ಕೇಂದ್ರ ಇಂಧನ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ (PGCIL) ‘ಡಿಪ್ಲೊಮಾ ಟ್ರೈನಿ’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 211 ಡಿಪ್ಲೋಮಾ ಟ್ರೈನಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದ್ದು www.powergrid.in ನಲ್ಲಿ ಇದೇ ಡಿಸೆಂಬರ್ 31ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.
ಡಿಪ್ಲೊಮಾ ಎಲೆಕ್ಟ್ರೀಕಲ್, ಡಿಪ್ಲೊಮಾ ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್ ಡಿಪ್ಲೊಮಾ ಕೋರ್ಸ್‌ನ್ನು ಶೇ 70 ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸದೇ ಬಿ.ಇ, ಬಿ.ಟೆಕ್, ಎಂ.ಟೆಕ್ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡ 27 ವರ್ಷ ಒಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
ಎಸ್.ಸಿ/ಎಸ್’ಟಿ, ಒಬಿಸಿ ವರ್ಗದವರಿಗೆ ವಯಸ್ಸಿನಲ್ಲಿ ಸಡಿಲಿಕೆ ಇದೆ. ಅರ್ಜಿ ಸಲ್ಲಿಕೆ ಶುಲ್ಕ ₹300.ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ 2 ಗಂಟೆಯ ಪರೀಕ್ಷೆ ಇರುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ.
ಟೆಕ್ನಿಕಲ್ ನಾಲೆಡ್ಜ್ ಟೆಸ್ಟ್ ಎಂಬ ಒಂದು ಭಾಗಕ್ಕೆ 120 ಅಂಕ ಹಾಗೂ ಆಪ್ಟಿಟುಡ್ ಟೆಸ್ಟ್ ಎಂಬ ಇನ್ನೊಂದು ಭಾಗಕ್ಕೆ 50 ಅಂಕಗಳಿರುತ್ತವೆ. 4 ನಕಾರಾತ್ಮಕ ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ.ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಡಿಪ್ಲೊಮಾದಲ್ಲಿನ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
PGCIL ನಲ್ಲಿ ಡಿಪ್ಲೊಮಾ ಟ್ರೈನಿ ಎಂದು ಆಯ್ಕೆಯಾದವರು ಒಂದು ವರ್ಷ ತರಬೇತಿ ಪೂರೈಸಬೇಕು. ಈ ಅವಧಿಯಲ್ಲಿ ಪ್ರತಿ ತಿಂಗಳು ₹27,000 ಗೌರವಧನ ಇರುತ್ತದೆ. ನಂತರ ಯಶಸ್ವಿಯಾಗಿ ತರಬೇತಿ ಪೂರೈಸಿದವರನ್ನು PGCIL ನಲ್ಲಿ ಜೂನಿಯರ್ ಎಂಜಿನಿಯರ್‌ಗಳು ಎಂದು ಬಡ್ತಿ ನೀಡಲಾಗುತ್ತದೆ. ಜೂನಿಯರ್ ಎಂಜಿನಿಯರ್‌ಗಳಿಗೆ ಪ್ರತಿ ತಿಂಗಳು ಗರಿಷ್ಠ ₹1.27 ಲಕ್ಷ ಸಂಬಳ ನಿಗದಿಗೊಳಿಸಲಾಗಿದೆ.