ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ವಿಜ್ಞಾನಿ/ಇಂಜಿನಿಯರ್-SD, ವಿಜ್ಞಾನಿ/ಎಂಜಿನಿಯರ್-SC ಹುದ್ದೆಗಳನ್ನು ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ vssc.gov.in ಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜುಲೈ 21ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಹುದ್ದೆಗಳು: ವಿಜ್ಞಾನಿ/ಇಂಜಿನಿಯರ್-SD, ವಿಜ್ಞಾನಿ/ಎಂಜಿನಿಯರ್-SC
ಖಾಲಿ ಇರುವ ಹುದ್ದೆಗಳು: 61
ವಿದ್ಯಾರ್ಹತೆ: M.E/M.Tech ಅಥವಾ M.S/M.Sc, BE/B.Tech, B.Sc
ವೇತನ: 56,100 – 2,08,700 ರೂ. ತಿಂಗಳಿಗೆ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 21-ಜುಲೈ-2023
ಅರ್ಜಿ ಸಲ್ಲಿಕೆ ವಿಧಾನ
ಅರ್ಜಿಗಳನ್ನು ಇಸ್ರೋ ಲೈವ್ ರಿಜಿಸ್ಟರ್ ಪೋರ್ಟಲ್ ಮೂಲಕ ಮಾತ್ರ ಆನ್ ಲೈನ್ ನಲ್ಲಿ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ನೋಂದಣಿಗಳನ್ನು ISRO ಲೈವ್ ರಿಜಿಸ್ಟರ್ ಪೋರ್ಟಲ್ isro.gov.in ನಲ್ಲಿ ಜುಲೈ 21ರಂದು ಅಥವಾ ಮೊದಲು ನೋಂದಾಯಿಸಿಕೊಳ್ಳಬೇಕು.
ಅರ್ಜಿ ಸಲ್ಲಿಕೆ ಶುಲ್ಕ
ಸೈಂಟಿಸ್ಟ್/ಇಂಜಿನಿಯರ್-ಎಸ್ ಡಿ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಅಗತ್ಯವಿಲ್ಲ.
ಸೈಂಟಿಸ್ಟ್/ಇಂಜಿನಿಯರ್-ಎಸ್ಸಿ ಹುದ್ದೆಗೆ ಅರ್ಜಿ ಶುಲ್ಕ ರೂ.750.
ಅರ್ಹತೆಗಳು
ವಾತಾವರಣ ವಿಜ್ಞಾನ ಅಥವಾ ಬಾಹ್ಯಾಕಾಶ ವಿಜ್ಞಾನ ಅಥವಾ ಗ್ರಹ ವಿಜ್ಞಾನದಲ್ಲಿ ಪರಿಣತಿ ಹೊಂದಿರುವ ವಿಷಯಗಳೊಂದಿಗೆ M.E/M.Tech ಅಥವಾ M.S/M.Sc, BE/B.Tech, B.Sc ಪೂರ್ಣಗೊಳಿಸಿದ ಅಭ್ಯರ್ಥಿಗಳು ವಿಜ್ಞಾನಿ/ಎಂಜಿನಿಯರ್-SD ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ಲಿಖಿತ ಪರೀಕ್ಷಾ ಕೇಂದ್ರಗಳು
ಮಾನ್ಯವಾದ ಅರ್ಜಿಗಳನ್ನು ಸಲ್ಲಿಸಿದವರನ್ನು ಲಿಖಿತ ಪರೀಕ್ಷೆಗೆ ಕರೆಯಲಾಗುವುದು. ಲಿಖಿತ ಪರೀಕ್ಷೆಯನ್ನು ಅಹಮದಾಬಾದ್, ಚೆನ್ನೈ, ಎರ್ನಾಕುಲಂ, ಹೈದರಾಬಾದ್ ಮತ್ತು ತಿರುವನಂತಪುರಂನಲ್ಲಿ ನಡೆಸಲಾಗುವುದು.
ವೇತನ ಶ್ರೇಣಿ
ಸೈಂಟಿಸ್ಟ್/ಇಂಜಿನಿಯರ್-ಎಸ್ ಡಿ – ರೂ.67,700 – ರೂ.2,08,700.
ಸೈಂಟಿಸ್ಟ್/ಇಂಜಿನಿಯರ್-ಎಸ್ ಸಿ – ರೂ.56,100 ರಿಂದ ರೂ.1,77,500.