ಮನೆ ಸುದ್ದಿ ಜಾಲ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ತಂಬಾಕು ವಿರೋಧಿ ದಿನಾಚರಣೆ

ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ತಂಬಾಕು ವಿರೋಧಿ ದಿನಾಚರಣೆ

0

ಮೈಸೂರು: ವಿಜಯ ವಿಠ್ಠಲ ವಿದ್ಯಾಶಾಲೆ ವತಿಯಿಂದ ತಂಬಾಕು ವಿರೋಧಿ ದಿನಾಚರಣೆ ದಿನದ ಅಂಗವಾಗಿ ವಿದ್ಯಾಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Join Our Whatsapp Group

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಔಷಧದ ಔಷಧಾಲಯಗಳ ಸಂಘದ ವ್ಯವಸ್ಥಾಪಕ ನಿರ್ದೇಶಕ  ಚಂದ್ರಗುಪ್ತ ಜೈನ್, ೧೯೮೯ ಜೂನ್ ೨೬ರಂದು ಪ್ರಪ್ರಥಮ ಬಾರಿಗೆ ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನಾಗಿ ಆಚರಣೆಗೆ ತಂದಿದ್ದು. ಈ ಬಾರಿಯೂ “ಜನರು ಮೊದಲು: ಕಳಂಕ ಮತ್ತು ತಾರತಮ್ಯ ನಿಲ್ಲಿಸಿ, ತಡ ಗಟ್ಟುವಿಕೆಯನ್ನು ಬಲಪಡಿಸಿ “ಎಂಬ ಘೋಷಣಾ ವಾಕ್ಯದೊಂದಿಗೆ ತಂಬಾಕು ವಿರೋಧಿ ದಿನವನ್ನು ಆಚರಿಸಲಾಯಿತು ಎಂದು ಮಾಹಿತಿ ನೀಡಿದರು.

ಯುವಕರಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯುವಕರು  ತಂಬಾಕು ವ್ಯಸನದಲ್ಲಿ ಹೇಗೆ ಸಿಕ್ಕಿಬಿದ್ದಿದ್ದಾರೆ ಮತ್ತು ಅದನ್ನು ತೊರೆಯಲು ಅವರ  ಪ್ರಯತ್ನಗಳ ಬಗ್ಗೆ ತಮ್ಮ ಸ್ವನುಭವವನ್ನು ಹಂಚಿಕೊಂಡರು. ಜಾಗೃತಿ ಕಾರ್ಯಕ್ರಮವು ತಂಬಾಕು ಸೇವನೆಯಿಂದಾಗುವ ಹಾನಿಗಳು ತಿಳಿಸಿ ಹೇಳುವುದಾಗಿತ್ತು.೧೬ ರಿಂದ ೧೮ ವರ್ಷಗಳ ನಡುವಿನ ಹದಿಹರೆಯದವರ ತಂಬಾಕು ಸೇವನೆಯ ಮೇಲೆ ಹೆಚ್ಚಿದ ಪ್ರಭಾವಕ್ಕೆ ಗುರಿಯಾಗುತ್ತಾರೆ ಇದಕ್ಕೆ ಕಾರಣಗಳು ಮತ್ತು ತಂಬಾಕು ಸೇವನೆಯನ್ನು ವಿರೋಧಿಸುವ ಮಾರ್ಗಗಳನ್ನು ಒತ್ತಿಹೇಳಿದರು.

ಪ್ರಕೃತಿಯಲ್ಲಿ ಸಾಮರಸ್ಯ ಸಾಧಿಸುತ್ತಾ,ಸಕಾರಾತ್ಮಕ ಆಹಾರ ವಿಹಾರದೊಂದಿಗೆ ಬದುಕನ್ನು ಆರೋಗ್ಯವಾಗಿಟ್ಟುಕೊಳ್ಳುವ ಅಗತ್ಯಗಳನ್ನು ತಿಳಿಸಿಕೊಟ್ಟರು. ನಾವು ನಮಗೆ, ನಮ್ಮ ಕುಟುಂಬಕ್ಕೆ,ನಮ್ಮ ಸಮಾಜಕ್ಕೆ,ನಮ್ಮ ದೇಶಕ್ಕೆ,ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದದ್ದು  ಪ್ರತಿಯೊಬ್ಬ ಸಂಸ್ಕಾರಯುತ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ಕಾರ್ಯಕ್ರಮದ ಮೂಲಕ  ತಿಳಿ ಹೇಳಿದರು.

ತಂಬಾಕು ಸೇವನೆಯಿಂದಆರೋಗ್ಯದ ಮೇಲಾಗುವ  ಅಪಾಯಗಳ ಬಗ್ಗೆ  ಶಿಕ್ಷಣ ನೀಡಿದರು.

ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಚಾರ್ಯರಾದ    ಏಸ್.ಎ.ವೀಣಾ ಉಪಸ್ಥಿತರಿದ್ದರು. ವಿವಿಧ ವಿಭಾಗದ ಮುಖ್ಯಸ್ಥರು,ಭೋದಕ ವರ್ಗದವರು,ಬೋಧಕೇ ತರ    ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.