ಮನೆ ಜ್ಯೋತಿಷ್ಯ ಅನುರಾಧ

ಅನುರಾಧ

0

ಕ್ಷೇತ್ರ – ವೃಶ್ಚಿಕ ರಾಶಿಯಲ್ಲಿ 3 ಡಿಗ್ರಿ 30 ಕಲೆಯಿಂದ 16ಡಿಗ್ರಿ 20 ಕಲೆಯವರೆಗೆ. ಯೋನಿ – ಮೃಗ, ರಾಶಿಸ್ವಾಮೀ – ಮಂಗಳ, ನಕ್ಷತ್ರಸ್ವಾಮಿ – ಶನಿ, ಗಣ – ದೇವ, ನಾಡಿ – ಮಧ್ಯ, ನಾಮಾಕ್ಷರ – ನಾ,ನೀ,ನೂ, ನೇ.  ಶರೀರಭಾಗ – ಮೂತ್ರಾಶಯ, ಗುಪ್ತಾಂಗ, ಮಲಾಶಯ, ಮೂತ್ರನಾಳ.

ರೋಗಗಳು :- ಸ್ತ್ರೀಯರಿಗೆ ಮಾಸಿಕ ತೊಂದರೆ, ರಕ್ತ ಕ್ಷೀಣತೆ, ನೋವು, ಮೂಲವ್ಯಾಧಿ, ಎಲುಬು ಮುರಿಯುವುದು, ಮಾಲಾವರೋಧ, ಮೂಗು ಸೋರುವುದು, ವಾಯು ಪ್ರಕೋಪ, ಸನ್ನೀಪಾತ ಜ್ವರ.

ಸಂರಚನೆ :- ದೃಢ ನಿಶ್ಚಯವಿರುವ ಶಕ್ತಿಶಾಲಿ, ಅಧಿಕಾರ ಪೂರ್ಣ, ಸ್ವಾರ್ಥಿ, ಹಿಂಸಾ ಪ್ರವೃತ್ತಿಯವರು, ಕ್ರೂರರು, ಕಠೋರರು, ಸೇಡು ತೀರಿಸಿಕೊಳ್ಳುವವರು, ಕೆಟ್ಟನಡತೆಯವರು, ರಹಸ್ಯ ಕಾಪಾಡುವವರು, ರಾತ್ರಿ ತಿರುಗಾಡುವವರು, ಪ್ರಯೋಗವಾದಿಗಳು, ಯಾತ್ರಾಪ್ರಿಯರು, ಲೋಹಕಾರರು, ಶಿವಭಕ್ತರು, ಕುಶಲರು, ಪರಾಕ್ರಮಿಗಳು, ಚರ್ಮ,ಉಣ್ಣೆ ವ್ಯಾಪಾರಿಗಳು ಕೆಲಸಗಾರರು, ವಿದೇಶ ಸಂಚಾರ ಮಾಡುವವರು, ವ್ಯವಸಾಯ ಮಾಡುವವರು, ಶೀತಪ್ರಿಯರು, ಮಾಂಸಾಹಾರಿಗಳು, ಗುಪ್ತ ಕಾರ್ಯಗಳಲ್ಲಿ ನಿಪುಣ ಆಗಬಹುದು.

ಉದ್ಯೋಗ ಮತ್ತು ವಿಶೇಷ :- ಇಂಜಿನಿಯರ, ಕಾಯಿದೆ ಪಂಡಿತ, ಔಷಧ ತಜ್ಞ, ವಾದ್ಯಯಂತ್ರ ನಿರ್ಮಾಪಕ, ಮುದ್ರಕ, ಕಾರ್ಮಿಕ, ವ್ಯಾಪಾರಿ, ಸ್ವಚ್ಛತಾ ಚಾಲಕ, ಸೇವಕ, ಕಠಿಣ ಕೆಲಸ ಮಾಡುವ, ದಂತ ವಿಶೇಷ ತಜ್ಞ, ನ್ಯಾಯಾಧೀಶ, ಎಲಬು ತಜ್ಞ, ಪರಾಕ್ರಮಿ ಕೆಲಸಗಾರ, ಕಲ್ಲಿದ್ದಲು ಗಣಿಗಾರ, ನಟ, ಕಾಮುಕ, ಸಾಮ್ಯವಾದಿ ಆಗಬಹುದಾಗಿದೆ.

ಮಂಗಳನ ರಾಶಿಯಲ್ಲಿ ಶನಿಯ ನಕ್ಷತ್ರದಲ್ಲಿ ಹುಟ್ಟಿದವರಿಗೆ ಉತ್ತಮ ಗುಣಗಳಿರುವವು, ಪ್ರಾಮಾಣಿಕ, ವಿಚಾರಶೀಲ, ಧರ್ಮಪ್ರೇಮಿ, ದರ್ಶನ ವೇದ ಪುರಾಣ ತಿಳಿಸಿದವರು, ತಂತ್ರಜ್ಞಾನಿಗಳು, ಜ್ಯೋತಿಷಿ, ಬಡ ಪರಿವಾರದಲ್ಲಿ ಹುಟ್ಟಿದವರು, ಕಾಲನಿಪುಣರು, ಪರಿಶ್ರಮಿ, ಚತುರರು ಬಾಲ್ಯದಲ್ಲಿ ದುಃಖ ಅನುಭವಿಸಿದರು, ಉನ್ನತಶೀಲ ಮನೋವಿಜ್ಞಾನದ ಚತುರನಿಸುವರು.

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಪ್ರಾಮಾಣಿಕರು, ಧಾರ್ಮಿಕರು ಉಚ್ಛ ವಿಚಾರವಿರುವವರು ಆಗಬಹುದಾಗಿದೆ. ಸೂರ್ಯನು ಈ ನಕ್ಷತ್ರದಲ್ಲಿ ಮಾರ್ಗಶೀರ್ಷ ಮಾಸದ ಪೂರ್ವಾರ್ಧದಲ್ಲಿ 11-25 ದಿನ ಇರುವವನು. ಶನಿ ಅಥವಾ ಮಂಗಳರು ಈ ನಕ್ಷತ್ರದಲ್ಲಿ ಇದ್ದಾಗ ವಿಶೇಷ ಫಲ ಉಂಟುಮಾಡುವರು. ಚಂದ್ರ ಮತ್ತು ಸೂರ್ಯರು ಈ ನಕ್ಷತ್ರದಲ್ಲಿದ್ದಾಗ ಮಾನಸಿಕ ಒತ್ತಡ ಪ್ರತಿ ಹಿಂಸೆಗಳಿಗೆ ಕಾರಣರಾಗಬಹುದಾಗಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಮಾಡಾಯಿಕಾವ್ ಕ್ಷೇತ್ರ ಪರಿಚಯ