ಮೈಸೂರು: ಮೈಸೂರಿನ ಹೂಟಗಳ್ಳಿಯ ಹೆಚ್.ಐ.ಜಿ 01, ಜಿ-03 ಮನೆ 06 ರ ನಿವಾಸಿ ಎ ಪಿ ಭೀಮಯ್ಯ(70) ಮನೆಯಿಂದ ಹೋದವರು ವಾಪಾಸ್ಸಾಗದೇ ನಾಪತ್ತೆಯಾಗಿದ್ದಾರೆ.
ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರು, ಮೈಸೂರು ನಗರ ಅಥವಾ ಪೊಲೀಸ್ ನಿರೀಕ್ಷಕರು ವಿಜಯನಗರ ಪೊಲೀಸ್ ಠಾಣೆ ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಮ್ ಗೆ ಸಂಪರ್ಕಿಸುವಂತೆ ಕೋರಿದೆ.
ವ್ಯಕ್ತಿಯ ಚಹರೆ: ಎತ್ತರ 168 ಸೆಂ.ಮೀ, ಗೋಧಿ ಮೈ ಬಣ್ಣ,ಕೋಲು ಮುಖ, ಸಾಧಾರಣ ಮೈಕಟ್ಟು, ಬ್ರೌನ್ ಕಲರ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ.
ಪ್ರಕರಣ-2
ಮಹದೇಶ್ವರ ಬಡಾವಣೆಯ 6ನೇ ಕ್ರಾಸ್ ನಲ್ಲಿರುವ ಮನೆ ನಂ-354 ರಿಂದ ರಾಜಶೇಖರ್ (75) ಕಳೆದ 15 ವರ್ಷಗಳಿಂದ ಕಾಣೆಯಾಗಿದ್ದಾರೆ.
ಚಹರೆ: 6 ಅಡಿ, ಕೋಲುಮುಖ, ಕಪ್ಪು ಕೂದಲು, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಪ್ರಕರಣ-3
ಬೆಳ್ಳಿಶೆಟ್ಟರು(95) 2020ರ ಅಕ್ಟೋಬರ್ 9 ರಂದು ಮನೆಯಿಂದ ಹೋದವರು ವಾಪಾಸ್ ಬರದೇ ನಾಪತ್ತೆಯಾಗಿದ್ದಾರೆ.
ಚಹರೆ: 152 ಸೆಂ.ಮೀ ಎತ್ತರ, ಬಿಳಿ ಕೂದಲು, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಬಿಳಿ ಬಣ್ಣದ ಪಂಚೆ, ಬಿಳಿ ಬಣ್ಣದ ಟವಲ್ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಪ್ರಕರಣ-4
2020ರ ಅಕ್ಟೋಬರ್ 12 ರಂದು ಮಹೇಶ್ ಎನ್.ಬಿ (14) ಮನೆಯಿಂದ ಆಚೆ ಕುಳಿತುಕೊಳ್ಳುತ್ತೇನೆಂದು ಹೋದವರು ಹಿಂತಿರುಗದೇ ವಾಪಾಸ್ ಬರದೇ ನಾಪತ್ತೆಯಾಗಿದ್ದಾರೆ.
ಚಹರೆ: 155 ಸೆಂ.ಮೀ ಎತ್ತರ, ಕಪ್ಪು-ಬಿಳುಪು ಕೂದಲು, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮತ್ತು ನೀಲಿ ಬಣ್ಣದ ಗೆರೆಗಳಿರುವ ಶರ್ಟ್, ನೀಲಿ ಬಣ‍್ಣದ ಲುಂಗಿ ಧರಿಸಿರುತ್ತಾರೆ. ಹಿಂದಿ, ಕನ್ನಡ ಮತ್ತು ತಮಿಳು ಮಾತನಾಡುತ್ತಾರೆ.
ಪ್ರಕರಣ-5
ಮಹದೇವ(32) ಎಂಬುವವರು ನಾಪತ್ತೆಯಾಗಿದ್ದಾರೆ
ಚಹರೆ: 165 ಸೆಂ.ಮೀ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕೆಂಪು ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಪ್ರಕರಣ-6
ಆಟೋ ಡ್ರೈವರ್ ಮತ್ತು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಡಿ.ಶಬರಿನಾದನ್ (38) ಆಟೋ ಸಾಲ ಕಟ್ಟಿಲ್ಲವಾದ್ದರಿಂದ ನೋಟಿಸ್ ಬಂದಿದ್ದು, ಮೊಬೈಲ್ ಸಾಲವನ್ನು ಕಟ್ಟಲಾಗದೇ ಕಾಣೆಯಾಗಿದ್ದಾನೆ.
ಚಹರೆ: 160 ಸೆಂ.ಮೀ ಎತ್ತರ, ಬಿಳಿ ಕೂದಲು, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಲ್ಡನ್ ಬಣ್ಣದ ಶರ್ಟ್ ಮತ್ತು ಕ್ರೀಂಮ ಪ್ಯಾಂಟ್ ಧರಿಸಿರುತ್ತಾರೆ. ಇಂಗ್ಲೀಷ್, ಕನ್ನಡ, ತಮಿಳು ಮತ್ತು ತೆಲುಗು ಮಾತನಾಡುತ್ತಾರೆ.
ಪ್ರಕರಣ-7
ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪಿ.ಆರ್. ಫ್ಯಾಕ್ಟರಿಯಿಂದ ಬೆಟ್ಟಪ್ಪ(60) ಹೋಗಿದ್ದು, ಇದುವರೆಗೆ ಪತ್ತೆಯಾಗಿರುವುದಿಲ್ಲ.
ಚಹರೆ: 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ತಲೆ ಕೂದಲು, ಕಪ್ಪು ಮೈಬಣ್ಣ, ನೀಲಿ ಮಿಶ್ರಿತ ತುಂಬು ತೋಳಿನ ಶರ್ಟ್, ಪಿಂಕ್ ಕಲರ್ ನ ಪ್ಯಾಂಡ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ಸಂಪರ್ಕಿಸಬೇಕಾದ ದೂ. ಸಂಖ್ಯೆ 0821-2418117, 2418317, 2418517, 0821-241833 ಅಥವಾ E-main ID- vijayanagarmyca ksp.gov.in ಗೆ ಮಾಹಿತಿ ನೀಡಬಹುದಾಗಿದೆ.














