ಮನೆ ಉದ್ಯೋಗ ಯಾವುದೇ ಪದವಿ ಪಾಸಾದವರಿಗೆ ಎಲ್‌’ಐಸಿಯಲ್ಲಿ ಎಒಒ ಹುದ್ದೆಗಳು

ಯಾವುದೇ ಪದವಿ ಪಾಸಾದವರಿಗೆ ಎಲ್‌’ಐಸಿಯಲ್ಲಿ ಎಒಒ ಹುದ್ದೆಗಳು

0

ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ (ಎಲ್‌’ಐಸಿ) ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಉದ್ಯೋಗಾಂಕ್ಷಿಗಳಿಗೆ ಇದೀಗ ಒದಗಿ ಬಂದಿದೆ.

ಹೌದು ಎಲ್‌’ಐಸಿಯಲ್ಲಿ ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಆನ್‌’ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಬ್ಯಾಕ್‌’ಲಾಗ್ ಹುದ್ದೆಗಳು ಸೇರಿದಂತೆ ದೇಶದಾದ್ಯಂತ ಒಟ್ಟು 300 ‘ಎಲ್‌ಐಸಿ ಸಹಾಯಕ ಆಡಳಿತಾಧಿಕಾರಿ (ಜನರಲಿಸ್ಟ್) 31ನೇ ಬ್ಯಾಚ್’ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಜನವರಿ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಜನವರಿ 31 ಕೊನೆ ದಿನವಾಗಿದೆ, ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಎಸ್‌.ಸಿ, ಎಸ್‌.ಟಿ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ₹85 ಮತ್ತು ಇತರೆ ಅಭ್ಯರ್ಥಿಗಳಿಗೆ ₹700 ಅರ್ಜಿ ಶುಲ್ಕವಿದೆ.21 ವರ್ಷದಿಂದ 30 ವರ್ಷ ವಯೋಮಾನದ ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌’ಸಿ, ಎಸ್‌’ಟಿ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಈ ಹುದ್ದೆಗಳಿಗೆ ನೇಮಕವಾಗಿ ಪ್ರೊಬೇಷನರಿ ಅವಧಿ ಯಶಸ್ವಿಯಾಗಿ ಮುಗಿಸುವ ಅಭ್ಯರ್ಥಿಗೆ ಎಲ್ಲ ಕಡಿತವಾಗಿ 92ಸಾವಿರ ವರೆಗೆ ವೇತನ ಸಿಗಲಿದೆ.

ನೇಮಕಾತಿ ಪ್ರಕ್ರಿಯೆ ಹೇಗಿದೆ?

ಮೂರು ಹಂತಗಳಲ್ಲಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮೊದಲು ಕಂಪ್ಯೂಟರ್ ಆಧರಿತ ಪರೀಕ್ಷೆ ಇರುತ್ತದೆ. ಇದರಲ್ಲಿ ಎರಡು ಭಾಗ ಇರುತ್ತವೆ 1ಪೂರ್ವಭಾವಿ ಪರೀಕ್ಷೆ 2ಮುಖ್ಯ ಪರೀಕ್ಷೆ.

ಪೂರ್ವಭಾವಿ ಮುಖ್ಯಪರೀಕ್ಷೆ ಪಾಸಾದ ಅಭ್ಯರ್ಥಿಗಳನ್ನು 1:5 ಅನುಪಾದಲ್ಲಿ ಸಂದರ್ಶನಕ್ಕೆ ಕರೆಯಲಿದ್ದಾರೆ.

ಸಂದರ್ಶನ ಪಾಸಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಪಾಸಾಗಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌’ಲೈನ್ ಅರ್ಜಿ ಸಲ್ಲಿಸಲು www.licindia.in ವೆಬ್‌’ಸೈಟ್‌’ಗೆ ಭೇಟಿ ನೀಡಬಹುದು.