ಮೈಸೂರು: ಟಿ ನರಸೀಪುರ ಪುರಸಭೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ನಗರ ವಸತಿ ಯೋಜನೆಗಳಲ್ಲಿ ಇದುವರೆಗೂ ಮನೆ ನಿರ್ಮಿಸಿಕೊಳ್ಳದೆ ಇರುವ ಫಲಾನುಭವಿಗಳು ಮನೆ ನಿರ್ಮಿಸಲು ಇಚ್ಛಿಸಿದಲ್ಲಿ ಜುಲೈ 20ರ ಒಳಗೆ ಪುರಸಭೆ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಬಹುದು.
ಡಾ|| ಬಿ.ಆರ್. ಅಂಬೇಡ್ಕರ್ ನಗರ ವಸತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಅಡಿ 2015-16ನೇ ಸಾಲಿ ನಿಂದ 2017-18 ಹಾಗೂ 2021- 22ನೇ ಸಾಲಿನವರೆಗೆ ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ ಇದುವರೆಗೂ ಹಲವಾರು ಫಲಾನುಭವಿಗಳು ಮನೆಯನ್ನು ನಿರ್ಮಿಸಿಕೊಂಡಿಲ್ಲ. ಹೀಗಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಜಿಪಿಎಸ್ ಮಾಡಿಸುವಂತೆ ತಿಳಿಸಲಾಗಿತ್ತು.
ಆದಾಗ್ಯೂ ಬಹುತೇಕ ಫಲಾನುಭವಿಗಳು ಮನೆ ನಿರ್ಮಾಣ ಮಾಡಿರುವುದಿಲ್ಲ.
ಫಲಾನುಭವಿಗಳು ಮನೆ ನಿರ್ಮಿಸಲು ಇಚ್ಛಿಸಿದಲ್ಲಿ ಜುಲೈ 20ರ ಒಳಗೆ ಪುರಸಭೆ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮಾತ್ರ ಸಹಾಯಧನ ನೀಡಲಾಗುವುದು ಇಲ್ಲದಿದ್ದಲ್ಲಿ ಫಲಾನುಭವಿ ಆಯ್ಕೆಯನ್ನು ರದ್ದು ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ವಸತಿ ಶಾಖೆ ಭೇಟಿ ನೀಡುವಂತೆ ಟಿ ನರಸೀಪುರ ಪುರಸಭೆಯ ಮುಖ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.