ಮನೆ ಉದ್ಯೋಗ ಆಹಾರ ಮಂಡಳಿಯಲ್ಲಿ 5043 ಕೆಟಗರಿ 3 ಹುದ್ದೆಗೆ ಅರ್ಜಿ ಆಹ್ವಾನ

ಆಹಾರ ಮಂಡಳಿಯಲ್ಲಿ 5043 ಕೆಟಗರಿ 3 ಹುದ್ದೆಗೆ ಅರ್ಜಿ ಆಹ್ವಾನ

0

ಭಾರತೀಯ ಆಹಾರ ಮಂಡಳಿಯು ಕೆಟಗರಿ 3 ನಾನ್‌ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಬೃಹತ್ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಒಟ್ಟು 5043 ಹುದ್ದೆಗಳು ಖಾಲಿ ಇವೆ.

ಉತ್ತರ ವಲಯ : 2388 ಹುದ್ದೆಗಳು, ದಕ್ಷಿಣ ವಲಯ : 989 ಹುದ್ದೆಗಳು, ಪಶ್ಚಿಮ ವಲಯ : 768 ಹುದ್ದೆಗಳು, ಪೂರ್ವ ವಲಯ: 713 ಹುದ್ದೆಗಳು, ನಾರ್ಥ್‌ ಈಸ್ಟ್‌ ವಲಯ: 185 ಹುದ್ದೆಗಳು ಖಾಲಿ ಇವೆ.

ಜೂನಿಯರ್ ಇಂಜಿನಿಯರ್ (ಸಿವಿಲ್), ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್, ಮೆಕ್ಯಾನಿಕಲ್), ಸ್ಟೆನೋಗ್ರಾಫರ್ ಗ್ರೇಡ್ 2, ಅಸಿಸ್ಟಂಟ್ -3 (ಜೆನೆರಲ್), ಅಸಿಸ್ಟಂಟ್ -3 (ಅಕೌಂಟ್), ಅಸಿಸ್ಟಂಟ್ -3 (ಟೆಕ್ನಿಕಲ್), ಅಸಿಸ್ಟಂಟ್ -3 (ಡಿಪಾಟ್), ಅಸಿಸ್ಟಂಟ್ -3 (ಹಿಂದಿ) ವಿಭಾಗದಲ್ಲಿ ಹುದ್ದೆಗಳಿವೆ.

ಜೂನಿಯರ್ ಇಂಜಿನಿಯರ್ (ಸಿವಿಲ್) : ಬಿಇ ಇನ್ ಸಿವಿಲ್ / ಸಿವಿಲ್ ಡಿಪ್ಲೊಮ ಜತೆಗೆ 1 ವರ್ಷ ಕಾರ್ಯಾನುಭವ, ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್, ಮೆಕ್ಯಾನಿಕಲ್) : ಬಿಇ ಇನ್ ಸಿವಿಲ್ / ಇಲೆಕ್ಟ್ರಿಕಲ್ ಅಥವಾ ಸಿವಿಲ್ / ಇಲೆಕ್ಟ್ರಿಕಲ್ ಡಿಪ್ಲೊಮ ಜತೆಗೆ 1 ವರ್ಷ ಕಾರ್ಯಾನುಭವ, ಸ್ಟೆನೋಗ್ರಾಫರ್ ಗ್ರೇಡ್ 2: ಡಿಗ್ರಿ ಪಾಸ್. ಶಾರ್ಟ್‌ಹ್ಯಾಂಡ್‌ ಟೈಪಿಂಗ್ ತರಬೇತಿ ಪಡೆದಿರಬೇಕು, ಅಸಿಸ್ಟಂಟ್ -3 (ಜೆನೆರಲ್): ಪದವಿ ಪಾಸ್, ಅಸಿಸ್ಟಂಟ್ -3 (ಅಕೌಂಟ್): ಕಾಮರ್ಸ್‌ ಪದವಿ, ಅಸಿಸ್ಟಂಟ್ -3 (ಟೆಕ್ನಿಕಲ್): ಬಿಎಸ್ಸಿ ಇನ್ ಬಾಟನಿ / ಜೂವಾಲಜಿ / ಬಯೋ ಟೆಕ್ನಾಲಜಿ / ಬಯೋ ಕೆಮಿಸ್ಟ್ರಿ / ಮೈಕ್ರೋಬಯೋಲಜಿ / ಫುಡ್ ಸೈನ್ಸ್‌, ಅಸಿಸ್ಟಂಟ್ -3 (ಡಿಪಾಟ್): ಡಿಗ್ರಿ, ಅಸಿಸ್ಟಂಟ್ -3 (ಹಿಂದಿ): ಹಿಂದಿ ವಿಷಯದಲ್ಲಿ ಡಿಗ್ರಿ ಪಡೆದಿರಬೇಕು.

ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಸರ್ಕಾರಿ ನಿಯಮದ ಪ್ರಕಾರ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತದ ಆನ್‌ಲೈನ್‌ ಪರೀಕ್ಷೆ ಇರುತ್ತದೆ. ಫೇಸ್‌ -1 ಆನ್‌ಲೈನ್‌ ಪರೀಕ್ಷೆಯು 100 ಅಂಕಗಳಿಗೆ 100 ಪ್ರಶ್ನೆಗಳನ್ನು ಹೊಂದಿರುತ್ತದೆ. 60 ನಿಮಿಷ ಪರೀಕ್ಷೆ ಇರುತ್ತದೆ. ಫೇಸ್‌-2 ಪರೀಕ್ಷೆಯು ಸ್ಟೆನೋಗ್ರಾಫರ್ ಹುದ್ದೆಗೆ ಟೈಪಿಂಗ್ ಟೆಸ್ಟ್‌ ಇರುತ್ತದೆ. ಇತರೆ ಹುದ್ದೆಗಳಿಗೆ ಎರಡು ಪೇಪರ್‌ ಇರಲಿದ್ದು, ಪೇಪರ್-1 ಪರೀಕ್ಷೆ 90 ನಿಮಿಷ, ಪೇಪರ್-2 ಪರೀಕ್ಷೆ 60 ನಿಮಿಷ ಇರುತ್ತದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್‌ 5 ಕೊನೆಯ ದಿನ. ಇತರೆ ಹೆಚ್ಚಿನ ಮಾಹಿತಿಗಳಿಗೆ ಭಾರತೀಯ ಆಹಾರ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://www.fci.gov.in/ ಗೆ ಭೇಟಿ ನೀಡಬಹುದು.