ಮನೆ ಜ್ಯೋತಿಷ್ಯ ಅನುರಾಧ ನಕ್ಷತ್ರ ಮತ್ತು ಜಾತಕ

ಅನುರಾಧ ನಕ್ಷತ್ರ ಮತ್ತು ಜಾತಕ

0

ವಿಶೇಷ:

ಮಂಗಳನ ರಾಶಿ ಮತ್ತು ಶನಿಯ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಅನುರಾಧಾ ನಕ್ಷತ್ರದ ಜಾತಕರು ಉಚ್ಚ ವಿಚಾರದವರು, ಪ್ರಾಮಾಣಿಕತೆಯಿಂದ ಕಾರ್ಯ  ನಿರ್ವಹಿಸುವವರು, ಸ್ವಧರ್ಮ ಪ್ರೇಮಿ, ನವೀನ ವಿಚಾರಗಳನ್ನು ಸ್ವಾಗತಿಸುವವರು, ಜೋತಿಷ್ಯ ಪ್ರೇಮಿ, ಸಮ್ಮಾನ ಪ್ರಾಪ್ತಿಯ ಇಚ್ಚುಕ, ಬಡ ಕುಲದಲ್ಲಿ ಜನ್ಮ ತಳೆದವರು, ಪಿತೃ ಸುಖದಿಂದ ವಂಚಿತರು ಅಥವಾ ಅಲ್ಲಪಿತೃಸುಖ ಪ್ರಾಪ್ತಿಹೊಂದುವವರಗುತ್ತಾರೆ.

Join Our Whatsapp Group

ಇಂಥ ಜಾತಕರು ಕಾರ್ಯಸಿದ್ಧಿಯಲ್ಲಿ ಚತುರರು, ಕಲಾ-ನಿಪುಣ, ಅಧ್ಯಯನದಲ್ಲಿ ಪರಿಶ್ರಮಿ, ಬಾಲ್ಯದಲ್ಲಿ ದುಃಖ, ಉನ್ನತಿಶೀಲ, ಮನೋವಿಜ್ಞಾನ ಸಂಬಂಧಿ ವಿಷಯಗಳಲ್ಲಿ ಅನುರಕ್ತ ಮತ್ತು ಅನ್ಯರ ಮಾತುಗಳನ್ನು ಅರಿಯುವಂತೆ ಮಾಡುವವರೂ ಆಗುತ್ತಾರೆ. ಇವರು ಉಚ್ಚಮಟ್ಟದ ಕಾರ್ಯಕರ್ತರಾಗುತ್ತಾರೆ. ಸಂಗೀತದಲ್ಲಿ ವಿಶೇಷ ಅಭಿರುಚಿಯಿರುತ್ತದೆ, ಇವರು ಕಠಿಣ ಪರಿಶ್ರಮದಿಂದ ಧನ ಸಂಪಾದನೆ ಮಾಡುತ್ತಾರೆ. ಒಂದು ವೇಳೆ ಶನಿ ಶುಭ ಭಾವಸ್ಥನಾಗಿದ್ದರೆ, ಜಾತಕನು ಸ್ಥಿರ ಸಂಪತ್ತಿನ ಒಡೆಯ ಹಾಗೂ ಆಶ್ಚರ್ಯಜನಕ ಕಾರ್ಯಗಳಿಂದ ಎಲ್ಲರನ್ನೂ ಚಕಿತಗೊಳಿಸುವುದರಲ್ಲಿ ಸಮರ್ಥ ನಾಗುತ್ತಾನೆ.

ಸೂರ್ಯನು ಈ ನಕ್ಷತ್ರದ ಮೇಲೆ ಮಾರ್ಗಶಿರ ಮಾಸದ ಪೂರ್ವಾರ್ಧದಲ್ಲಿ ಸುಮಾರು ಹದಿಮೂರೂ ಕಾಲು ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳನೆಯ ದಿನ ಒಂದು ದಿನದ ಅವಧಿಗೆ ಈ ನಕ್ಷತ್ರದ ಮೇಲೆ ಭ್ರಮಣ ಮಾಡುತ್ತಾನೆ. ಈ ನಕ್ಷತ್ರದ ಮೇಲೆ ಶನಿ ಅಥವಾ ಮಂಗಳ ಭ್ರಮಣ ಮಾಡುತ್ತಿದ್ದರೆ, ಜನ್ಮಕುಂಡಲಿಯಲ್ಲಿ ಇವರು ಕಾರಕರಾಗಿರುವ ಭಾವದ ಅನುಸಾರ ಜಾತಕನಿಗೆ ಫಲಗಳು ಪ್ರಾಪ್ತಿಯಾಗುತ್ತವೆ. ಸೂರ್ಯ ಅಥವಾ ಚಂದ್ರನ ವಿಕಿರಣ ಪ್ರಭಾವ ಅನುರಾಧಾ ಜಾತಕರಿಗೆ

ಶುಭವಾಗುವುದಿಲ್ಲ. ಒಂದು ವೇಳೆ ಸೂರ್ಯ ಅಥವಾ ಚಂದ್ರ (ಪೂರ್ಣ ಬಲಿಷ್ಠ) ಈ ನಕ್ಷತ್ರ ಭಾಗದ ಮೇಲಿದ್ದರೆ, ಅನುರಾಧಾ ಜಾತಕನಿಗೆ ವಿಶೇಷ ಪ್ರಕಾರದ ಮಾನಸಿಕ ಉದ್ವೇಗಗಳ ವಿಚಿತ್ರ ಹಿಂಸೆಯ (ವ್ಯಾಕುಲತೆ) ಸ್ಥಿತಿಯ ಅನುಭವವಾಗುತ್ತದೆ.

* ಚರಣದ ಸ್ವಾಮಿಯ ಫಲ :

ಪ್ರಥಮ ಚರಣದ ಸ್ವಾಮಿ ಶನಿ-ಸೂರ್ಯ, ದ್ವಿತೀಯ ಚರಣದ ಸ್ವಾಮಿ ಶನಿ- ಬುಧ, ತೃತೀಯ ಚರಣದ ಸ್ವಾಮಿ ಶನಿ-ಶುಕ್ರ ಮತ್ತು ಚತುರ್ಥ ಚರಣದ ಸ್ವಾಮಿ ಶನಿ-ಮಂಗಳ

ಟಿಪ್ಪಣಿ : ಅನುರಾದಾ ನಕ್ಷತ್ರದ ಎಲ್ಲಾ ಚರಣಗಳು ಪ್ರಾಯಶಃ ವೃಶ್ಚಿಕ ರಾಶಿಯ ದಿಷ್ಠವೃತ್ತಿಗಳನ್ನು ಅಧಿಕ ತೀವ್ರಗೊಳಿಸುತ್ತವೆ.

* ಅನುರಾಧಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

ಈ ನಕ್ಷತ್ರದಲ್ಲಿ ಕಳೆದ ಆಭರಣ ಮೂರು ದಿನದಲ್ಲಿ ಪುನಃ ಪ್ರಾಪ್ತಿಯಾಗುತ್ತದೆ. ಜ್ವರ ಬಂದರೆ ಒಂದು ತಿಂಗಳು ಕ್ರೂರ, ಮಿತ್ರ ಸೂರ್ಯನಿಗೆ ಶಾಂತಿ ಮಾಡಿದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ. ಇದರಲ್ಲಿ ಋತುಮತಿಯಾಗುವುದು, ಮುಂಜಿ, ವಿವಾಹ, ಮುಂತಾದ ಕಾರ್ಯಗಳನ್ನು ಮಾಡುವುದು ಶುಭಕಾರಕ ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದ ಜಾತಕನು ಆಲೋಚನಪರ, 2ನೇ ಚರಣದಲ್ಲಿ ಕುಶಲವಿದ್ಯಾವಂತ, 3ನೇ ಚರಣದಲ್ಲಿ ಆಸತ್ಯ ನುಡಿದು ವಿಜಯಿ, ಅನುಕೂಲ ಜೀವನ ಸಂಗಾತಿಯ ಪ್ರಾಪ್ತಿ ಮತ್ತು 4ನೇ ಚರಣದಲ್ಲಿ ಬಡತನ ಮತ್ತು ಅಂತರಂಗ ಅಶುದ್ದಿಯಿರುತ್ತದೆ. ಶನಿಯ ದೆಶ 19 ವರ್ಷ 6 ತಿಂಗಳು ; 7,16,37,64 ಈ ವರ್ಷಗಳಲ್ಲಿ ರೋಗ ತಾಪತ್ರಯ ಕಳೆದುಳಿದರೆ ಪೂರ್ಣಾಯಸ್ಸು 80 ವರ್ಷಗಳು.