾರೆ ಎಂಬ ಆರೋಪವಿದ್ದು ಅದರಂತೆ ಕುಮಾರ್ ಪ್ರಚೋದನೆ ಮೇರೆಗೆ ಗುಂಪೊಂದು ಸರಸ್ವತಿ ನಗರದಲ್ಲಿರುವ ಸಿಖ್ಖರ ಮನೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿದ್ದು ಮಾತ್ರವಲ್ಲದೆ ಮನೆಯನ್ನೂ ಲೂಟಿ ಮಾಡಿ ಬಳಿಕ ಮನೆಗೆ ಬೆಂಕಿ ಹಚ್ಚಲಾಯಿತು ಇದರಿಂದ ಮನೆಯೊಳಗಿದ್ದ ಕೆಲವರು ಗಾಯಗೊಂಡಿದ್ದರು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಸಜ್ಜನ್ ಕುಮಾರ್ ದೋಷಿ ಎಂದು ಆದೇಶ ಹೊರಡಿಸಿದ್ದಾರೆ. ಮತ್ತು ಶಿಕ್ಷೆಯ ಮೇಲಿನ ವಾದಗಳನ್ನು ಫೆಬ್ರವರಿ 18 ಕ್ಕೆ ಮುಂದೂಡಲಾಗಿತ್ತು.