15% ರಷ್ಟು ಮಕ್ಕಳಲ್ಲಿ ಇನ್ ಫಾಂಟೈಲ್ ಕೋಲಿಕ್ ನೋವು ಕಂಡುಬರುತ್ತದೆ. ಇಂತಹ ನೋವಿಗೆ ಸ್ಪಷ್ಟವಾದ ಕಾರಣ ಗೊತ್ತಾಗುವುದಿಲ್ಲ. ಎರಡು ಕಾಲುಗಳನ್ನು ಹೊಟ್ಟೆಯೊಳಗೆ ಮಡಚಿಕೊಂಡು ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಕೆಲವು ಆಹಾರ ಪದಾರ್ಥಗಳಿಗೆ ಅಲರ್ಜಿಯಿರುವುದು ಕಾರಣವಾಗಿರುತ್ತದೆ.
ನಾರಿನಾಂಶವಿರುವ ಆಹಾರವನ್ನು ಹೆಚ್ಚಾಗಿ ಕೊಟ್ಟರೆ ಇಂತಹ ಹೊಟ್ಟೆ ನೋವು ಕಣ್ಮರೆಯಾಗುವ ಸಂಭವವಿದೆ.
ಅಪೆಂಡಿಸೈಟಿಸ್ :
ಅಪಂಡಿಸೈಟಿಸ್ ಹೊಟ್ಟೆ ನೋವು ಚಿಕ್ಕ ಮಕ್ಕಳಿಗೆ ಬರುವುದು. ಕಡಿಮೆ 10 ರಿಂದ 15 ವರ್ಷಗಳ ಮಧ್ಯಮ ವಯಸ್ಸಿನ ಮಕ್ಕಳಿಗೆ ಈ ಹೊಟ್ಟೆ ನೋವು ಬರುವುದು. ಹೆಚ್ಚು ಹಾಗಾಗಿ ಈ ವಯಸ್ಸಿನ ಮಕ್ಕಳು ಹೊಟ್ಟೆನೋವೆಂದಾಗ ಅಪೆಂಡಿಸೈಟಿಸ್ ಗಮನದಲ್ಲಿಸಿಕೊಳ್ಳಬೇಕು.
ಅಪಂಡಿಸೈಟಿಸ್ ಬಂದಾಗ ಜ್ವರವಿರುತ್ತದೆ. ಒಂದೆರಡು ಬಾರಿ ವಾಂತಿಯಾಗುತ್ತದೆ. ಏನನ್ನು ತಿನ್ನಬೇಕೆನಿಸುವುದಿಲ್ಲ. ಹೊಟ್ಟೆಯ ಸುತ್ತಲೂ ನೋಯುತ್ತಿರುತ್ತದೆ. ಸ್ವಲ್ಪಹೊತ್ತಿನ ನಂತರ ನಿಧಾನವಾಗಿ ಅಲ್ಲಿ ನೋವುಕಡಿಮೆಯಾಗಿ ಬಲ ಕಿಬ್ಬೊಟ್ಟೆಯಲ್ಲಿ ನೋವು ಜಾಸ್ತಿಆಗುತ್ತದೆ. ಅಪೆಂಡಿಸೈಟಿಸ್ ಲಕ್ಷಣಗಳು ದೊಡ್ಡವರಲ್ಲಿ ಕಂಡು ಬಂದಷ್ಟು. ಎರಡು ವರ್ಷದೊಳಗಿನ ಮಕ್ಕಳಲ್ಲಿ ಅಪೆಂಡೈಸೈಟಿಸ್ ಮತ್ತಷ್ಟು ಅಸ್ಪಷ್ಟವಾಗಿರುತ್ತದೆ. ಅಪೆಂಡಿಸೈಟಿಸ್ ಗೆ ಶಾಸ್ತ್ರಚಿಕಿತ್ಸೆ ಒಂದೇ ಮಾರ್ಗ.
ಮೂತ್ರನಾಳದ ಸೋಂಕು (ಯು.ಟಿ.ಐ) :
ಮೂತ್ರನಾಳದ ಸೋಂಕು (ಯುರಿನರಿ ಟ್ರ್ಯಾಕ್ಟ್ ಇನ್ ಫೆಕ್ಷನ್) ಎಳೆಯ ಮಕ್ಕಳಲ್ಲಿ ಚಿಕ್ಕಮಕ್ಕಳಲ್ಲಿ ಸದಾ ಕಾಣಿಸುತ್ತಿರುತ್ತದೆ. ಗಂಡು ಮಕ್ಕಳಿಗೆ ಶಿಶ್ನದ ಮುಂದೊಗಲು ಮುಚ್ಚಿಕೊಂಡಿದ್ದಾಗ ಮತ್ತಷ್ಟು ಜಾಸ್ತಿ. ಗಂಡುಮಕ್ಕಳಿಗಿಂತಲೂ ಹೆಣ್ಣುಮಕ್ಕಳಿಗೆ ಮೂತ್ರನಾಳದ ಸೋಂಕು ಹೆಚ್ಚು. ಈ ಸೋಂಕಿದ್ದಾಗ ಜ್ವರ ಬರುತ್ತದೆ. ವಾಂತಿ ಆಗಬಹುದು. ಹೊಟ್ಟೆಯಲ್ಲಿ ನೋವುಬರುತ್ತದೆ. ಸದಾ ಮೂತ್ರ ವಿಸರ್ಜನೆ ಬರುತ್ತಿರುತ್ತದೆ. ಉರಿಯಾಗುತ್ತದೆ. ಈ ಮೂತ್ರನಾಳದ ಸೋಂಕಿದ್ದಾಗ ಮೂತ್ರಪರೀಕ್ಷೆ ಮಾಡಿದರೆ, ಅದರಲ್ಲಿ ಕೀವಿನ ಕಣಗಳಿರುತ್ತದೆ. ಕೆಲವರಿಗೆ ಇಲ್ಲದಿಯೂ ಇರಬಹುದು. ಮೂತ್ರದ ಕಲ್ಚರ್ ಮಾಡಿದರೆ ಅದರಲ್ಲಿ ಸೋಂಕಿನ ರೋಗಾಣುಗಳು ಕಂಡುಬರುತ್ತದೆ. ಮೂತ್ರಪಿಂಡದಲ್ಲಿ ಕಲ್ಲು (ಯೂರಿನಲ್ಲಿ ಕ್ಯಾಲಿಕ್ಯುಲೈ) ಚಿಕ್ಕ ಮಕ್ಕಳಲ್ಲಿ ಸಹ ಕಾಣಬಹುದು. ಈ ಕಲ್ಲಿನಿಂದಲೂ ಹೊಟ್ಟೆ ನೋವು ಬರಬಹುದು.