ಮನೆ Uncategorized ಹಲವು ಬೇಡಿಕೆ ಈಡೇರಿಕೆಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಕೆ

ಹಲವು ಬೇಡಿಕೆ ಈಡೇರಿಕೆಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಕೆ

0

ಮೈಸೂರು: ತಾಲೂಕಿನ ತಳೂರು ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ರವರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಒತ್ತಾಯ ಪತ್ರ ಸಲ್ಲಿಸಲಾಯಿತು.

ಕೆಲವು ರಸಗೊಬ್ಬರ ಮಾರಾಟಗಾರರು ಯೂರಿಯಾ , ಡಿಎಪಿ, ಪೊ ಟ್ಟ್ಯಶ್ ,ಇನ್ನಿತರ ರಸಗೊಬ್ಬರಗಳನ್ನು ಮಾರಾಟಗಾರರು ದಾಸ್ತಾನು ಇದ್ದರೂ  ಇಲ್ಲವೆಂದು ಹೇಳಿ, ಹೆಚ್ಚು ಬೆಲೆಗಳಿಗೆ ಮಾರಾಟ ಮಾಡುತ್ತಿದ್ದು ಹಾಗೂ ಇವುಗಳು ಬೇಕಾದರೆ ಜೊತೆಗೆ ರೈತನಿಗೆ ಬೇಡವಾದ ಮೈಕ್ರೋನ್ಯೂಟ್ರೆಂಟ್ ತೆಗೆದುಕೊಂಡರೆ ಮಾತ್ರ ರಸಗೊಬ್ಬರ ಕೊಡುವುದಾಗಿ ಧಮಕಿ ಹಾಕುತ್ತಾರೆ. ರಸ ಗೊಬ್ಬರ ಮಾರಾಟಗಾರರು ಗೊಬ್ಬರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ರೈತರಿಗೆ ದ್ರೋಹ ಬಗೆದು ಕಿರುಕುಳ ನೀಡುತ್ತಿದ್ದಾರೆ. ರಸಗೊಬ್ಬರದ ಬೆಲೆ ದುಪ್ಪಟ್ಟು ಏರಿಕೆ ಆಗಿರುವುದು, ಬಿತ್ತನೆ ಬೀಜಗಳ ಅಭಾವ, ರೈತರಿಗೆ ಸಂಕಷ್ಟವನ್ನು ಉಂಟು ಮಾಡಿದೆ. ಇವರ ವಿರುದ್ದ ಕೃಷಿ ಇಲಾಖೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.

ಕಬ್ಬು ಬೆಳೆಗೆ ಫಸಲ್ ಭೀಮಾ ಬೆಳೆವಿಮೆ ಜಾರಿ ತರುವಂತೆ ಒತ್ತಾಯಿಸಲಾಗುತ್ತಿದೆ ಯಾವುದೇ ಕ್ರಮ ಜಾರಿಯಾಗಿಲ್ಲ. ಹನಿ ನೀರಾವರಿ ಉಪಕರಣಗಳಿಗೆ ಕೆಲವು ರಸಗೊಬ್ಬರ ಕೀಟನಾಶಕ ಗಳಿಗೆ ಜಿಎಸ್ಟಿ ವಿಧಿಸಿರುವ ಕಾರಣ ಬೆಲೆ ಏರಿಕೆಯಾಗಿ ರೈತರಿಗೆ ದುಬಾರಿಯಾಗುತ್ತದೆ ಕೃಷಿ ಸಂಬಂಧಿ ಉಪಕರಣಗಳಿಗೆ ಜಿಎಸ್ಟಿ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬ ಕೃಷಿ ಆದಿಕಾರಿ ನೇಮಕ ಮಾಡಿ ಸಕಾಲಕ್ಕೆ ರೈತರಿಗೆ ಮಾಹಿತಿ ಸಿಗುವಂತೆ ಆನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಲಾಯಿತು.

ಮನವಿ ಪತ್ರ ಸ್ವೀಕರಿಸಿದ ಸಚಿವರು ಸ್ಥಳದಲ್ಲೇ ಇದ್ದ ಕೃಷಿ ನಿರ್ದೇಶಕಿ ನಂದಿನಿ ಕುಮಾರಿ ರವರಿಗೆ ಕಬ್ಬು ಕಬ್ಬು ಬೆಳೆಯನ್ನು ಫಸಲ್ ಭೀಮಾ ವಿಮಾ ಯೋಜನೆಗೆ ಸೇರಿಸುವುದಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಜಾರಿಗೆ ತರುವುದಕ್ಕೆ ಸಾಧ್ಯವಿದೆಯೇ ಕೇಂದ್ರ ಸರ್ಕಾರ ಜಾರಿಗೆ ತರುವಂತೆ ಒತ್ತಾಯಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಿದ್ಧತೆ ಮಾಡಿ ಎಂದು ಸೂಚಿಸಿದರು.

ಹನಿ ನೀರಾವರಿ ಹಾಗೂ ಕೃಷಿ ಯಂತ್ರೋಪಕರಣಗಳ ಮೇಲಿನ ಜಿ ಎಸ್ಟಿ ಯನ್ನು ರದ್ದುಪಡಿಸಲು ಒತ್ತಾಯಿಸಿದಾಗ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಅಧಿಕಾರಿಯನ್ನು ತುರ್ತಾಗಿ ನೇಮಿಸಬೇಕೆಂದು ಒತ್ತಾಯಿಸಿದಾಗ ಕೃಷಿ ಡಿಪ್ಲೊಮಾ ಪಡೆದವರನ್ನು ಸದ್ಯದಲ್ಲೇ ನೇಮಕ ಮಾಡುವುದಾಗಿ ತಿಳಿಸಿದರು.

ಈ‌ ನಿಯೋಗದಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಕೂಡನಹಳ್ಳಿ ರಾಜಣ್ಣ, ಲಕ್ಷ್ಮಿಪುರ ವೆಂಕಟೇಶ್, ದೇವೇಂದ್ರ ಕುಮಾರ್ ಆರಾಧ್ಯ, ಪುಟ್ಟೇಗೌಡನ ಹುಂಡಿ ರಾಜು, ದೊಡ್ಡ ಕಾಟೂರು ಮಹದೇವಸ್ವಾಮಿ,ವರಕೋಡು ಜಯರಾಮೇಗೌಡ, ನಾಗೇಶ್, ಸಿಂಧುವಳ್ಳಿ ಬಸಪ್ಪ, ಬಾಲಣ್ಣ,ರವಿ, ಗುರುಸ್ವಾಮಿ, ವಾಜಮಂಗಲ ಮಹದೇವ್, ಮಹಾಲಿಂಗ ನಾಯ್ಕ, ಮರಿ ಚೆನ್ನಯ್ಯ, ನಿಂಗಶೆಟ್ಟರು, ರಾಜೀವ್, ತಿಮ್ಮಯ್ಯ, ನಾಗರಾಜು, ಶಿವಪ್ಪ, ಬನ್ನಳ್ಳಿಹುಂಡಿ ರಾಜೇಂದ್ರ, ಬರಡನಪುರ ಬಸವಣ್ಣ, ಇದ್ದರು.