ಮನೆ ಉದ್ಯೋಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ​ನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ​ನ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಮೂಲಕ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

ಸಂಸ್ಥೆಯ ಹೆಸರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( HAL ) ಹುದ್ದೆಗಳ ಸಂಖ್ಯೆ: 2 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್

ಹುದ್ದೆಗಳ ವಿಭಾಗ:

ಸೀನಿಯರ್ ಮ್ಯಾನೇಜರ್ (ಸೈಬರ್ ಭದ್ರತೆ)- 1 ಹುದ್ದೆ

ಮ್ಯಾನೇಜರ್ (ಸೈಬರ್ ಸೆಕ್ಯುರಿಟಿ)- 1 ಹುದ್ದೆ

ಶೈಕ್ಷಣಿಕ ಅರ್ಹತೆ:

HALನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ ECE/CSE/IT/ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್, ಸ್ನಾತಕೋತ್ತರ ಪದವಿಯಲ್ಲಿ BE ಅಥವಾ B.Tech ಪೂರ್ಣಗೊಳಿಸಿರಬೇಕು .

ವಯೋಮಿತಿ:

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 29-Aug-2023 ರಂತೆ 45 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:

OBC (NCL) ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

PwBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:

ಜನರಲ್​ ಅಭ್ಯರ್ಥಿಗಳಿಗೆ: ರೂ.500/-

SC/ST/PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇಲ್ಲ.

ಮಾಸಿಕ ವೇತನ:

ಸೀನಿಯರ್ ಮ್ಯಾನೇಜರ್ (ಸೈಬರ್ ಭದ್ರತೆ)-ರೂ.70000 ರಿಂದ ರೂ. 200000/-

ಮ್ಯಾನೇಜರ್ (ಸೈಬರ್ ಸೆಕ್ಯುರಿಟಿ)- ರೂ.60000 ರಿಂದ ರೂ. 180000/-

ಪ್ರಮುಖ ದಿನಾಂಕಗಳು:

ಆಫ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-ಆಗಸ್ಟ್-2023

ಅರ್ಜಿ ಸಲ್ಲಿಸಬೇಕಾದ ವಿಳಾಸ:

Chief Manager (HR), Recruitment Section, Hindustan Aeronautics Limited, Corporate Office, 15/1, Cubbon Road, Bangalore-560001.

ಅಧಿಕೃತ ವೆಬ್‌ ಸೈಟ್: hal-india.co.in